ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಳೆಗಟ್ಟಿದ ರಾಯಚೂರು ನವರಾತ್ರಿ ಉತ್ಸವ

ವಿವಿಧ ದೇವಸ್ಥಾನಗಳಲ್ಲಿ ಪೂಜೆ; ಅಂಬ ಭವಾನಿಯ ದೇವಿಯ ಪ್ರತಿಷ್ಠಾ‍ಪನೆ
Published : 7 ಅಕ್ಟೋಬರ್ 2024, 4:44 IST
Last Updated : 7 ಅಕ್ಟೋಬರ್ 2024, 4:44 IST
ಫಾಲೋ ಮಾಡಿ
Comments
ರಾಯಚೂರಿನ ಭಂಗಿಕುಂಟಾ (ಬ್ರೇಸ್ತವಾರಪೇಟೆ) ಭವಾನಿ ವೃತ್ತದಲ್ಲಿ ವೀರಶೈವ ಗೌಳಿ ಸಮಾಜದ ವತಿಯಿಂದ ಶರನ್ನವರಾತ್ರಿಯ ಅಂಗವಾಗಿ ಅಂಬಾ ಭವಾನಿ ಹಾಗೂ ಘಟಸ್ಥಾಪನಾ ಪ್ರತಿಷ್ಠಾಪನೆ ಮಾಡಲಾಯಿತು. ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ರಾಯಚೂರಿನ ಭಂಗಿಕುಂಟಾ (ಬ್ರೇಸ್ತವಾರಪೇಟೆ) ಭವಾನಿ ವೃತ್ತದಲ್ಲಿ ವೀರಶೈವ ಗೌಳಿ ಸಮಾಜದ ವತಿಯಿಂದ ಶರನ್ನವರಾತ್ರಿಯ ಅಂಗವಾಗಿ ಅಂಬಾ ಭವಾನಿ ಹಾಗೂ ಘಟಸ್ಥಾಪನಾ ಪ್ರತಿಷ್ಠಾಪನೆ ಮಾಡಲಾಯಿತು. ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಬ್ರೇಸ್ತವಾರಪೇಟೆಯಲ್ಲಿ ಉಪ್ಪಾರವಾಡಿ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಆಂಜನೇಯ ವಾಹನೋತ್ಸವ ಅಂಗವಾಗಿ ಬೆಳಗ್ಗೆ ಸುಪ್ರಭಾತ ಸೇವೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಬ್ರೇಸ್ತವಾರಪೇಟೆಯಲ್ಲಿ ಉಪ್ಪಾರವಾಡಿ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಆಂಜನೇಯ ವಾಹನೋತ್ಸವ ಅಂಗವಾಗಿ ಬೆಳಗ್ಗೆ ಸುಪ್ರಭಾತ ಸೇವೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ನಶಿಸುತ್ತಿರುವ ಸಂಸ್ಕೃತಿ ಉಳಿಸಿ: ಎ.ಪಾಪಾರೆಡ್ಡಿ
ರಾಯಚೂರು: ಪ್ರಸ್ತುತ ಕಾಲಘಟ್ಟದಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಮತ್ತು ಸಾಂಸ್ಕೃತಿಕ ಕಲೆಯನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಸಂರಕ್ಷಣೆ ಮಾಡುವುದು ಅತ್ಯಂತ ಅವಶ್ಯಕತೆ ಇದೆ ಎಂದು ಮಾಜಿ ಶಾಸಕ ಹಾಗೂ ಮುನ್ನೂರುಕಾಪು ಸಮಾಜದ ಮುಖಂಡ ಎ.ಪಾಪಾರೆಡ್ಡಿ ಹೇಳಿದರು.‌  ನವರಾತ್ರಿ ಉತ್ಸವದ ಅಂಗವಾಗಿ ಭಾನುವಾರ ನಗರದ  ಗದ್ವಾಲ್ ರಸ್ತೆಯಲ್ಲಿ ಮಾತಾ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ 3ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ ಎಲ್ಲಾ ಸಮುದಾಯದ ಜನರು ಇಂತಹ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಲ್ಲಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ತಿಳಿಸಿದರು. ಈ ಹಿಂದೆ ಬ್ರಾಹ್ಮಣ ವೈಶ್ಯ ಸಮುದಾಯಗಳಿಗೆ ಮಾತ್ರ ಸೀಮಿತವಾಗಿದ್ದ‌ ಸಾಂಸ್ಕೃತಿಕ ಕಾರ್ಯಕ್ರಮಗಳು ಮುನ್ನೂರುಕಾಪು‌ ಸಮಾಜ ಮುಂಗಾರು ಸಾಂಸ್ಕೃತಿಕ ಹಬ್ಬ ಹಾಗೂ ನವರಾತ್ರಿ ಉತ್ಸವದ ಮೂಲಕ ನಶಿಸುತ್ತಿರುವ ಗ್ರಾಮೀಣ ಕಲೆ ಸಂಸ್ಕೃತಿ ರಕ್ಷಣೆಗೆ ಮುಂದಾಗಿದೆ. ನವರಾತ್ರಿ ದಸರ ಉತ್ಸವ ಕೇವಲ ಮೈಸೂರು ಬೆಂಗಳೂರು ಭಾಗ ಸೀಮಿತ ಎಂಬ‌ ಭಾವನೆ ತೊರೆದು ಗಡಿ‌ಭಾಗ ರಾಯಚೂರಿನಲ್ಲಿ ಮುನ್ನೂರುಕಾಪು‌ ಸಮಾಜದಿಂದ ಕಳೆದ 24 ವರ್ಷಗಳಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಮೂಲಕ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ಕುಸ್ತಿ ಇತರೆ ಗ್ರಾಮೀಣ ಕಲೆ ಮೂಲಕ  ಸಾಂಸ್ಕೃತಿಕ ತಂಡಗಳಿಗೆ ವೇದಿಕೆ ಕಲ್ಪಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಸೋಮವಾರಪೇಟೆ ಹಿರೇಮಠದ  ಪೀಠಾಧಿಪತಿ ಅಭಿನವ ರಾಚೋಟಿ ಶಿವಾಚಾರ್ಯ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎ.ಪಾಪಾರೆಡ್ಡಿ ಮತ್ತು ಬೆಲ್ಲಂ ನರಸರೆಡ್ಡಿ ಇವರಿಬ್ಬರು ಮುನ್ನೂರು ಕಾಪು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇವರಿಬ್ಬರ ನೇತೃತ್ವದಲ್ಲಿ  ಮುನ್ನೂರು ಕಾಪು ಸಮಾಜ ಬಲಿಷ್ಠ ಸಮಾಜವನ್ನಾಗಿ ಗುರುತಿಸಿಕೊಂಡಿದೆ. ಮುನ್ನೂರು ಕಾಪು ಸಮಾಜದಿಂದ ನಡೆಯುತ್ತಿರುವ ಮುಂಗಾರು‌ ಸಾಂಸ್ಕೃತಿಕ ಹಬ್ಬ  ನವರಾತ್ರಿ ಉತ್ಸವ ಅತ್ಯಂತ ವೈಭವಕರಣದಿಂದ ಇಡೀ ರಾಜ್ಯವೇ ಜಿಲ್ಲೆಯನ್ನು ಗುರುತಿಸುವಂತೆ ಮಾಡಿದೆ ಎಂದು ಹೇಳಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತುಮಕೂರು ರಾತಿಕ ಸಾಗರ್ ಮತ್ತು ಎಸ್ ಎಸ್ ಆರ್ ಜಿ ಎಸ್ ಆರ್ ಕೆ ಬಿ ಎಡ್  ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಮೂಲಕ ಜನರ ಮೆಚ್ಚಿಗೆಗೆ ಪಾತ್ರರಾದರು. ಧಾರ್ಮಿಕ ಮತ್ತು ಗ್ರಾಮೀಣ ಸೊಗಡಿನ ನೃತ್ಯ ರೂಪಕಗಳನ್ನು  ಪ್ರದರ್ಶಿಸಲಾಯಿತು. ಚನ್ನಬಸವ ಹಿರೇಮಠ ಅವರು ಉಪನ್ಯಾಸ ಕಾರ್ಯಕ್ರಮ ನಡೆಸಿದರು. ಮುನ್ನೂರುಕಾಪು ಸಮಾಜದ ಹಿರಿಯ ಮುಖಂಡ ಬೆಲ್ಲಂ ನರಸರೆಡ್ಡಿ ಸಾವಿತ್ರಿ ಪುರುಷೋತ್ತಮ್ ಜಗನಾಥ್ ಕುಲಕರ್ಣಿ ರಾಳ್ಳ ತಿಮ್ಮಾರೆಡ್ಡಿ ಕೋಶರೆಡ್ಡಿ ಕುಕ್ಕಲ್ ನರಸಿಂಹಲು ವೈ ಗೋಪಾಲರೆಡ್ಡಿ ಯು. ಲಿಂಗರೆಡ್ಡಿ ನಂದಕಟ್ಟುಮನಿ ಆರ್ ಕೆ ಅಮರೇಶ  ಶ್ರೀಕಾಂತ್ ವಕೀಲರುಜಗದೀಶ್ ಗುಪ್ತ ಉದಯಕುಮಾರ ಯಾದವ್ ಅರವಿ ನಾಗನಗೌಡ ಪಿ. ಶ್ರೀನಿವಾಸ್ ರೆಡ್ಡಿ ಮುನ್ನೂರು ಕಾಪು ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT