ಶಿರಾ: ನಗರದ ಬೆಸ್ಕಾಂ ಕಚೇರಿ ಸಮೀಪ ಶನಿವಾರ ರಾತ್ರಿ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕ್ರೈನ್ ಉರುಳಿ ಬಿದ್ದು ವಿದ್ಯುತ್ ಕಂಬ ಮುರಿದು ಬಿದ್ದಿದೆ.

ನಗರದ ಹೃದಯ ಭಾಗದಲ್ಲಿಯೇ ಗ್ಯಾಸ್ ಪೈಪ್‌ಲೈನ್ ಹಾದು ಹೋಗುತ್ತಿದ್ದು, ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದರೂ ನಗರಸಭೆ ಮೌನವಾಗಿದ್ದು, ಸಾರ್ವಜನಿಕರ ವಿರೋಧವನ್ನು ಲೆಕ್ಕಿಸದೆ ಅನುಮತಿ ನೀಡಿದ್ದಾರೆ ಎಂಬ ದೂರು ಕೇಳಿ ಬಂದಿದೆ.

ಅಮರಾಪುರ ರಸ್ತೆಯಲ್ಲಿ ಕಾಮಗಾರಿ ನಡೆಸುತ್ತಿದ್ದು ಬೆಸ್ಕಾಂ ಬಳಿ ಮೂರು ದಿನಗಳ ಹಿಂದೆ ಪೈಪ್‌ಲೈನ್ ಆಳವಡಿಸಲು ಜೆಸಿಬಿಯಿಂದ ಗುಂಡಿ ತೆಗೆಯುವ ಸಮಯದಲ್ಲಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳು ಬಾಗಿ ಜನರಲ್ಲಿ ಆತಂಕ ಮೂಡಿಸಿದ್ದವು.

ಶನಿವಾರ ರಾತ್ರಿ ಕ್ರೈನ್ ಮೂಲಕ ಗ್ಯಾಸ್ ಪೈಪ್ ಆಳವಡಿಸುವ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕ್ರೈನ್ ಉರುಳಿಬಿದ್ದಿದ್ದು, ಈ ಸಮಯದಲ್ಲಿ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಕಂಬ ಮುರಿದಿದೆ. ರಾತ್ರಿಯಾದ ಕಾರಣ ಬಾರಿ ಅನಾಹುತ ತಪ್ಪಿದೆ. ಭಾನುವಾರ ಬೆಳಿಗ್ಗೆ ವಿದ್ಯುತ್ ಕಂಬ ಬದಲಿಸಿ ವಿದ್ಯುತ್ ಲೈನ್ ಸರಿಪಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.