ಪ್ರಜಾವಾಣಿ ವಾರ್ತೆ

ತುಮಕೂರು: ಹಿರಿಯ ಸಾಹಿತಿ ಕವಿತಾ ಕೃಷ್ಣ ಅಂತ್ಯಕ್ರಿಯೆ ಸೋಮವಾರ ನಗರದ ಗಾರ್ಡನ್ ರಸ್ತೆಯ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಿತು.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕವಿತಾ ಕೃಷ್ಣ ಅವರು ಕ್ಯಾತ್ಸಂದ್ರದ ಮನೆಯಲ್ಲಿ ಭಾನುವಾರ ಸಂಜೆ ನಿಧನ ಹೊಂದಿದ್ದರು. ಅವರೇ ನಿರ್ಮಿಸಿಕೊಂಡಿದ್ದ ಸಾಹಿತ್ಯ ಮಂದಿರದಲ್ಲಿ ಮೃತದೇಹವನ್ನು ಇಡಲಾಗಿತ್ತು. ಸೋಮವಾರ ಬೆಳಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಕಚೇರಿ ‘ಕನ್ನಡ ಭವನ’ಕ್ಕೆ ಮೃತ ದೇಹವನ್ನು ತರಲಾಗಿತ್ತು. ಕೆಲ ಸಮಯ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಸಾಹಿತಿಗಳು, ಚಿಂತಕರು, ರಾಜಕೀಯ ಮುಖಂಡರು, ಅವರ ಅಭಿಮಾನಿಗಳು ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು. ಕನ್ನಡ ಭವನದಿಂದ ನೇರವಾಗಿ ಗಾರ್ಡನ್ ರಸ್ತೆಯ ರುದ್ರಭೂಮಿಗೆ ತೆಗೆದುಕೊಂಡು ಹೋಗಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.