ತುಮಕೂರು: ನಗರದಲ್ಲಿ ಶುಕ್ರವಾರ ಹಸೆಮಣೆ ಏರಿದ ನವ ದಂಪತಿ ನಂತರ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.

ಶಾಂತಿನಗರದ ಸ್ವರೂಪ್ ಮತ್ತು ಗಿರಿನಗರದ ಶ್ವೇತಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮುಹೂರ್ತದ ನಂತರ ಸ್ವರೂಪ್ ಅಳಶೆಟ್ಟಿಕೆರೆಪಾಳ್ಯದಲ್ಲಿ, ಶ್ವೇತಾ ಬಡ್ಡಿಹಳ್ಳಿ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮಂಡಿಪೇಟೆಯ ದೀಪಕ್– ಶಿರಾದ ದಿವ್ಯಾ ಮದುವೆ ನೆರವೇರಿತು. ಮಂಡಿಪೇಟೆ ಸರ್ಕಾರಿ ಕೋಟೆ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ದೀಪಕ್ ಮತ ಹಾಕಿದರು.

ಬಡ್ಡಿಹಳ್ಳಿಯ ತೇಜಸ್ವಿನಿ ಮತ್ತು ಮಡಕಾಶಿರಾದ ಷಣ್ಮುಗ ಸುಂದರ್ ಮದುವೆ ನಗರದಲ್ಲಿ ನಡೆಯಿತು. ವಿವಾಹದ ನಂತರ ತೇಜಸ್ವಿನಿ ಬಡ್ಡಿಹಳ್ಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ವಿಶೇಷ ಮತಗಟ್ಟೆ: ವಿವಿಧೆಡೆ ಮತಗಟ್ಟೆಗಳನ್ನು ಹೂವು, ತಳಿರು ತೋರಣ, ಬಲೂನುಗಳಿಂದ ಸಿಂಗರಿಸಲಾಗಿತ್ತು. ಮತಗಟ್ಟೆಯ ಮುಂಭಾಗದಲ್ಲಿ ‘ತಪ್ಪದೇ ಮತದಾನ ಮಾಡಿ’ ಎಂದು ರಂಗೋಲಿ ಬಿಡಿಸಿದ್ದರು. ಮತದಾನದ ಪ್ರಯುಕ್ತ ವಿವಿಧೆಡೆ ನಿರ್ಮಿಸಿದ್ದ ಮಾದರಿ ಮತಗಟ್ಟೆಗಳು ಗಮನ ಸೆಳೆದವು. ಸಖಿ, ಯುವ, ಅಂಗವಿಕಲರಿಗಾಗಿ ಪ್ರತ್ಯೇಕ ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.