ಕುಣಿಗಲ್: ಇತಿಹಾಸ ಪ್ರಸಿದ್ಧ ಮೂಡಲ್ ಕುಣಿಗಲ್ ಕೆರೆ ತುಂಬಿ ಕೋಡಿಯಾದ ಹಿನ್ನೆಲೆಯಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಡಾ.ರಂಗನಾಥ್ ಗಂಗಾರತಿ ಮಾಡುವ ಮೂಲಕ ಶುಕ್ರವಾರ ಬಾಗಿನ ಅರ್ಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಡಿ.ಕೆ.ಸುರೇಶ್, ‘ಪಶ್ಚಿಮಘಟ್ಟ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾದ ಕಾರಣ ನೀರು ಹೆಚ್ಚಾಗಿ ಕೆರೆ ಕೋಡಿಯಾಗುತ್ತಿದೆ. ತಾಲ್ಲೂಕಿನ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ಲಿಂಕ್ ಕೆನಾಲ್ ಯೋಜನೆ ಪೂರ್ಣವಾದಾಗ ಮಾತ್ರ ಸಾಧ್ಯ. ಜಿಲ್ಲೆಯ ಕೆಲ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಕೆನಾಲ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವೈಜ್ಞಾನಿಕ ಸಮಸ್ಯೆಗಳ ಪರಿಹಾರಕ್ಕಾಗಿ ಸಮಿತಿ ರಚನೆಯಾಗಿದೆ. ಪರಿಹಾರ ಸಹ ಸಿಕ್ಕಿದ್ದು, ಕೆಲವೇ ತಿಂಗಳಲ್ಲಿ ಲಿಂಕ್ ಕೆನಾಲ್ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ಪ್ರಶ್ನೆ ಮಾಡಿದಾಗ, ‘ಕಾದು ನೋಡಿ, ಮೈತ್ರಿ ನಡೆಗೆ ತಕ್ಕ ಉತ್ತರ ನೀಡುವವರು ಅಭ್ಯರ್ಥಿಯಾಗುತ್ತಾರೆ’ ಎಂದರು.

ಡಿವೈಎಸ್ಪಿ ಓಂಪ್ರಕಾಶ್, ಸಿಪಿಐ ಮಾದ್ಯಾನಾಯಕ್, ಪಿಎಸ್ಐ ಕೃಷ್ಣಕುಮಾರ್, ಪುರಸಭೆ ಮುಖ್ಯಾಧಿಕಾರಿ ಮಂಜುಳಾ, ಪುರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.