ತಿಪಟೂರು: ಹಲಸಿನ ಹಣ್ಣು ನಾಲಿಗೆಗೆ ರುಚಿ ನೀಡುವ ಜತೆಗೆ ಅತ್ಯದ್ಭುತ ಔಷಧೀಯ ಗುಣಗಳಿಂದ ಕೂಡಿದೆ. ಇದರ ಪೋಷಕಾಂಶ ಅನೇಕ ಸಮಸ್ಯೆಗಳಿಗೆ ರಾಮಬಾಣ ಎಂದು ತೋವಿನಕೆರೆ ಸಿರಿ ಸಂಘದ ಸಂಸ್ಥಾಪಕ ಪದ್ಮರಾಜು ತಿಳಿಸಿದರು.

ತಾಲ್ಲೂಕಿನ ತಡಸೂರು ಗ್ರಾಮದಲ್ಲಿ ಬುಧವಾರ ಕೃಷಿ ವಿಜ್ಞಾನ ಕೇಂದ್ರ, ಕೊನೇಹಳ್ಳಿ ಹಾಗೂ ಹಳ್ಳಿ ಸಿರಿ ಸಂಘ ಆಶ್ರಯದಲ್ಲಿ ಹಲಸಿನ ಉತ್ಪಾದನಾ ತಾಂತ್ರಿಕತೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಲಸಿನ ಹಣ್ಣಿನಲ್ಲಿ ಉತ್ತಮವಾದ ಆರ್ಯುವೇದ ಗುಣವಿದೆ. ಯಾವುದೇ ರಾಸಾಯನಿಕ ವಸ್ತುಗಳ ಮಿಶ್ರಣವಿಲ್ಲದೆ ಇರುವುದರಿಂದ ಉತ್ತಮ ಆಹಾರವಾಗಿದೆ. ಮಾನವನ ಪಚನಕ್ರಿಯೆ ಸೇರಿದಂತೆ ಸಿ, ಎ ವಿಟಮಿನ್ ಅಂಶವಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹಿಂದೆ ಹಳ್ಳಿಗಳಲ್ಲಿ ವಾಸಿಸುತ್ತಿರುವವರಿಗೆ ಮಾತ್ರ ಸೀಮಿತವಾಗಿದ್ದ ಹಲಸಿನ ಹಣ್ಣಿನ ಸೇವನೆ ಇದೀಗ ಪಟ್ಟಣಗಳಲ್ಲಿ ಸೂಪರ್ ಮಾರ್ಕೆಟ್‍ನಲ್ಲಿ ಸಿಗುತ್ತದೆ ಎಂದರು.

ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ವಿ.ಗೋವಿಂದಗೌಡ ರೈತ ಹಲಸು ಬೆಳೆಯನ್ನು ಉಪ ಬೆಳೆಯಾಗಿ ಪರಿಗಣಿಸಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ-ಹೊಸ ವಿವಿಧ ಬಗೆಯ ಹಲಸು ಬೆಳೆ ಬೆಳೆಯುವವರ ಜತೆಗೆ ಮೌಲ್ಯವರ್ಧಿತ ಪದಾರ್ಥ ತಯಾರಿಸಿ ಮಾರಾಟ ಮಾಡುವ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸಬಹುದು ಎಂದರು.

ಭಾರತೀಯ ಕಿಸಾನ್ ಸಂಘದ ತುಮಕೂರು ಜಿಲ್ಲಾ ಘಟಕ ಮಹಿಳಾ ಪ್ರಮಖ್ ನವೀನ ಸದಾಶಿವಯ್ಯ ಮಾತನಾಡಿ, ರೈತರು ಮುಖ್ಯ ಬೆಳೆಗೆ ಸಿಗುವ ಬೆಲೆ ಬಗ್ಗೆ ಯೋಚಿಸಿ ಉಳಿದ ಬೆಳೆಗಳನ್ನು ನಿರ್ಲಕ್ಷಿಸುವುದು ಬೇಡ. ಪ್ರತಿಯೊಂದರ ಮೌಲ್ಯವರ್ಧನೆ ಮಾಡಿ ಹಣಗಳಿಸಬಹುದು ಎಂದು ತಿಳಿಸಿಕೊಟ್ಟರು.

