ಶಿವಮೊಗ್ಗ: ಇಲ್ಲಿನ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ‘ಎಸ್.ಬಂಗಾರಪ್ಪ ನಗರ’ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ಎಸ್.ಬಂಗಾರಪ್ಪ ಅಭಿಮಾನಿಗಳ ಜಿಲ್ಲಾ ಸಂಘ ಸದಸ್ಯರು ಶುಕ್ರವಾರ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರಿಗೆ ಮನವಿ ಸಲ್ಲಿಸಿದರು.

ಬೊಮ್ಮನಕಟ್ಟೆಯಲ್ಲಿ 25 ವರ್ಷದಿಂದ 6,000 ದಿಂದ 7,000 ಮನೆಗಳು ನಿರ್ಮಾಣಗೊಂಡಿವೆ. ಇಲ್ಲಿ 30,000 ಜನಸಂಖ್ಯೆ ವಾಸವಾಗಿದೆ. ಆದರೆ, ಇಲ್ಲಿ ಯಾವುದೇ ಹೆಸರಿನಿಂದ ಬೊಮ್ಮನಕಟ್ಟೆಯನ್ನು ಗುರುತಿಸಿಲ್ಲ. ಆದ್ದರಿಂದ, ಆಶ್ರಯ ರುವಾರಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಹೆಸರಿಡಬೇಕು ಎಂದು ಒತ್ತಾಯಿಸಿದರು.

ಸಂಘದ ಗೌರವ ಅಧ್ಯಕ್ಷ ಜಯಪ್ಪ, ಜಿಲ್ಲಾ ಘಟಕ ಅಧ್ಯಕ್ಷ ಕೆ. ಮಾಲತೇಶ್ ಬೊಮ್ಮನಕಟ್ಟೆ, ಉಪಾಧ್ಯಕ್ಷ ಯು.ಕೆ.ಪ್ರಕಾಶ್, ಕಾರ್ಯದರ್ಶಿ ಕೃಷ್ಣಮೂರ್ತಿ, ಸಹಕಾರ್ಯದರ್ಶಿ ಜಿ.ಬಸವರಾಜ, ರಾಮಕೃಷ್ಣ, ವಝಿರ್ ಬೇಗ್, ವಿರೇಶ್ ಚಿತ್ತರಗಿ, ಶಾಂತಮ್ಮ, ಚರಣ್, ಶಿವಾನಂದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.