ತೋವಿನಕೆರೆ: ಮಳೆ ಇಲ್ಲದೆ ಒಣಗುತ್ತಿರುವ ರಾಗಿ ಪೈರನ್ನು ಉಳಿಸಿಕೊಳ್ಳಲು ಇಲ್ಲಿನ ಟಿ.ಎಲ್.ಸಿದ್ಧಗಂಗಣ್ಣ ಮತ್ತು ಮಹಾದೇವಮ್ಮ ದಂಪತಿ ಟ್ಯಾಂಕರ್‌ನಲ್ಲಿ ನೀರು ತರಿಸಿಕೊಂಡು ಬಿಂದಿಗೆಯಲ್ಲಿ ಹೊಲಕ್ಕೆ ಹಾಕುತ್ತಿದ್ದಾರೆ.

ಇವರು ಜಮೀನಿನಲ್ಲಿ ರಾಗಿ ಬಿತ್ತಿದ್ದು, ಚೆನ್ನಾಗಿ ಬಂದಿದೆ. ಆದರೆ ಹತ್ತು ದಿನದಿಂದ ಮಳೆ ಇಲ್ಲದೆ ಒಣಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಬಂದರೆ ಜಮೀನಿಗೆ ನಾಟಿ ಮಾಡಬಹುದು ಎನ್ನುವ ಉದ್ದೇಶದಿಂದ ಬಿಂದಿಗೆಯಲ್ಲಿ ನೀರು ಹಾಕುತ್ತಿದ್ದಾರೆ.

ಜುಲೈ 10ರಂದು ಎರಡು ಎಕರೆ ನಾಟಿ ಮಾಡಲು ಎಂಟು ಕೆ.ಜಿ ರಾಗಿ ಒಟ್ಟು ಬಿಟ್ಟಿದ್ದೆ. ಸರಿಯಾಗಿ ಮಳೆ ಬಂದಿಲ್ಲ, ಭೂಮಿಯಲ್ಲಿ ತೇವಾಂಶ ಇಲ್ಲ. ಪೈರು ಒಣಗಲು ಪ್ರಾರಂಭವಾಗಿದೆ. ತಲಾ ₹700 ನೀಡಿ ಎರಡು ಟ್ಯಾಂಕರ್ ನೀರು ಬಿಡಿಸಿಕೊಂಡಿದ್ದೇನೆ. ಈಗ ಪೈರು ಉಳಿಸಿಕೊಂಡರೆ ಇನ್ನು ಹತ್ತು ದಿನದವರೆಗೂ ಹಾಕಬಹುದು ಎನ್ನುತ್ತಾರೆ ಮಹಾದೇವಮ್ಮ

ಮಳೆ ಕೊರತೆಯಾಗಿ ಹಲವು ಸಮಸ್ಯೆಗಳು ಕೃಷಿಕರಿಗೆ ಉಂಟಾಗಿದೆ. ಜಮೀನಿನಲ್ಲಿ ರಾಗಿ ಚೆಲ್ಲಿ ಬೆಳದಿದ್ದನು ಕಿತ್ತು ಬೇರೆ ಹಾಕಿದ್ದವರಿಗೆ ಮಳೆ ಬೇಕಾಗಿತು. ಮಳೆ ಬಂದಿಲ್ಲ. ಅಂತಹ ಪೈರು ಬಿಸಿಲಿನ ತಾಪಕ್ಕೆ ಸುಟ್ಟು ಹೋಗುತ್ತವೆ ಎನ್ನುತ್ತಾರೆ ರೈತ ಅಂಜನ್ ಕುಮಾರ್ ಜುಂಜರಾಮನಹಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.