ಶಿವಮೊಗ್ಗ: ನಕ್ಸಲರ ಜೊತೆಗೆ ನಂಟು ಹೊಂದಿರುವ, ಹಿಂಸೆಗೆ ಪ್ರಚೋದನೆ ನೀಡುವ ಸಾಹಿತಿ ಗಿರೀಶ್ ಕಾರ್ನಾಡ್ ಅವರವಿರುದ್ಧ ಕಾನೂನುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಹಿಂದೂಜನಜಾಗೃತಿ ಸಮಿತಿ ಕಾರ್ಯಕರ್ತರುಬುಧವಾರಜಿಲ್ಲಾಧಿಕಾರಿ ಕಚೇರಿಮುಂದೆಪ್ರತಿಭಟನೆ ನಡೆಸಿದರು.

ಗೌರಿ ಲಂಕೇಶ್ ಬಳಗಈಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಚಾರ ಗೋಷ್ಠಿಯಲ್ಲಿ ಕಾರ್ನಾಡ್ ಅವರು ‘ವಿ ಟು ಅರ್ಬನ್ ನಕ್ಸಲ್’ (ನಾನೂ ನಗರ ನಕ್ಸಲ) ಎಂದು ಫಲಕ ಹಾಕಿ ಕುಳಿತಿದ್ದರು. ಇದು ಈ ದೇಶದ ಸಂವಿಧಾನ ವ್ಯವಸ್ಥೆಯ ವಿರುದ್ಧಯುದ್ದ ಸಾರುವ, ಹಿಂಸೆ ಪ್ರಚೋದಿಸುವ ಮತ್ತು ನಕ್ಸಲರ ಸಮರ್ಥನೆ ಮಾಡುವ ರೀತಿ ಎಂದು ದೂರಿದರು.

ನಕ್ಸಲರು ಈ ದೇಶದ ಸಾವಿರಾರು ನಾಗರಿಕರು, ಪೊಲೀಸರನ್ನು ಕೊಂದಿದ್ದಾರೆ. ಆದಿವಾಸಿಗಳ, ಬುಡಕಟ್ಟು ಜನರ ದುರ್ಬಳಕೆ ಮಾಡಿಕೊಂಡು ಚಂದಾ ವಸೂಲಿ ಮಾಡುತ್ತಾ ಉಪಟಳ ನೀಡುತ್ತಿದ್ದಾರೆ. ದೇಶದ ತುಂಬಾ ಇವರ ಹಾವಳಿ ಹೆಚ್ಚಾಗಿದೆ. ಭೀಮಾ– ಕೊರೆಗಾವ್ ದಂಗೆ ಪ್ರಕರಣದಲ್ಲಿ ಶಾಮೀಲಾಗಿರುವ ಕೆಲವು ಅರ್ಬನ್ ನಕ್ಸಲರನ್ನು ಪ್ರಧಾನಿ ಹತ್ಯೆಯ ಸಂಚಿನ ಪ್ರಕರಣದಲ್ಲಿ ಬಂಧಿಸಲಾಗಿದೆ.ದೇಶದ ಭದ್ರತೆಗೆ ನಕ್ಸಲರು ಎಷ್ಟು ಅಪಾಯಕಾರಿ ಎಂದು ಗೊತ್ತಿದ್ದರೂ ಕಾರ್ನಾಡ್ ಅವರ ಹೇಳಿಕೆ ಸಮಜಂಸವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾಮಿ ಅಗ್ನಿವೇಶ್ ಕೂಡ ನಾನೂ ನಗರ ನಕ್ಸಲ ಎಂದು ಹೇಳಿದ್ದಾರೆ. ಮೋದಿ ರಾಕ್ಷಸ ಎಂಬ ಹೇಳಿಕೆ ನೀಡಿ ಪ್ರಚೋದನೆಗೆ ಅವಕಾಶ ಕೊಟ್ಟಿದ್ದಾರೆ. ಇದಕ್ಕೆಲ್ಲ ಗೌರಿ ಲಂಕೇಶ್ ಬಳಗ ಕಾರಣ. ಈ ಬಳಗದ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸನಾತನ ಸಂಸ್ಥೆ ನಿರ್ಬಂಧಿಸುವಂತೆ ಬೇಡಿಕೆ ಇಡುವ ಸಾಮಾಜಿಕ ಕಾರ್ಯಕರ್ತರು ಹಿಂದೂ ಆತಂಕವಾದಿಗಳು. ನಾಲಾ ಸೋಪಾರ ಸ್ಫೋಟ ಪ್ರಕರಣ, ದಬೋಲಕರ ಹತ್ಯೆ ಪ್ರಕರಣದಲ್ಲಿ ಅನಗತ್ಯವಾಗಿಹಿಂದೂನಿಷ್ಠರನ್ನು ಬಂಧಿಸಲಾಗಿದೆ.ಅವರಲ್ಲಿ ಯಾರೂಸನಾತನ ಸಂಸ್ಥೆ ಸಾಧಕರಲ್ಲ. ಸನಾತನ ಸಂಸ್ಥೆ ನಿಷೇಧ ತರವಲ್ಲ ಎಂದರು.

ಸಂಘಟನೆಯ ಮುಖಂಡರಾದವಿಜಯರೇವಣ್‌ಕರ್, ಗಂಗಾಧರ್, ವಿಶ್ವನಾಥ್, ಆನಂದರಾವ್, ದಿನೇಶ್ ಚವಾಣ್, ಸುನಿತಾ, ಅಶ್ವಿನಿ, ಜೀವನ್, ಮಹೇಶ್, ಸುಧಾ ಕಾಮತ್, ಸೆಲ್ವಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.