ಮಕ್ಕಳ ದಾಖಲಾತಿ ಹೆಚ್ಚುತ್ತಿದ್ದು ಕೊಠಡಿ ಬಿಸಿಯೂಟ ವಿತರಿಸುವ ಹಾಲ್ ಸುಸಜ್ಜಿತ ಅಡುಗೆ ಕೋಣೆಯ ಅಗತ್ಯವಿದೆ. ಬ್ರಿಟಿಷರು ಕಟ್ಟಿದ ಎಂಟು ಕೊಠಡಿಗಳು ಸದ್ಯಕ್ಕೆ ದುರಸ್ತಿಯಾಗಬೇಕಿದೆ. ಇಲ್ಲಿನ ಮಕ್ಕಳಿಗೆ ಕೇಂದ್ರೀಯ ಶಾಲೆ ಪಠ್ಯಕ್ರಮದ ಶಿಕ್ಷಣ ನೀಡಲು ಅವಕಾಶ ಕಲ್ಪಿಸಬೇಕು ಎಂದು ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಮನವಿ ಮಾಡುವೆ.
–ಸಿ.ಸತೀಶ್ ಕುಮಾರ್, ಮುಖ್ಯ ಶಿಕ್ಷಕ
ಜೀವನ ಕೌಶಲಕ್ಕೂ ಒತ್ತು ನಮ್ಮ ಶಾಲೆಯಲ್ಲಿ ಖಾಸಗಿ ಶಾಲೆಗಳಲ್ಲಿ ಹೇಳಿಕೊಡುವ ಮಾದರಿಯಲ್ಲೇ ಪಾಠಗಳು ನಡೆಯುತ್ತಿದೆ. ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಕಲೆ ಸಾಹಿತ್ಯ ಕ್ರೀಡೆ ವೈಯಕ್ತಿಕ ಶಿಸ್ತು ಸಂಯಮದಂತಹ ಜೀವನ ಕೌಶಲಗಳ ಬಗ್ಗೆಯೂ ಇಲ್ಲಿನ ಶಿಕ್ಷಕರು ಒತ್ತುಕೊಟ್ಟು ಕಲಿಸುತ್ತಾರೆ.
–ಪೂರ್ಣಶ್ರೀ, ವಿದ್ಯಾರ್ಥಿನಿ
ಹೆಚ್ಚಿನ ಅನುದಾನ ಅಗತ್ಯ ಸಾಹಿತಿಗಳು ರಾಜಕಾರಣಿಗಳು ಎಂಜಿನಿಯರ್ ವೈದ್ಯರು ಸಮಾಜ ಸೇವಕರಂತಹ ದೊಡ್ಡ ಸಾಧಕರನ್ನು ನೀಡಿದ ದಶಕದ ಶಾಲೆ. ಗುಣಮಟ್ಟದ ಶಿಕ್ಷಣ ಹಾಗೂ ಪಠ್ಯೇತರ ಕಲಿಕೆಗೂ ವಿಶೇಷ ಕಾಳಜಿ ನೀಡುತ್ತಾರೆ. ಸರ್ಕಾರ ಹೆಚ್ಚಿನ ಅನುದಾನ ನೀಡಿ ಕನ್ನಡ ಶಾಲೆ ಉಳಿಸಲಿ.
–ನಂರಾಜು ಮುನಿಯೂರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ತುರುವೇಕೆರೆ