ಶಿವಮೊಗ್ಗ: ಕದ್ದಿರುವ ಜೆಸಿಬಿ ಬಳಸಿ ಎಟಿಎಂ ಯಂತ್ರ ಕದಿಯಲು ಯತ್ನಿಸಿದ ಘಟನೆ ಶಿವಮೊಗ್ಗದ ವಿನೋಬ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಇಲ್ಲಿನ ವಿನೋಬನಗರ ಪೊಲೀಸ ಸ್ಟೇಷನ್ ವ್ಯಾಪ್ತಿಯ ಶಿವಾಲಯ ಪಕ್ಕದ ಎಕ್ಸಿಸ್ ಬ್ಯಾಂಕ್ ನ ಎಟಿಎಂ ಯಂತ್ರ ಇದೆ. ಅಲ್ಲಿಯೇ ಪಕ್ಕದಲ್ಲಿ ಪೆಟ್ರೋಲ್ ಬಂಕ್ ಇದ್ದು, ಅದರ ಮುಂದೆ ಕೆಲದಿನಗಳಿಂದ ಜೆಸಿಬಿ ವಾಹನ ನಿಲ್ಲಿಸಲಾಗಿತ್ತು.

ತಡರಾತ್ರಿ ನಕಲಿ ಕೀ ಬಳಸಿ ಜೆಸಿಬಿ ಚಲಾಯಿಸಿಕೊಂಡು ಎಟಿಎಂ ಕೇಂದ್ರದ ಎದುರು ಬಂದಿರುವ ವ್ಯಕ್ತಿ ಎಟಿಎಂ ಯಂತ್ರವನ್ನು ಜೆಸಿಬಿ ಸಹಾಯದಿಂದ ಹೊರಗೆಳೆಯಲು ಮುಂದಾಗಿದ್ದಾನೆ. ಇದೇ ವೇಳೆ ರಾತ್ರಿ ಗಸ್ತಿನಲ್ಲಿದ್ದ ಸಂಚಾರ ಠಾಣೆ ಇನ್ಸ್ಪೆಕ್ಟರ್ ಸಂತೋಷ ಕುಮಾರ್, ತಡರಾತ್ರಿಯಲ್ಲಿ ಎಟಿಎಂ ಕೇಂದ್ರದ ಎದುರು ಜೆಸಿಬಿ ಕಾರ್ಯಾಚರಣೆ ನಡೆಸುತ್ತಿರುವುದನ್ನು ಕಂಡು ಅನುಮಾನ ಬಂದು ಸ್ಥಳಕ್ಕೆ ಬಂದಿದ್ದಾರೆ. ಪೊಲೀಸ್ ವಾಹನ ಬರುತ್ತಿದ್ದಂತೆಯೇ ಜೆಸಿಬಿಯಲ್ಲಿದ್ದ ವ್ಯಕ್ತಿ ಇಳಿದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ದುಷ್ಕರ್ಮಿಯು ಜೆಸಿಬಿ ಬಳಸಿ ಎಟಿಎಂ ಯಂತ್ರ ತೆರೆಯಲು ಮುಂದಾಗಿದ್ದರಿಂದ ಅದರ ಮೇಲಿನ ಭಾಗ ಜಖಂಗೊಂಡಿದೆ. ಗಾಜಿನ ಬಾಗಿಲು ಒಡೆದುಹೋಗಿದೆ.

ಎಟಿಎಂ ಕೇಂದ್ರಕ್ಕೆ ಕಾವಲುಗಾರ ಇರಲಿಲ್ಲ ಹಾಗೂ ಅದರಲ್ಲಿ ಹಣ ಇರಲಿಲ್ಲ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.