ಶಿವಮೊಗ್ಗ: ಇಲ್ಲಿನ ಸಕ್ರೆಬೈಲಿನ ಆನೆ ಶಿಬಿರದಲ್ಲಿ ಆನೆಯಿಂದ ಬಿದ್ದು ಮಾವುತ ಶಂಶುದ್ದೀನ್ ಶುಕ್ರವಾರ ಕೈ ಮುರಿದುಕೊಂಡಿದ್ದಾರೆ.

ಆನೆ ಕುಂತಿಯ ಮೇಲೆ ಕುಳಿತಿದ್ದ ಮಾವುತ ಕೆಳಗೆ ಬಿದ್ದಿದ್ದಾರೆ. ಮಾವುತ ಕೆಳಗೆ ಬಿದ್ದ ವೇಳೆ ಅಲ್ಲಿ ಅನಧಿಕೃತವಾಗಿ ಪ್ರೀ ವೆಡ್ಡಿಂಗ್ ಶೂಟ್ ನಡೆಯುತ್ತಿತ್ತು ಎನ್ನಲಾಗಿದೆ.

ಕುಂತಿ ಆನೆ ಸಾಗುತ್ತಿದ್ದಾಗ ಅದರ ಹಿಂದೆ ದೂರದಲ್ಲಿ ಮರಿ ಬರುತ್ತಿದ್ದು, ಅಲ್ಲಿಯೇ ಬಳಿಯಲ್ಲಿ ಮದುವೆ ಪೋಷಾಕು ತೊಟ್ಟ ಹುಡುಗ-ಹುಡುಗಿ ಜೋಡಿ ಕೂಡ ನಿಂತಿದ್ದಾರೆ. ದೂರದಲ್ಲಿದ್ದ ಮರಿಯತ್ತ ಕುಂತಿ ಏಕಾಏಕಿ ತಿರುಗುತ್ತಾಳೆ. ಆಗ ಆನೆಯ ಮೇಲಿದ್ದ ಮಾವುತ ಕೆಳಗೆ ಬೀಳುತ್ತಾರೆ. ಆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

'ಅಲ್ಲಿ ಪ್ರೀ ವೆಡ್ಡಿಂಗ್ ಶೂಟ್ ನಡೆಯುತ್ತಿರಲಿಲ್ಲ. ಆನೆಗಳ ವೀಕ್ಷಣೆಗೆ ಬರುವ ಸಾರ್ವಜನಿಕರು ಕುಂತಿಯ ಬಳಿಗೆ ಹೋಗಿದ್ದು, ಹತ್ತಿರ ಬರಬೇಡಿ ಎಂದು ಮಾವುತ ಶಂಸುದ್ದೀನ್ ಎಚ್ಚರಿಸುತ್ತಾರೆ. ಈ ವೇಳೆ ಕುಂತಿ ಏಕಾಏಕಿ ಹಿಂದಕ್ಕೆ ತಿರುಗಿದ್ದರಿಂದ ಆಯತಪ್ಪಿ ಬಿದ್ದಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಿ ವಿಶ್ರಾಂತಿಗೆ ಮನೆಗೆ ಕಳುಹಿಸಿದ್ದೇವೆ' ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಪಟಗಾರ 'ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.