ತುಮಕೂರು: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಾಗಿ ನೀಡುತ್ತಿದ್ದ ನಗದು ಹಣ ಕಳೆದು ಎರಡು ತಿಂಗಳಿನಿಂದ ಪಾವತಿಯಾಗಿಲ್ಲ. ಜಿಲ್ಲೆಯಲ್ಲಿ ₹70 ಕೋಟಿ ಹಣ ಪಾವತಿ ಮಾಡಬೇಕಿದೆ.

ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ 5 ಕೆ.ಜಿ ಅಕ್ಕಿ ಬದಲಾಗಿ ಹಣ ಜಮಾ ಮಾಡಲಾಗುತ್ತಿದೆ. ಪ್ರತಿಯೊಬ್ಬ ಫಲಾನುಭವಿಗೆ ಕೆ.ಜಿಗೆ ₹34ರಂತೆ 5 ಕೆ.ಜಿಗೆ ₹170 ಹಣ ಪ್ರತಿ ತಿಂಗಳು ಪಾವತಿಸಲಾಗುತ್ತದೆ. ಜೂನ್ನಲ್ಲಿ ಕೊನೆಯ ಬಾರಿಗೆ ಹಣ ಪಾವತಿಯಾಗಿದೆ. ಸೆಪ್ಟೆಂಬರ್ ತಿಂಗಳು ಮುಗಿಯುತ್ತಾ ಬಂದರೂ ಜುಲೈ, ಆಗಸ್ಟ್ ತಿಂಗಳ ಹಣ ಇನ್ನೂ ಬಿಡುಗಡೆಯಾಗಿಲ್ಲ. ಈಗ ಸೆಪ್ಟೆಂಬರ್ ಸೇರ್ಪಡೆಯಾದರೆ ಮೂರು ತಿಂಗಳ ಹಣ ಬಾಕಿ ಉಳಿದುಕೊಳ್ಳಲಿದೆ.

ಜಿಲ್ಲೆಯಲ್ಲಿ ಒಟ್ಟು 21.11 ಲಕ್ಷ ಫಲಾನುಭವಿಗಳು ಯೋಜನೆ ವ್ಯಾಪ್ತಿಗೆ ಬರುತ್ತಾರೆ. ನಗದು ನೀಡಲು ಪ್ರತಿ ತಿಂಗಳು ₹35 ಕೋಟಿ ಅಗತ್ಯವಿದೆ. ಜೂನ್ ತಿಂಗಳಲ್ಲಿ 6,11,216 ಪಡಿತರ ಚೀಟಿಗಳಿಗೆ ₹34.71 ಕೋಟಿ ಬಿಡುಗಡೆಯಾಗಿದೆ. ಜುಲೈನಲ್ಲಿ 6,11,316 ಪಡಿತರ ಚೀಟಿಗಳಿಗೆ ₹34.72 ಕೋಟಿ ಬರಬೇಕಿದೆ. ಆಗಸ್ಟ್ ತಿಂಗಳಿಗೂ ಇಷ್ಟೇ ಹಣ ಸರ್ಕಾರ ಬಿಡುಗಡೆ ಮಾಡಬೇಕಿದೆ.

ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಅನ್ನಭಾಗ್ಯ ಅತೀ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಚುನಾವಣೆಗೂ ಮುನ್ನ 10 ಕೆ.ಜಿ ಅಕ್ಕಿ ನೀಡುವ ಭರವಸೆ ಕೊಟ್ಟಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ನಂತರ ಅಕ್ಕಿಯ ಕೊರತೆಯಿಂದ 5 ಕೆ.ಜಿ ಅಕ್ಕಿ, ಉಳಿದ 5 ಕೆ.ಜಿ ಅಕ್ಕಿ ಬದಲಾಗಿ ನಗದು ಪಾವತಿಸುತ್ತಿದೆ. ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 2023ರ ಜುಲೈ ತಿಂಗಳಿಂದ 2024ರ ಜೂನ್ ವರೆಗೆ ₹405.38 ಕೋಟಿ ಹಣ ಖರ್ಚು ಮಾಡಿದೆ.

ಯೋಜನೆ ಪ್ರಾರಂಭದಲ್ಲಿ ಫಲಾನುಭವಿಗಳ ಸಂಖ್ಯೆ ಕಡಿಮೆ ಇತ್ತು. ಈಗ ಆ ಸಂಖ್ಯೆ ಜಾಸ್ತಿಯಾಗಿದೆ. ಕಳೆದ ವರ್ಷದ ಜುಲೈನಲ್ಲಿ 5,29,515 ಕಾರ್ಡ್ಗಳು ಯೋಜನೆ ವ್ಯಾಪ್ತಿಗೆ ಸೇರಿದ್ದವು, ₹30.43 ಕೋಟಿ ಹಣ ಬಿಡುಗಡೆಯಾಗಿತ್ತು. ಇದೀಗ 6,11,316 ಪಡಿತರ ಚೀಟಿಗಳು ಯೋಜನೆಯಡಿ ಬರುತ್ತವೆ.

‘ಗ್ರಾಮೀಣ ಭಾಗದ ಜನರಿಗೆ ಅನ್ನಭಾಗ್ಯ ಯೋಜನೆ ನೆರವಾಗಿದೆ. ಕೂಲಿ ಕಾರ್ಮಿಕರು, ಬಡವರು ಈ ಅಕ್ಕಿಯಿಂದ ಜೀವನ ನಡೆಸುತ್ತಿದ್ದಾರೆ. ಅಕ್ಕಿಯ ಬದಲಾಗಿ ಕೊಡುವ ಹಣ ಸಕಾಲದಲ್ಲಿ ಜನರಿಗೆ ತಲುಪುತ್ತಿಲ್ಲ. 10 ಕೆ.ಜಿ ಅಕ್ಕಿ ಕೊಟ್ಟರೆ ತುಂಬಾ ಅನುಕೂಲವಾಗುತ್ತದೆ’ ಎಂದು ಹೆಬ್ಬೂರಿನ ಲಿಂಗಮೂರ್ತಿ ಪ್ರತಿಕ್ರಿಯಿಸಿದರು.

ಜುಲೈ ತಿಂಗಳ ಅನ್ನಭಾಗ್ಯ ಯೋಜನೆಯ ವಿವರ

ತಾಲ್ಲೂಕು;ಪಡಿತರ ಚೀಟಿ;ಫಲಾನುಭವಿ;ನಗದು (₹ ಲಕ್ಷ)

ಚಿಕ್ಕನಾಯಕನಹಳ್ಳಿ;52,823;1,78,340;2,91,81,860

ಗುಬ್ಬಿ;61,971;2,20,178;3,62,44,680

ಕೊರಟಗೆರೆ;38,827;1,36,062;2,20,00,720

ಕುಣಿಗಲ್;54,990;1,86,862;3,08,43,100

ಮಧುಗಿರಿ;62,966;2,12,784;3,46,78,470

ಪಾವಗಡ;54,810;1,94,055;3,16,89,530

ಶಿರಾ;74,398;2,60,490;4,27,47,350

ತಿಪಟೂರು;52,960;1,72,846;2,84,71,260

ತುಮಕೂರು;1,16,376;4,09,328;6,83,95,080

ತುರುವೇಕೆರೆ;41,195;1,40,904;2,30,13,920

ಒಟ್ಟು;6,11,316;21,11,849;34,72,65,970

6,11,316 ಪಡಿತರ ಚೀಟಿಗಳು 21.11 ಲಕ್ಷ ಫಲಾನುಭವಿಗಳು ನಗದು ಪಾವತಿ ವಿಳಂಬ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.