ತಮ್ಮ ಸ್ವಗ್ರಾಮ ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆಯಲ್ಲಿ ಭಾನುವಾರ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರಿಗೆ ಸ್ಥಳೀಯ ಕಾರ್ಯಕರ್ತರು ಹೂವಿನಹಾರ ಹಾಕಿ ಅಭಿಮಾನ ಮೆರೆದರು. ಮಾಜಿ ಸಂಸದ ಡಿ.ಕೆ.ಸುರೇಶ್ ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ಪಕ್ಷದ ಮುಖಂಡರು ಇದ್ದಾರೆ
ಯೋಗೇಶ್ವರ್ ನಮ್ಮ ಜತೆಗೆ ಇದ್ದುಕೊಂಡೇ ಕೈ ಕೊಟ್ಟಿದ್ದಾರೆ. ಅವರಿಗೆ ಉಪ ಚುನಾವಣೆ ಅಂದ್ರೆ ಇಷ್ಟ ಅನ್ಸುತ್ತೆ. ಅದಕ್ಕಾಗಿಯೇ ಪಕ್ಷಾಂತರ ಮಾಡುತ್ತಿರುತ್ತಾರೆ. ಹಾಗಾಗಿ ನಿಖಿಲ್ ಗೆಲ್ಲಿಸಿ ಸಿಪಿವೈಗೆ ಪಾಠ ಕಲಿಸಿ
ವಿ. ಸೋಮಣ್ಣ ಕೇಂದ್ರ ಸಚಿವ
ನನ್ನ ಬಗ್ಗೆ ಯಾರೆಷ್ಟೇ ಕೀಳಾಗಿ ಮಾತನಾಡಿದರೂ ಪ್ರತಿಕ್ರಿಯಿಸಲಾರೆ. ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ನನಗೆ ಅಪಾರ ಜನ ಬೆಂಬಲ ವ್ಯಕ್ತವಾಗುತ್ತಿದೆ. ನನ್ನ ಗೆಲುವೇ ಅವರಿಗೆ ಉತ್ತರ
ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ
ಈ ಚುನಾವಣೆ ಫಲಿತಾಂಶದಿಂದ ಸರ್ಕಾರವೇನು ಬದಲಾಗದು. ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲ ಸಮುದಾಯದವರನ್ನು ತಲುಪಿದ್ದು ಈ ಚುನಾವಣೆಯ ಫಲಿತಾಂಶ ನಮ್ಮ ಪರ ಬರುವುದರಲ್ಲಿ ಅನುಮಾನವಿಲ್ಲ
ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
‘ಹೋದಲ್ಲೆಲ್ಲಾ ಕರ್ಮಭೂಮಿ ಅಂತಾರೆ’
‘ಅಳೋ ಗಂಡಸನ್ನು ನಂಬಬಾರದು ಅನ್ನೋ ಗಾದೆ ಇದೆ. ಅವರು ಎಲ್ಲ ಕಡೆ ಓಡಾಡ್ತಾರೆ. ಮಂಡ್ಯ ಹಾಸನ ರಾಮನಗರಕ್ಕೆ ಓಡಾಡುತ್ತಾ ಇದೇ ನನ್ನ ಕರ್ಮಭೂಮಿ ಅನ್ನುತ್ತಾರೆ. ಈಗ ಚನ್ನಪಟ್ಟಣ ಸಹ ನನ್ನ ಕರ್ಮಭೂಮಿ. ನಾನು ಇಲ್ಲೇ ಇರುತ್ತೇನೆ ಎನ್ನುತ್ತಾರೆ. ಇಷ್ಟಕ್ಕೂ ಈ ತಾಲ್ಲೂಕಿಗೆ ಏಕೆ ಬಂದರು? ಬಂದರೂ ಮಾಡಿದ ಅಭಿವೃದ್ಧಿ ಕೆಲಸಗಳೇನು? ಸಾರ್ಥ ರಾಜಕಾರಣ ಮಾಡಿಕೊಂಡು ಈಗ ಮಗನನ್ನು ತಂದು ನಿಲ್ಲಿಸಿದ್ದಾರೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದರು. ‘ಹುಟ್ಟೂರನ್ನೇ ಅಭಿವೃದ್ಧಿ ಮಾಡಿಲ್ಲ’ ‘ಹುಟ್ಟೂರು ಚಕ್ಕೆರೆಯನ್ನೇ ಅಭಿವೃದ್ಧಿ ಮಾಡದವರು ಇಡೀ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ? ಊರಿನ ಅವ್ಯವಸ್ಥೆ ಎಲ್ಲರ ಕಣ್ಣಿಗೂ ಕಾಣುತ್ತದೆ. ನಾನೇನು ಅಭಿವೃದ್ಧಿ ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭಾವುಕರಾದರು.