‘ಜೆಡಿಎಸ್ನವರು ಬರುವುದಾದರೆ ಮಾತನಾಡುವೆ’
‘ಜೆಡಿಎಸ್ ನಶಿಸುತ್ತಿರುವುದರಿಂದ ಅಲ್ಲಿನ ಶಾಸಕರು ಬೇರೆಡೆಗೆ ಮುಖ ಮಾಡುವುದು ಸಹಜ. ನಾನು ಜೆಡಿಎಸ್ ಶಾಸಕರನ್ನು ಆಪರೇಷನ್ ಮಾಡುವುದಿಲ್ಲ. ಅವರೇ ಪಕ್ಷ ತೊರೆದು ಬರುವುದಾದರೆ, ನಮ್ಮ ಹೈಕಮಾಂಡ್ ಜೊತೆ ಮಾತನಾಡುವೆ. ಜೆಡಿಎಸ್ನಲ್ಲಿ ಭವಿಷ್ಯವಿಲ್ಲ ಎಂಬುದನ್ನು ಅಲ್ಲಿನ ಶಾಸಕರು ಅರಿಯಬೇಕು. ಗೌಡರು ಹಳ್ಳಿ ಹಳ್ಳಿಗೆ ಬಂದು ಪ್ರಚಾರ ಮಾಡಿದರೂ ಸಮುದಾಯ ಗೌರವ ಕೊಡಲಿಲ್ಲ. ಕುಟುಂಬ ರಾಜಕಾರಣವನ್ನು ತಿರಸ್ಕರಿಸಿರುವುದು ಸ್ಪಷ್ಟವಾಗಿದೆ’ ಎಂದು ಯೋಗೇಶ್ವರ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.