ಶಿವಮೊಗ್ಗ: ಇಲ್ಲಿನ ಸಕ್ರೆಬೈಲ್ ಬಿಡಾರದ (sakrebyle elephant camp) 40 ವರ್ಷದ ಆನೆ ಕುಂತಿ ಗುರುವಾರ ಗಂಡು ಮರಿಗೆ ಜನ್ಮ ನೀಡಿದಳು. ಇದು ಇಡೀ ಕ್ಯಾಂಪನ್ನು ಬಾಣಂತನದ ಸಂಭ್ರಮಕ್ಕೆ ನೆಲೆಯಾಗಿಸಿತು. ಅಲ್ಲಿನ ಸಿಬ್ಬಂದಿ ಕುಂತಿ ಆನೆ ಹಾಗೂ ಆಕೆಯ ಮರಿಯ ಆರೈಕೆಯಲ್ಲಿ ತೊಡಗಿದ್ದರು.

ಮೊದಲ ಮರಿಯೊಂದಿಗೆ ಕುಂತಿಯನ್ನು2014ರಲ್ಲಿ ಹಾಸನ ವಿಭಾಗದ ಸಕಲೇಶಪುರದಲ್ಲಿ ಸೆರೆಹಿಡಿದು ಸಕ್ರೆಬೈಲಿಗೆ ತರಲಾಗಿದೆ. ಅರ್ಜುನ (11 ವರ್ಷ) ಹೇಮಾವತಿ (8 ವರ್ಷ), ಧನುಷ್ ( 4 ವರ್ಷ) ಒಟ್ಟು ಮೂರು ಮರಿಗಳನ್ನು ಹೊಂದಿರುವ ಕುಂತಿಗೆ ಈಗ ನಾಲ್ಕನೇ ಬಾರಿಗೆ ಬಾಣಂತನದ ಸುಖ.

'ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಕುಂತಿಗೆ 21 ತಿಂಗಳು ತುಂಬಿ, ತುಂಬು ಗರ್ಭಿಣಿ ಆಗಿದ್ದ ಕಾರಣ ಆಕೆಯೊಂದಿಗೆ ಹೆಣ್ಣಾನೆ ನೇತ್ರಾವತಿ ಕೂಡ ಇದ್ದಳು. ಸಮೀಪದ ಕಾಡಿನಲ್ಲಿ ನಸುಕಿನಲ್ಲಿ ಕುಂತಿ ಮರಿ ಹಾಕಿದ್ದು, ವೈದ್ಯರು, ಕಾವಾಡಿಗರು ಹೋಗಿ ಆಕೆಯನ್ನು ಕ್ಯಾಂಪಿಗೆ ಕರೆತಂದಿದ್ದಾರೆ' ಎಂದು ಹಿರಿಯ ವೈದ್ಯ ಡಾ.ವಿನಯ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.