ಮಾಗಡಿ: ತಾಲ್ಲೂಕಿನ ಜಮಾಲ್ ಪಾಳ್ಯದ ವೆಂಕಟ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶುಕ್ರವಾರ ಶ್ರೀಕೃಷ್ಣ ಜಯಂತಿ ಅಂಗವಾಗಿ ಮಕ್ಕಳಿಗೆ ರಾಧಾ ಕೃಷ್ಣರ ವೇಷ ಭೂಷಣ ತೊಡಿಸಿ ಪ್ರದರ್ಶನ ನಡೆಸಲಾಯಿತು.

ಪುಟಾಣಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಾತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರಿಯಪ್ಪ ಮಕ್ಕಳಿಗೆ ಬಹುಮಾನ ವಿತರಿಸಿದರು. ಶಿಕ್ಷಕರಾದ ಅನಿತಾ.ಎಚ್.ಎಸ್., ರಶ್ಮಿ ಶ್ರೀಕೃಷ್ಣ ಜಯಂತಿ ಬಗ್ಗೆ ಮಾತನಾಡಿದರು. ಪೋಷಕರು ಮಕ್ಕಳು, ಶಿಕ್ಷಕರು ಇದ್ದರು.

ಪಟ್ಟಣದ ಹೊಸಪೇಟೆ ಮಾರುತಿ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಶ್ರೀಕೃಷ್ಣ ಜಯಂತಿಯಲ್ಲಿ ರಾಧಾಕೃಷ್ಣರ ವೇಷ ಧರಿಸಿದ್ದ ಮಕ್ಕಳು, ಕೋಲಾಟ, ನೃತ್ಯ ನಡೆಸಿಕೊಟ್ಟರು.

ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ವರಲಕ್ಷ್ಮೀ ಗಂಗರಾಜು ಬಹುಮಾನ ವಿತರಿಸಿದರು. ಪ್ರಾಂಶುಪಾಲ ಎಚ್.ಪಿ.ಮಂಜುನಾಥ ಅವರು ಶ್ರೀಕೃಷ್ಣ ಜಯಂತಿ ಕುರಿತು ಮಾತನಾಡಿದರು. ಮುಖ್ಯಶಿಕ್ಷಕ ನರಸಿಂಹಯ್ಯ ಹಾಗೂ ಶಿಕ್ಷಕರು, ಪೋಷಕರು, ಮಕ್ಕಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.