ಚನ್ನಪಟ್ಟಣ (ರಾಮನಗರ): ‘ನಿಮ್ಮ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ. ನಾನೇನು ಗಾಲಿಕುರ್ಚಿ ಅಥವಾ ಆಂಬುಲೆನ್ಸ್ನಲ್ಲಿ ಬಂದಿಲ್ಲ. ನಾನು ಚನ್ನಾಗಿದ್ದೇನೆಂದು ತೋರಿಸಲು ಬಂದಿದ್ದೇನೆ. ಕಟುಕರಿಗೆ ಕಣ್ಣೀರು ಬರುವುದಿಲ್ಲ. ಹೃದಯವಿರುವವರಿಗೆ ಮಾತ್ರ ಕಣ್ಣೀರು ಬರುತ್ತದೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ತಮ್ಮ ಆರೋಗ್ಯ ಕುರಿತು ಅಣಕವಾಡಿದವರಿಗೆ ತಿರುಗೇಟು ನೀಡಿದರು.

ತಾಲ್ಲೂಕಿನ ವಿರುಪಾಕ್ಷಿಪುರ ಸೇರಿದಂತೆ ವಿವಿಧೆಡೆ ಮಂಗಳವಾರ ನಡೆದ ಪ್ರಚಾರ ಸಭೆಯಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಮತಯಾಚಿಸಿದ ಅವರು, ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಸಹಾಯಕರಿಬ್ಬರ ನೆರವಿನಿಂದ ವೇದಿಕೆ ಏರಿ ಮಹಾರಾಜ ಕುರ್ಚಿಯಲ್ಲಿ ಆಸೀನರಾಗಿಯೇ ಭಾಷಣ ಮಾಡಿದರು. ಅವರ ಬಲಗೈನಲ್ಲಿ ಡ್ರಿಪ್ ಕ್ಯಾನಲ್ ಬ್ಯಾಂಡೇಜ್ ಎದ್ದು ಕಾಣುತ್ತಿತ್ತು.

‘ನನಗೀಗ 92 ವರ್ಷ. ಮಂಡಿ ನೋವು. ಎದ್ದು ನಿಲ್ಲಲಾಗುವುದಿಲ್ಲ. ಎಸ್.ಎಂ.ಕೃಷ್ಣ ಮತ್ತು ನಾನು ಒಂದೇ ವಯಸ್ಸಿನವರು. ಆದರೂ, ಕೆಲಸ ಮಾಡುತ್ತಿದ್ದೇವೆ. ದೇಹಕ್ಕೆ ವಯಸ್ಸಾಗುತ್ತದೆಯೇ ಹೊರತು, ಇಚ್ಛಾಶಕ್ತಿಗಲ್ಲ. ನಿಮ್ಮ ಆಶೀರ್ವಾದವಿದ್ದರೆ ಶತಾಯುಷಿ ಆಗುತ್ತೇನೆ’ ಎಂದ ಅವರು, ‘ಕಾಂಗ್ರೆಸ್ನವರಿಗೆ ನನ್ನ ಆರೋಗ್ಯದ ಚಿಂತೆ. ಹಿರಿಯರಿಗೆ ಗೌರವ ಕೊಡುವ ಸೌಜನವ್ಯೂ ಅವರಿಗಿಲ್ಲ’ಎಂದು ಕುಟುಕಿದರು.

‘ಉಪ ಚುನಾವಣೆ ಒಳ ರಾಜಕೀಯ ಏನೆಲ್ಲ ನಡೆದಿದೆ ಎಂಬುದು ನಿಮಗೆ ತಿಳಿದಿದೆ. ದೇವೇಗೌಡರ ಕೈ ನಡುಗುತ್ತವೆ, ಅವರು ಪ್ರಚಾರಕ್ಕೆ ಬರುತ್ತಾರಂತೆ ಎಂದು ಕನ್ವರ್ಟೆಡ್ ಕಾಂಗ್ರೆಸ್ ಜೆಂಟಲ್ಮ್ಯಾನ್ (ಸಿ.ಪಿ.ಯೋಗೇಶ್ವರ್) ಹೇಳುತ್ತಾರೆ. ನ.11ನೇ ತಾರೀಖಿನವರೆಗೆ ನಾನು ಪ್ರಚಾರಕ್ಕೆ ಬರುತ್ತೇನೆ. ನನ್ನ ಮೊಮ್ಮಗ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಾನೆ. ಅವನಿಗೆ ನೀವು ಆಶೀರ್ವಾದ ಮಾಡಿ ಶಕ್ತಿ ತುಂಬಿ’ ಎಂದು ಮನವಿ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕರಾದ ಆರ್ ಅಶೋಕ, ಛಲವಾದಿ ನಾರಾಯಣಸ್ವಾಮಿ, ಶಾಸಕ ಗೋಪಾಲಗೌಡ ಸೇರಿದಂತೆ ಮೈತ್ರಿ ಶಾಸಕರು ನಿಖಿಲ್ ಪರ ಪ್ರಚಾರ ನಡೆಸಿದರು.

