ಶಿವಮೊಗ್ಗ: ಗೋವುಗಳಮೇವಿಗಾಗಿ ಜಿಲ್ಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಆಂದೋಲನಆರಂಭಿಸಲಾಗಿದೆ.

ಗೋವುಗಳುಸಮಾಜದಜೀವನಾಡಿ, ಅವುಗಳನ್ನು ಪೂಜ್ಯತೆಯಿಂದ ಕಾಣುತ್ತೇವೆ. ಅವುಗಳ ಮೇವಿನ ಯಾವ ಸಮಯದಲ್ಲೂ ತೊಂದರೆಯಾಗಬಾರದು ಎಂದು ನನ್ನ ಕನಸಿನ ಶಿವಮೊಗ್ಗ, ಶ್ರೀಗಂಧ ಸಂಸ್ಥೆ, ವಿಶ್ವ ಹಿಂದು ಪರಿಷತ್, ಗೋ ರಕ್ಷಣಾ ವೇದಿಕೆ,ವಾಸವಿ ಶಾಲೆಯಸಹಯೋಗದಲ್ಲಿ ಮೇವು ಸಂಗ್ರಹ ಆರಂಭಿಸಲಾಗಿದೆಎಂದು ನನ್ನ ಕನಸಿನ ಶಿವಮೊಗ್ಗದ ಅಧ್ಯಕ್ಷ ಎನ್.ಗೋಪಿನಾಥ್, ಅ.ನಾ.ವಿಜಯೇಂದ್ರ ರಾವ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಾಕಷ್ಟು ಗೋವುಗಳಿಗೆ ಸಕಾಲಕ್ಕೆ ಮೇವು ದೊರೆಯುತ್ತಿಲ್ಲ. ಶಿವಮೊಗ್ಗ ನಗರದಲ್ಲೇ 4 ಗೋ ಶಾಲೆಗಳಿವೆ.ಜ್ಞಾನೇಶ್ವರಿ ಗೋ ಶಾಲೆಯಲ್ಲಿ 135, ಮಹಾವೀರ ಗೋ ಶಾಲೆಯಲ್ಲಿ 360, ಸುರಭಿ ಗೋ ಶಾಲೆಯಲ್ಲಿ 42, ನಂದನ ಭಟ್ಅವರ ಹತ್ತಿರ 35, ಬೀಡಾಡಿ ದನಗಳುಸೇರಿ 400ಕ್ಕೂ ಹೆಚ್ಚು ಗೋವುಗಳಿವೆ. ಅವುಗಳಿಗೆ ಮೇವಿನ ಕೊರತೆ ಇದೆ ಎಂದರು.

ಹಿಂದೆ ಹಳ್ಳಿಗಳಲ್ಲಿ ಗೋಮಾಳಇರುತ್ತಿದ್ದವು. ಅಲ್ಲಿ ಸಮೃದ್ಧ ಮೇವು ದೊರೆಯುತ್ತಿತ್ತು.ಇಂದುಗೋಮಾಳಗಳೆಲ್ಲ ಜಮೀನುಗಳಾಗಿ ಪರಿವರ್ತನೆ ಹೊಂದಿವೆ. ನಗರಿಕರಣದ ಪರಿಣಾಮವೂ ಮೇವಿಗೆ ತೊಂದರೆಯಾಗಿದೆ.ಅದಕ್ಕಾಗಿಆಂದೋಲನ ಆರಂಭಿಸಿದ್ದೇವೆ. ನಗರ, ಅಕ್ಕಪಕ್ಕದ ಊರುಗಳಲ್ಲಿ ಖಾಲಿ ಜಾಗ, ಖಾಲಿ ಜಮೀನುಗಳಲ್ಲಿಮೇವು ಬೆಳೆಸುತ್ತೇವೆ.ನಿವೇಶನ,ಜಮೀನು ಮಾಲೀಕರಿಗೆ ಇದರಿಂದ ಯಾವುದೇ ನಷ್ಟವಿಲ್ಲ. ಪ್ರತಿ2-3 ತಿಂಗಳಿಗೊಮ್ಮೆ ಮೇವು ಕಟಾವಿಗೆ ಬರುತ್ತದೆ. ಸ್ವಯಂ ಸೇವಕರುಕಟಾವು ಮಾಡಿ ಮೇವು ವಿತರಿಸುತ್ತಾರೆ ಎಂದು ಮಾಹಿತಿ ನೀಡಿದರು.

ಮೇವು ಆಂದೋಲನದ ಪರಿಣಾಮ ಖಾಲಿನಿವೇಶನಗಳು,ಜಮೀನು ಸ್ವಚ್ಛವಾಗಿರುತ್ತದೆ. ಮಳೆಗಾಲದಲ್ಲಿನೀರು ಹಾಕುವ ಆವಶ್ಯಕತೆಇಲ್ಲ. ಮೂರು ತಿಂಗಳಲ್ಲಿ ಮೇವು ಕಟಾವಿಗೆ ಬರುತ್ತದೆ. ಆಯಾ ಜಾಗದ ಮಾಲೀಕರ ಹೆಸರಲ್ಲೇ ಗೋ ಶಾಲೆಗಳಿಗೆ ಮೇವು ತಲುಪಿಸಲಾಗುವುದು.

ಈ ವರ್ಷ ಪ್ರಾಯೋಗಿಕವಾಗಿ ಹತ್ತು ಜಾಗದಲ್ಲಿ ಮೇವು ಬೆಳೆಸುವ ಗುರಿ ಹೊಂದಲಾಗಿದೆ. ಈಗಾಗಲೇ 5 ಏಕರೆ ಜಾಗ ಸಿಕ್ಕಿದೆ. ಈ ಯೋಜನೆಗೆ ಪಶುಸಂಗೋಪನೆ ಇಲಾಖೆ,ಪಶು ವೈಧ್ಯಕೀಯ ಮಹಾವಿದ್ಯಾಲಯ ಸಹಕಾರ ನೀಡುತ್ತಿವೆ ಎಂದರು.

ನಾಗರಿಕರು ತಮ್ಮ ಖಾಲಿ ಇರುವನಿವೇಶನಗಳಲ್ಲಿಜಾನುವಾರಗಳಿಗೆ ಮೇವು ಬೆಳೆಸಲು ಅನುವು ಮಾಡಿಕೊಡಬೇಕು. ಆಸಕ್ತರು ಮಾಹಿತಿಗಾಗಿ94481 22646 ಸಂಪರ್ಕಿಸಬಹುದುಎಂದು ಕೋರಿದರು.

ಪರಿಸರ ದಿನಾಚರಣೆ ಅಂಗವಾಗಿ ಮೊದಲ ಹಂತವಾಗಿ ವಾಸವಿ ಶಾಲೆ ಆವರಣದ 100X100 ಜಾಗದಲ್ಲಿ ಮೇವು ಬೆಳೆಯಲು ಚಾಲನೆ ನೀಡಲಾಗುತ್ತಿದೆ. ಮೇವು ಬೆಳೆಸಲು ಆಸಕ್ತಿಯುಳ್ಳ ಸಾರ್ವಜನಿಕರು ಇಲ್ಲಿಗೆ ಬಂದು ಉಚಿತವಾಗಿ ಮೇವಿನ ಕಡ್ಡಿಗಳನ್ನು ಹಾಗೂ ಬೀಜವನ್ನು ಪಡೆಯಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಬಾಬು, ಬಾ.ರ.ಮಧುಸೂದನ್, ಡಾ.ವಿಘ್ನೇಶ್, ಹೆಚ್.ಶಶಿಧರ್, ಶ್ಯಾಮ್ಸುಂದರ್ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.