ತುಮಕೂರು: ಜಿಲ್ಲೆಯ ಐದು ಸ್ಥಳಗಳಲ್ಲಿ ₹350.59 ಕೋಟಿ ವೆಚ್ಚದಲ್ಲಿ ರೈಲ್ವೆ ಗೇಟ್ಗಳ ಬಳಿ ಮೇಲು ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದ ರೈಲ್ವೆ ಸಚಿವಾಲಯ, ಈಗ ಹೊಸದಾಗಿ ₹60.07 ಕೋಟಿ ವೆಚ್ಚದಲ್ಲಿ ಮತ್ತೆ ಮೂರು ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಿದೆ.

ಗುಬ್ಬಿ ತಾಲ್ಲೂಕಿನ ಕಳ್ಳಿಪಾಳ್ಯ ರಸ್ತೆಯಲ್ಲಿ ₹13.44 ಕೋಟಿ ವೆಚ್ಚದಲ್ಲಿ ಕೆಳ ಸೇತುವೆ, ಬೆಂಚಗೆರೆ ಗೇಟ್ ಬಳಿ ₹36.62 ಕೋಟಿ ವೆಚ್ಚದಲ್ಲಿ ರಸ್ತೆ ಮೇಲು ಸೇತುವೆ ಹಾಗೂ ತುಮಕೂರು ತಾಲ್ಲೂಕಿನ ಬಂಡಿಹಳ್ಳಿ ಗೇಟ್ ಬಳಿ ₹10.01 ಕೋಟಿ ವೆಚ್ಚದಲ್ಲಿ ಕೆಳ ಸೇತುವೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಮೂರು ಸೇತುವೆಗಳ ನಿರ್ಮಾಣಕ್ಕೆ ಪೂರ್ಣ ಹಣವನ್ನು ರೈಲ್ವೆ ಇಲಾಖೆಯೇ ಭರಿಸಲಿದೆ. ಈಗ ಒಪ್ಪಿಗೆ ಕೊಟ್ಟಿರುವುದು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 8 ಸೇತುವೆ ನಿರ್ಮಾಣಕ್ಕೆ ₹410 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಬಟವಾಡಿ, ಬಡ್ಡಿಹಳ್ಳಿ, ಕ್ಯಾತ್ಸಂದ್ರ, ಮೈದಾಳ, ಹರೆಯೂರು ರಸ್ತೆ, ಮಲ್ಲಸಂದ್ರ ಗೇಟ್, ನಿಟ್ಟೂರು ರೈಲ್ವೆ ನಿಲ್ದಾಣಕ್ಕೆ ಕಳೆದ ಎರಡು ದಿನಗಳ ಹಿಂದೆ ಸಚಿವರು ಭೇಟಿನೀಡಿ ರಸ್ತೆ ಮೇಲು ಸೇತುವೆ ನಿರ್ಮಾಣ ಸಂಬಂಧ ಪರಿಶೀಲನೆ ನಡೆಸಿದ್ದರು.

ರೈಲ್ವೆ ಇಲಾಖೆ ಅಧಿಕಾರಿಗಳು, ಜಿಲ್ಲೆಯ ಅಧಿಕಾರಿಗಳ ಜತೆ ಭೇಟಿನೀಡಿ, ಅಲ್ಲಿನ ವಸ್ತು ಸ್ಥಿತಿ ಪರಿಶೀಲಿಸಿದ್ದರು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದರು. ಈಗಾಗಲೇ ಮಂಜೂರಾಗಿರುವ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಿದ್ದರು.

ನಗರದ ಬಟವಾಡಿ, ಬಡ್ಡಿಹಳ್ಳಿ, ಕ್ಯಾತ್ಸಂದ್ರ, ಹರೆಯೂರು ರಸ್ತೆ, ನಿಟ್ಟೂರು ರೈಲು ನಿಲ್ದಾಣದ ಸಮೀಪ ಒಟ್ಟು ₹350 ಕೋಟಿ ವೆಚ್ಚದಲ್ಲಿ 5 ಮೇಲು ಸೇತುವೆ ನಿರ್ಮಾಣಕ್ಕೆ ಜುಲೈ 15ರಂದು ಸಚಿವರು ಒಪ್ಪಿಗೆ ಕೊಡಿಸಿದ್ದರು.

‘ವಿ.ಸೋಮಣ್ಣ ಅವರು ಸಚಿವರಾದ ನಂತರ ಜಿಲ್ಲೆಗೆ ಸಾಕಷ್ಟು ರೈಲ್ವೆ ಯೋಜನೆಗಳನ್ನು ತಂದು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ’ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.

ಕಳ್ಳಿಪಾಳ್ಯ ರಸ್ತೆಯಲ್ಲಿ ಕೆಳ ಸೇತುವೆ ಬೆಂಚಗೆರೆ ಗೇಟ್ ಬಳಿ ಮೇಲು ಸೇತುವೆ ಬಂಡಿಹಳ್ಳಿ ಗೇಟ್ ಬಳಿ ಕೆಳ ಸೇತುವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.