Quote - ನಾನು ಮಾತನಾಡುತ್ತೇನಾ ಎಂದು ಮಾಧ್ಯಮದವರು ಮೂರು ತಿಂಗಳು ನನ್ನ ಮನೆ ಕಾದರು. ನಾನೇನು ಅಂತರರಾಷ್ಟ್ರೀಯ ಅಪರಾಧಿನಾ? ಎಷ್ಟೊಂದು ನೋವು ನನಗೆ. ನೋಡಿ ನಾನೀಗ ನಿಮ್ಮೆದುರು ಎದೆ ಚಾಚಿ ಮಾತನಾಡುತ್ತಿದ್ದೇನೆ ಎಚ್.ಡಿ. ದೇವೇಗೌಡ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ

Quote - ನನಗೆ ಹಣೆಬರಹ–ಅದೃಷ್ಟ ಸರಿ ಇಲ್ಲ ಅಂತಾರೆ. ಕಣ್ಣೀರಿನ ಬಗ್ಗೆ ವ್ಯಂಗ್ಯವಾಡುತ್ತಾರೆ. ಎಲ್ಲವನ್ನು ನಾನು ಸಹಿಸಿಕೊಂಡಿದ್ದೇನೆ. ಮನುಷ್ಯತ್ವ ಇರುವವರಿಗೆ ಮಾತ್ರ ಕಣ್ಣೀರು ಬರುತ್ತದೆ. ಈ ಸಲ ನನ್ನ ಹಣೆ ಬರಹವನ್ನು ಕ್ಷೇತ್ರದ ಜನ ಬರೆಯುತ್ತಾರೆ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ

Quote - ಅಧಿಕಾರವಿದ್ದಾಗ ಜನರ ಕೇಳದವರು ಈಗ ಮಗ–ಮೊಮ್ಮಗನಿಗೆ ಮತ ಕೇಳಲು ಬಂದಿದ್ದಾರೆ. ನಿಮ್ಮ ಮನೆ ಮಗ ಯೋಗೇಶ್ವರ್ನನ್ನು ಮರೆಯಬೇಡಿ. ಕುಮಾರಣ್ಣನ ನೋಟು ಯೋಗೇಶ್ವರ್ಗೆ ಓಟು ಎಂದು ತೀರ್ಮಾನಿಸಿ ಡಿ.ಕೆ. ಸುರೇಶ್ ಮಾಜಿ ಸಂಸದ

Cut-off box - ಎಚ್ಡಿಕೆ ನಂಬಿಕೆ ದ್ರೋಹ: ಸಿಪಿವೈ ‘ಉಪ ಚುನಾವಣೆಯಲ್ಲಿ ಟಿಕೆಟ್ ಕೊಡುವ ಮಾತುಕತೆಯಾಗಿತ್ತು. ಆದರೆ ಕುಮಾರಸ್ವಾಮಿ ನಾಟಕವಾಡಿ ಮಗನನ್ನು ತಂದರು. ಮೊದಲು ನಂಬಿಕೆ ಹುಟ್ಟಿಸಿ ಬಳಿಕ ವಂಚಿಸಿ ವಿಶ್ವಾಸದ್ರೋಹ ಮಾಡಿದರು. ಈಗಾಗಲೇ ಕ್ಷೇತ್ರ ಬಿಟ್ಟಿರುವ ಅವರು ಇಲ್ಲಿಗೆ ಬರುವಾಗಲೂ ಹಾಗೂ ಹೋಗುವಾಗಲೂ ಜನರ ಅಭಿಪ್ರಾಯ ಕೇಳಿಲ್ಲ. ಎಲ್ಲದಕ್ಕೂ ಜನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹೇಳಿದರು. ನಿಖಿಲ್ ಪರ ದೇವೇಗೌಡರ ಪ್ರಚಾರ ಕುರಿತು ಪ್ರತಿಕ್ರಿಯಿಸಿದ ಅವರು ‘ಪ್ರಚಾರಕ್ಕೆ ಸಾಕಷ್ಟು ಜನ ಬರುತ್ತಾರೆ ಹೋಗುತ್ತಾರೆ. ಇದು ಮನರಂಜನೆ ಆಗದೆ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸವಾಗಬೇಕು. ಜನಸೇವೆ ಮಾಡುವವರಿಗೆ ಜನ ಮತ ಕೊಡುತ್ತಾರೆ’ ಎಂದರು. ಸಚಿವರಾದ ಕೃಷ್ಣ ಬೈರೇಗೌಡ ಮಂಕಾಳ ವೈದ್ಯ ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಕೆಲ ಶಾಸಕರು ಯೋಗೇಶ್ವರ್ ಪ್ರಚಾರಕ್ಕೆ ಸಾಥ್ ನೀಡಿದರು.

Cut-off box - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.