ಕೊನೆಹಳ್ಳಿ ಆಯಷ್ ಹಿರಿಯ ವೈಧ್ಯಾಧಿಕಾರಿ ಡಾ.ಸುಮನಾ, ಮಾತನಾಡಿ ಹಲಸಿನ ಹಣ್ಣಿನಲ್ಲಿ ಹೇರಳವಾಗಿರುವ ಜೀವಸತ್ವ ದೇಹಕ್ಕೆ ಒಳ್ಳೆಯದು. ವಿಟಮಿನ್ ಸಿ ಮತ್ತು ಎ ಹೇರಳವಾಗಿ ಕಂಡುಬರುತ್ತದೆ. ಇದು ದೇಹದಲ್ಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ತಿಳಿಸಿದರು.

ತಿಪಟೂರು ರೈತ ಉತ್ಪಾದಕರ ಸಂಘದ ನಿರ್ದೇಶಕಿ ಪಿ.ರೇಖಾಮಂಜುನಾಥ್ ಮಾತನಾಡಿ, ಬ್ಯಾಂಕ್‍ಗಳ ಹಣಕಾಸಿನ ನೆರವಿನ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಹಲಸಿನ ಹಣ್ಣು ಮತ್ತು ಬೀಜಗಳಿಂದ ತಯಾರಿಸಿದ ತಿನಿಸಿಗಳು ನೋಡುಗರ ಬಾಯಲ್ಲಿ ನೀರೂರುವಂತೆ ಮಾಡಿದವು. ಹಲಸಿನ ಪಕೋಡ,ಬೋಂಡ, ದೋಸೆ, ಹೋಳಿಗೆ, ಹಲಸಿನ ಹಪ್ಪಳ, ಹಲಸಿನ ಸೊಗೆಯಿಂದ ತಯಾರಿಸಿದ ಮಿಕ್ಸರ್, ಹಲಸಿನ ಶಾವಿಗೆ,ಕೇಸರಿಬಾತ್, ಹಲಸಿನ ಬೀಜದ ಸೂಪ್ ತಯಾರಿಸುವ ತರಬೇತಿ ನೀಡಲಾಯಿತು. ಹಳ್ಳಿ ಸಿರಿ ಸಂಘದ ಮಂಜಮ್ಮ, ಸವಿತ, ಪುಷ್ಪಲತಾ ಮತ್ತು ಶಾನುವಾಜ್ ಹಲಸಿನ ಹಣ್ಣು ಮೌಲ್ಯವರ್ಧಿತ ಪದಾರ್ಥಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ತಿಪಟೂರು ಗ್ರಾಮಾಂತರ ಪೋಲಿಸ್ ವೃತ್ತ ನಿರೀಕ್ಷಕರು ಸಿದ್ಧರಾಮೇಶ್ವರ, ಕೆ.ವಿ.ಕೆ ವಿಜ್ಞಾನಿಗಳಾದ ಡಾ. ನಿತ್ಯಾಶ್ರೀ ಕೆ., ದರ್ಶನ್, ಡಾ.ಕೀರ್ತಿಶಂಕರ್.ಕೆ, ಮನೋಜ್ ಹಾಗೂ ಇತರ ಸಿಬ್ಬಂದಿ ಹಾಗೂ ತಡಸೂರಿನ ನಾಗರಾಜು, ಯೋಗನಂದ ಮೂರ್ತಿ, ತ್ರಿವೇಣಿ ಮತ್ತು ಇತರ ಗ್ರಾಮಸ್ಥರು ಭಾಗವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.