ಹೊಳೆಹೊನ್ನೂರು: ಬಸ್‌ಸೌಲಭ್ಯಕ್ಕೆ ಆಗ್ರಹಿಸಿ ವಿಧಾನಸಭಾ ಚುನಾವಣೆ ಬಹಿಷ್ಕರಿಸಿದ್ದ ಕನಸಿನಕಟ್ಟೆ ಗ್ರಾಮಕ್ಕೆ ಇದೀಗ ಬಸ್ ಸೌಲಭ್ಯ ಒದಗಿಸಲಾಗಿದೆ.

ಕನಸಿನಕಟ್ಟೆ ಹಾಗೂ ಸುರೇಂದ್ರ ಗೌಡ ಕ್ಯಾಂಪ್ ಗ್ರಾಮಗಳು ಮುಖ್ಯರಸ್ತೆಗೆ ಸಂಪರ್ಕವಿಲ್ಲದ ಪರಿಣಾಮ ಸಾರಿಗೆ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು, ವೃದ್ಧರು, ಆನಾರೋಗ್ಯ ಪೀಡಿತರು, ಕೂಲಿಕಾರ್ಮಿಕರು ಸೇರಿ ಗ್ರಾಮಸ್ಥರಿಗೆ ತುಂಬ ಅನನುಕೂಲವಾಗಿತ್ತು. ಆದಕಾರಣ ಚುನಾವಣೆಗೆ ಮುನ್ನ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.

ಬಸ್ಸು ಆನವೇರಿಯಿಂದ ಕನಸಿನಕಟ್ಟೆ ಮಾರ್ಗವಾಗಿ ಶಿವಮೊಗ್ಗ ತಲುಪಲಿದ್ದು, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣ ಸೌಲಭ್ಯವಿರುವುದರಿಂದ ಸರ್ಕಾರಿ ಬಸ್ ಕಲ್ಪಿಸಿರುವುದು ಅನುಕೂಲವಾಗಿದೆ ಎಂದು ಗ್ರಾಮದ ಯುವಕ ದಿನೇಶ್, ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಸಿ.ವೈ. ರಾಜು, ಗ್ರಾಮದ ಮುಖಂಡರಾದ ಸೀತಾರಾಂ, ವೀರಭದ್ರ, ಮಂಜುನಾಥ, ನಾಗರಾಜ್, ಹಾಲೇಶ್, ಕರಿಬಸವಯ್ಯ ಇನ್ನಿತರರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.