ಶಿವಮೊಗ್ಗ: ‘ಜಿಲ್ಲೆಯ ಎಲ್ಲ ಬ್ಯಾಂಕ್ಗಳು ಸುರಕ್ಷತೆ ಹಾಗೂ ಅಪರಾಧಗಳನ್ನು ತಡೆಗಟ್ಟುವ ಮತ್ತು ಪತ್ತೆ ಮಾಡುವ ಉದ್ದೇಶದಿಂದ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ದುರಸ್ತಿ ಬಾಕಿ ಇದ್ದಲ್ಲಿ 15 ದಿನಗಳೊಳಗೆ ಸರಿಪಡಿಸಬೇಕು’ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಸೂಚಿಸಿದರು.

ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಬ್ಯಾಂಕ್ಗಳ ಸುರಕ್ಷತೆಯ ದೃಷ್ಟಿಯಿಂದ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಗುರುವಾರ ನಡೆದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸುವುದು ಕಡ್ಡಾಯವಾಗಿದ್ದು, ಬ್ಯಾಂಕ್ನ ಒಳ ಮತ್ತು ಹೊರ ಭಾಗ, ಲಾಕರ್ ರೂಂ, ಕ್ಯಾಶ್ ರೂಂ, ಬ್ಯಾಂಕ್ನ ಆವರಣ, ಪ್ರವೇಶ ದ್ವಾರ, ಹಿಂಭಾಗ ಹಾಗೂ ಸುತ್ತಮುತ್ತಲಿನ ಎಲ್ಲ ಪ್ರದೇಶವು ದಿನದ 24 ಗಂಟೆಯೂ ಚಿತ್ರೀಕರಣವಾಗುವ ರೀತಿಯಲ್ಲಿ ಹಾಗೂ ಸ್ಪಷ್ಟ ಗೋಚರತೆ ಇರುವ ಸುಧಾರಿತ ತಂತ್ರಜ್ಞಾನವನ್ನು ಹೊಂದಿರುವ ಮೋಷನ್ ಸೆನ್ಸಾರ್ ಹಾಗೂ ನೈಟ್ ವಿಷನ್ ಕ್ಯಾಮೆರಾಗಳನ್ನು ಅಳವಡಿಸಬೇಕು. 15 ದಿನಗಳ ಬಳಿಕ ಸಂಬಂಧಪಟ್ಟ ಕಾರ್ಯವ್ಯಾಪ್ತಿಯ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ’ ಎಂದು ಹೇಳಿದರು.

‘ಎಲ್ಲ ಬ್ಯಾಂಕ್ಗಳ ಶಾಖೆಗಳು ಸೆಕ್ಯುರಿಟಿ ಆಡಿಟ್ ತಂಡದಿಂದ ಕಾಲಕಾಲಕ್ಕೆ ಆಡಿಟ್ ಮಾಡಲಿದ್ದು, ಅವರು ಸೂಚಿಸುವ ಸುರಕ್ಷತಾ ನ್ಯೂನ್ಯತೆಗಳನ್ನು, ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳು ಸೂಕ್ತ ಕಾಲಮಿತಿಯೊಳಗೆ ಸರಿಪಡಿಸಿ, ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಬೇಕು’ ಎಂದರು.

‘ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿಗಳು 90 ದಿನಗಳವರೆಗೆ ಸಂಗ್ರಹಣೆ ಸಾಮರ್ಥ್ಯ ಇರುವಂತಹ ಎನ್ವಿಆರ್ ಮತ್ತು ಡಿವಿಆರ್ಗಳನ್ನು ಅಳವಡಿಸಬೇಕು. ಅವುಗಳು ಇತರರಿಗೆ ಸುಲಭವಾಗಿ ಕಾಣದಂತೆ ಸುರಕ್ಷಿತ ಜಾಗದಲ್ಲಿ ಅಳವಡಿಸಬೇಕು’ ಎಂದು ಹೇಳಿದರು.

‘ಬ್ಯಾಂಕ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮೊಬೈಲ್ ನಂಬರ್ಗೆ ಎಚ್ಚರಿಕೆ ಸಂದೇಶ ಬರುವ ರೀತಿಯಲ್ಲಿ ತಂತ್ರಜ್ಞಾನದ ವ್ಯವಸ್ಥೆ ಮಾಡಿಕೊಳ್ಳಬೇಕು. ಸಿ.ಸಿ.ಟಿ.ವಿ ಕ್ಯಾಮೆರಾಗಳು ದಿನದ 24 ತಾಸು ಕಾರ್ಯ ನಿರ್ವಹಿಸಬೇಕು’ ಎಂದು ಸೂಚಿಸಿದರು.

‘ಬ್ಯಾಂಕ್, ಎಟಿಎಂ, ಕರೆನ್ಸಿ ಚೆಸ್ಟ್ಗಳ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ತರಬೇತಿ ಪಡೆದ, ಪ್ರಮಾಣೀಕೃತ ಹಾಗೂ ನೋಂದಾಯಿತ ಸಂಸ್ಥೆಗಳಿಂದ ಮಾತ್ರ ಅನುಭವಿ ಸೆಕ್ಯುರಿಟಿ ಗಾರ್ಡ್ಗಳನ್ನು ಅವರ ಪೂರ್ವಾಪರ ಕಡ್ಡಾಯವಾಗಿ ಪರಿಶೀಲಿಸಿದ ನಂತರವೇ ನೇಮಕ ಮಾಡಿಕೊಳ್ಳಬೇಕು. ಕರ್ತವ್ಯ ನಿರ್ವಹಿಸುವಾಗ ಕಡ್ಡಾಯವಾಗಿ ಬಂದೂಕು ಇಟ್ಟುಕೊಂಡಿರಬೇಕು’ ಎಂದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ–1 ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ–2 ಎ.ಜಿ. ಕಾರಿಯಪ್ಪ, ಲೀಡ್ ಬ್ಯಾಂಕ್ ಅಧಿಕಾರಿ ಚಂದ್ರಶೇಖರ್, ಡಿಎಸ್ಪಿಗಳಾದ ಬಾಬು ಆಂಜನಪ್ಪ, ಎಂ. ಸುರೇಶ್ ಇದ್ದರು.

Highlights - 15 ದಿನಗಳೊಳಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿ ಕ್ಯಾಮೆರಾಗಳು 24 ತಾಸು ಕಾರ್ಯ ನಿರ್ವಹಿಸಲಿ ಸೆಕ್ಯುರಿಟಿ ಗಾರ್ಡ್ಗಳು ಕಡ್ಡಾಯವಾಗಿ ಬಂದೂಕು ಇಟ್ಟುಕೊಂಡಿರಬೇಕು

Cut-off box - ಸುರಕ್ಷತೆಗೆ ಆದ್ಯತೆ ನೀಡಿ ಇತ್ತೀಚೆಗೆ ನ್ಯಾಮತಿಯ ಬ್ಯಾಂಕ್ವೊಂದರಲ್ಲಿ ಅಂದಾಜು ₹ 13 ಕೋಟಿ ಮೌಲ್ಯದ 17 ಕೆ.ಜಿ. ಚಿನ್ನಾಭರಣ ದರೋಡೆ ಮಾಡಲಾಗಿದೆ. ಇದಕ್ಕೆ ಭದ್ರತಾ ಲೋಪ ಕಾರಣವಾಗಿದೆ. ಶಿವಮೊಗ್ಗದ ವಿನೋಬನಗರ ಸೇರಿ ಹಲವು ಕಡೆ ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಕಳವು ಯತ್ನಗಳು ನಡೆದಿವೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಇದರಿಂದಾಗಿ ತಂತ್ರಜ್ಞಾನ ಬಳಸಿಕೊಂಡು ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಎಸ್ಪಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.