ರಾಮನಗರ: ತಮ್ಮ ವಿರೋಧದ ನಡುವೆಯೂ ಮಗಳು ಯುವಕನನ್ನು ಮದುವೆಯಾದ ಕಾರಣಕ್ಕೆ ಮನನೊಂದು ಪೋಷಕರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಪಟ್ಟಣ ತಾಲ್ಲೂಕಿನ ತೆಂಕನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.

ಎಚ್. ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ರಮೇಶ್ ಹಾಗೂ ಅವರ ಪತ್ನಿ ಶೈಲಜಾ ಮೃತರು. ಇವರ ಪುತ್ರಿ ಅದೇ ಗ್ರಾಮದ ಆಟೊ ಚಾಲಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ಪೋಷಕರಿಗೆ ತಿಳಿದು ರಾಜೀ ಸಂಧಾನ ನಡೆದಿತ್ತು.

ಆದರೆ, ಮೂರು ದಿನದ ಹಿಂದೆ ಯುವತಿ ತನ್ನ ಪ್ರಿಯಕರನ ಜೊತೆ ಮನೆ ಬಿಟ್ಟು ತೆರಳಿದ್ದಳು. ಆತನನ್ನೇ ವಿವಾಹ ಆಗಿರುವುದಾಗಿ ಸೋಮವಾರ ಪೋಷಕರಿಗೆ ವಾಟ್ಸ್‌ಆ್ಯಪ್‌ಮೂಲಕ ಫೋಟೊ ಕಳುಹಿಸಿದ್ದಳು. ಇದನ್ನು ನೋಡಿದ ಪೋಷಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.