ತುಮಕೂರು: ಸಿದ್ಧಗಂಗಾ ಮಠದ ಉತ್ತರಾಧಿಕಾರಿಯನ್ನಾಗಿ ಮನೋಜ್ ಕುಮಾರ್ ಅವರನ್ನು ನೇಮಕ ಮಾಡಿದ್ದು, ಪಟ್ಟಾಧಿಕಾರ ಮಹೋತ್ಸವ ಏ. 23ರಂದು ಬಸವ ಜಯಂತಿ, ಅಕ್ಷಯ ತೃತೀಯ ದಿನದಂದು ಮಠದಲ್ಲಿ ನೆರವೇರಲಿದೆ.

ಸಿದ್ಧಲಿಂಗ ಸ್ವಾಮೀಜಿ ಮಠಾಧ್ಯಕ್ಷರಾದ ನಂತರ ಉತ್ತರಾಧಿಕಾರಿ ನೇಮಕಗೊಂಡಿರಲಿಲ್ಲ. ಈಗ 35 ವರ್ಷದ ಮನೋಜ್ ಕುಮಾರ್ ಅವರನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿದ್ದು, ಪಟ್ಟಾಧಿಕಾರ ಕಾರ್ಯಕ್ರಮಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ನೆಲಮಂಗಲ ತಾಲ್ಲೂಕು ಮೈಲನಹಳ್ಳಿ ಗ್ರಾಮದ ಎಂ.ಬಿ.ಷಡಕ್ಷರಯ್ಯ, ವಿರುಪಾಕ್ಷಮ್ಮ ದಂಪತಿ ಪುತ್ರ. ಎಂಎಸ್ಸಿ, ಎಂಎ ವಿದ್ವತ್ ಶಿಕ್ಷಣ ಪಡೆದಿದ್ದು ಪ್ರಸ್ತುತ ನಗರದ ಸಿದ್ಧಗಂಗಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಾಗಡಿ ತಾಲ್ಲೂಕಿನ ಕಂಚುಗಲ್ ಬಂಡೆ ಮಠಕ್ಕೆ ಕೆ.ಎಂ. ಹರ್ಷ, ದೇವನಹಳ್ಳಿ ತಾಲ್ಲೂಕಿನ ಬಸವ ಕಲ್ಯಾಣ ಮಠಕ್ಕೆ ಗೌರೀಶ್ ಕುಮಾರ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇವರ ಪಟ್ಟಾಧಿಕಾರ ಮಹೋತ್ಸವವು ಭಾನುವಾರ ನೆರವೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.