ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ನೆಲಸಿರಿ’ಯಿಂದ ಪ್ರಬಂಧ ಸ್ಪರ್ಧೆ: ಒಟ್ಟು ₹50 ಸಾವಿರ ಮೊತ್ತದ ಬಹುಮಾನ

Published : 6 ಜುಲೈ 2024, 5:48 IST
Last Updated : 6 ಜುಲೈ 2024, 5:48 IST
ಫಾಲೋ ಮಾಡಿ
Comments

ತುಮಕೂರು: ನೆಲಸಿರಿ ಸಾಂಸ್ಕೃತಿಕ ವೇದಿಕೆಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು, ಆಸಕ್ತರು ಭಾಗವಹಿಸಬಹುದು.

ಪಿಯುಸಿ ಮತ್ತು ಸಮಾನಾಂತರ ವಿದ್ಯಾರ್ಥಿಗಳಿಗೆ ‘ಜಾತ್ಯತೀತ ನಡವಳಿಕೆ– ಸಂಪನ್ನ (ಪರಿಪೂರ್ಣ) ವ್ಯಕ್ತಿತ್ವದ ಕಡೆಗೆ ದೃಢ ಹೆಜ್ಜೆ’ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ‘ಜಾತಿ ವ್ಯವಸ್ಥೆ– ಸಾಮಾಜಿಕ ಅಸಮಾನತೆಯ ಮೂಲ ಬೇರು’ ವಿಷಯ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಿದೆ.

ಮೊದಲ ಬಹುಮಾನ ಪಡೆದ 8 ಜನರಿಗೆ ತಲಾ ₹2 ಸಾವಿರ, ದ್ವಿತೀಯ ಸ್ಥಾನ ಪಡೆದ 12 ಮಂದಿಗೆ 1,500, ತೃತೀಯ ಬಹುಮಾನಕ್ಕೆ ಭಾಜನರಾದ 16 ಜನರಿಗೆ ತಲಾ ₹1 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಆಸಕ್ತರು ಆ. 5ರ ಒಳಗೆ ತಮ್ಮ ಬರಹಗಳನ್ನು ಪ್ರೊ.ಬಿ.ಕರಿಯಣ್ಣ, ಪ್ರಾಂಶುಪಾಲರು, ವಿಶ್ವವಿದ್ಯಾಲಯ ಕಲಾ ಕಾಲೇಜು, ತುಮಕೂರು ವಿಶ್ವವಿದ್ಯಾಲಯ, ಬಿ.ಎಚ್.ರಸ್ತೆ, ತುಮಕೂರು-572103, ಮೊ 9448660632 ವಿಳಾಸಕ್ಕೆ ತಲುಪಿಸಬೇಕು.

‘ವಿದ್ಯಾರ್ಥಿಗಳು 12 ಪುಟ ಮೀರದಂತೆ ಕೈ ಬರಹದಲ್ಲಿ ಪ್ರಬಂಧ ಬರೆಯಬೇಕು. ಮೊದಲ ಪುಟದ ಮೇಲ್ಭಾಗದಲ್ಲಿ ಹೆಸರು, ವಿಳಾಸ ನಮೂದಿಸಬೇಕು. ಪ್ರಬಂಧದ ಕೊನೆಯಲ್ಲಿ ವಿದ್ಯಾರ್ಥಿ ಸಹಿ ಹಾಗೂ ಕಾಲೇಜಿನ ಪ್ರಾಂಶುಪಾಲರ ದೃಢೀಕರಣ, ಸಹಿ ಮಾಡಿಸಬೇಕು. ಮಾಹಿತಿಗೆ ಮೊ 8861136933, 9845394193, 9611156772 ಸಂಪರ್ಕಿಸಬಹುದು’ ಎಂದು ನೆಲಸಿರಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಗಂಗಾಧರ ಬೀಚನಹಳ್ಳಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾ ಬಸವರಾಜು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT