ತಿಪಟೂರು: ನಗರದಿಂದ ಚಿಕ್ಕನಾಯಕನಹಳ್ಳಿ ಮಾರ್ಗವಾಗಿ 12 ಕಿ.ಮೀ ಚಲಿಸಿದಾಗ ಎಡ ಭಾಗದಲ್ಲಿ ಗೋಚರಿಸುವ ನಯನ ಮನೋಹರ ರಮಣೀಯ ತಾಣವೇ ಮಂಚೆಕಲ್ಲು ಬೆಟ್ಟ. ಗಿಡಮೂಲಿಕೆಗಳ ತಾಣವೆಂದೇ ಕರೆಸಿಕೊಳ್ಳುವ ಈ ಬೆಟ್ಟಕ್ಕೀಗ ಗಣಿಗಾರಿಕೆಯ ಭೀತಿ ಎದುರಾಗಿದೆ.

ಆಯುರ್ವೇದದಲ್ಲಿ ಔಷಧಿಗಳ ರಾಜನೆಂದು ಕರೆಯುವ ಸಸ್ಯ ಅಳಲೇಕಾಯಿ. ಮುಪ್ಪನ್ನು ಗೆಲ್ಲುವ, ಯೌವ್ವನವನ್ನು ಕಾಪಾಡುವ, ಅನೇಕ ವ್ಯಾಧಿಗಳನ್ನು ನಿವಾರಿಸುವ, ತ್ರಿದೋಷಗಳನ್ನು ಪರಿಹರಿಸುವ ಹಾಗೂ ಹೃದಯಕ್ಕೆ ಶಕ್ತಿ ನೀಡುವ ಗುಣಗಳಿಂದ ಕೂಡಿರುವ ಸಸ್ಯವೆಂದು ಕರೆಸಿಕೊಳ್ಳುವ ಈ ಗಿಡ ಮಂಚೆಕಲ್ಲು ಬೆಟ್ಟದಲ್ಲಿ ಯಥೇಚ್ಛವಾಗಿದೆ.

ತಾಲ್ಲೂಕಿನ ಬೆನ್ನಾಯಕನಹಳ್ಳಿಯಲ್ಲಿ ಗೋಮಾಳವಿದ್ದು, ಇದರ ವ್ಯಾಪ್ತಿಯಲ್ಲಿಯೇ ಈ ಮಂಚೆಕಲ್ಲು ಬೆಟ್ಟವಿದೆ. ಸುತ್ತಲಿನ ಈರಲಗೆರೆ, ಬಂಡೆಗೇಟ್, ಗೋಪಾಲಹಳ್ಳಿ, ರಾಮೇನಹಳ್ಳಿ, ದೊಡ್ಡಮಾರ್ಪನಹಳ್ಳಿ. ಚಿಕ್ಕಮಾರ್ಪನಹಳ್ಳಿ, ಮಾವಿನಹಳ್ಳಿ ಕಾವಲು, ಶಾಂತಿನಗರ ಎಸ್ಟೆಟ್, ಕಲ್ಕೆರೆ, ಚಿಕ್ಕಈರನಹಳ್ಳಿ ಗೊಲ್ಲರಹಟ್ಟಿ, ಅಣ್ಣೇಮಲ್ಲೇನಹಳ್ಳಿ, ಬೊಮ್ಮೇನಹಳ್ಳಿ, ಆದಿನಾಯಕನಹಳ್ಳಿ ಕಾವಲು ಗ್ರಾಮದ ಗ್ರಾಮಸ್ಥರು, ಸಾವಿರಾರು ರೈತರು ತಮ್ಮ 250ಕ್ಕೂ ಹೆಚ್ಚು ಹಸು, ಎಮ್ಮೆ, 400ಕ್ಕೂ ಹೆಚ್ಚು ಮೇಕೆ ಮತ್ತು 2,000ಕ್ಕೂ ಹೆಚ್ಚು ಕುರಿಗಳ ಆಹಾರಕ್ಕೆ ಇಲ್ಲಿನ ಹುಲ್ಲುಗಾವಲನ್ನೇ ಆಶ್ರಯಿಸಿದ್ದಾರೆ.

ಈ ಮಂಚೆಕಲ್ಲು ಬೆಟ್ಟದಲ್ಲಿ ಅಪಾರ ಸಂಖ್ಯೆಯಲ್ಲಿ ಬೆಳೆದು ನಿಂತಿರುವ ಅಪರೂಪದ ಆಯುರ್ವೇದ ಗುಣವಿರುವ ಅಳಲೇಕಾಯಿ ಸಸ್ಯ ಸಂಕುಲಗಳನ್ನು ಸ್ಪರ್ಶಿಸಿದ ಮಳೆ ನೀರಿನಲ್ಲಿ ಔಷಧಿಯ ಗುಣವಿರುತ್ತದೆ. ಈ ನೀರು, ಗೂಬೆಹಳ್ಳದ ಮೂಲಕ ಸಣ್ಣ ಸಣ್ಣ ಝರಿಗಳನ್ನು ಸೃಷ್ಟಿಸಿ ಗಂಗಮ್ಮನ ಕರೆ ಹಾಗೂ ಬೋರೇಗೌಡನ ಕೆರೆಯನ್ನು ಸೇರುತ್ತಿದೆ ಎನ್ನುವ ನಂಬಿಕೆ ಇದೆ. ಅಂದಿನ ಕಾಲದಲ್ಲಿ ಚರ್ಮರೋಗದಿಂದ ಬಳಲುತ್ತಿದ್ದವರಿಗೆ ಬೋರೇಗೌಡನ ಕೆರೆಯಲ್ಲಿ ಸ್ನಾನ ಮಾಡುವಂತೆ ಹಿರಿಯರು ಸೂಚಿಸುತ್ತಿದ್ದರು ಎನ್ನುತ್ತಾರೆ ಸ್ಥಳೀಯರು.

ಮಂಚೆಕಲ್ಲು ಬೆಟ್ಟ ನಾಟಿ ಔಷಧಿಯ ಗುಣಗಳನ್ನು ಹೊಂದಿರುವ ಅಳಲೇಕಾಯಿ ಮರ, ಕಾಡುಮುತ್ತುಗ, ಮುಳ್ಳುಮುತ್ತುಗದಂತಹ ಗಿಡಮೂಲಿಕೆಗಳು, ಚಿರತೆ, ಕರಡಿ, ನರಿ, ತೋಳ, ಕಾಡು ಹಂದಿ, ಕಾಡುಗುರಿ, ಕಾಡುಕೋಳಿ, ಕತ್ತೆಕಿರುಬ, ಹೆಬ್ಬಾವು, ಮುಳ್ಳುಹಂದಿ, ಚಿಪ್ಪುಹಂದಿ ಸೇರಿದಂತೆ ವಿವಿಧ ಬಗೆಯ ವನ್ಯಜೀವಿಗಳಿಗೆ ಆಶ್ರಯ ತಾಣವೂ ಆಗಿದೆ.

ಹುಚ್ಚಗೊಂಡನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಂಚೆಕಲ್ಲು ಬೆಟ್ಟ 300 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಹೊಂದಿದೆ. ಮಂಚೆಕಲ್ಲು ಬೆಟ್ಟದ ಗೂಬೆಹಳ್ಳದಲ್ಲಿ ಈಗಲೂ ಅಳಲೇಕಾಯಿ ಮರಗಳನ್ನು ನೋಡಬಹುದು. ಸಹ್ಯಾದ್ರಿ ಬೆಟ್ಟದ ಸಾಲು ಮತ್ತು ಪಶ್ಚಿಮ ಘಟ್ಟಗಳಲ್ಲಿ ಹೇರಳವಾಗಿ ಬೆಳೆಯುವ ಅಳಲೇಕಾಯಿಗಿಂತ ಈ ಭಾಗದ ಅಳಲೇಕಾಯಿಗೆ ಹೆಚ್ಚಿನ ಬೇಡಿಕೆಯಿದೆ.

ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರದ ಪಾರಂಪರಿಕ ನಾಟಿ ವೈದ್ಯರು ಹಿಂಗಾರು (ಆಷಾಢ ಮಾಸದ) ಸಮಯದ ಆಸುಪಾಸಿನಲ್ಲಿ ಮಂಚೆಕಲ್ಲು ಬೆಟ್ಟಕ್ಕೆ ಬಂದು ತಿಂಗಳಾನುಗಟ್ಟಲೇ ವಾಸವಿರುತ್ತಿದ್ದರು. ಇಲ್ಲಿನ ಅಳಲೇಕಾಯಿ ತೆರಳುತ್ತಿದ್ದರು ಎನ್ನುತ್ತಾರೆ ಸ್ಥಳೀಯರು. ಈ ಅಪರೂಪ ಸಸ್ಯ ಸಂಕುಲ ಸದ್ಯ ಅರಣ್ಯ ಪ್ರದೇಶ ಒತ್ತುವರಿ ಹಾಗೂ ಗಣಿಗಾರಿಕೆಯಿಂದಾಗಿ ಅವನತಿಯ ಹಾದಿ ಹಿಡಿಯುತ್ತಿದೆ.

ಆಸರೆ ಕಳೆದುಕೊಳ್ಳುವ ಅಲೆಮಾರಿಗಳು

ಕೃಷ್ಣಾ ನದಿ ಪಾತ್ರದಲ್ಲಿ ಬರುವ ಮಂಚೆಕಲ್ಲು ಬೆಟ್ಟದ ಪ್ರದೇಶ ಬೋರನಕಣಿವೆ ಜಲಾಶಯದವರೆಗೆ ಪ್ರಧಾನವಾಗಿ ಹಲವು ಹಳ್ಳಗಳು ಮತ್ತು ಕೆರೆಗಳ ಸಂಪರ್ಕ ಹೊಂದಿದೆ. ಪಶುಪಾಲಕ ಸಮುದಾಯಗಳ ಮೇವು ನೀರಿಗೆ ಆಸರೆಯಾಗಿರುವ ಹುಲ್ಲುಗಾವಲು ಪ್ರದೇಶವಾಗಿದೆ. ಇಲ್ಲಿ ಕಲ್ಲುಗಣಿಗಾರಿಕೆ ಪ್ರಾರಂಭವಾದರೆ ಪಾರಂಪರಿಕ ಅಳಲೇಕಾಯಿ ಮರಗಳು ನಾಶವಾಗುತ್ತದೆ. ಗಂಗಮ್ಮನಕರೆ ಬೋರೇಗೌಡನಕರೆ ಗೂಬೆಕಲ್ಲು ಹಳ್ಳಗಳಿಗೆ ಕಲ್ಲುಗಣಿಗಾರಿಕೆ ನಡೆದು ಹೂಳು ತಂಬಿ ಸ್ಥಳೀಯ ನೈಸರ್ಗಿಕ ಜಲಮೂಲಗಳು ಶಾಶ್ವತವಾಗಿ ಬತ್ತಿಹೋಗುತ್ತವೆ. ಸಾಗುವಳಿ ಭೂಮಿಗಳಿಗೂ ಹಾನಿಯಾಗುತ್ತದೆ. ಅರೆ ಅಲೆಮಾರಿ/ ಅಲೆಮಾರಿ ಸಮುದಾಯಗಳು ನೆಲೆ ಕಳೆದುಕೊಳ್ಳುತ್ತವೆ. ಜೀವವೈವಿಧ್ಯ ನಶಿಸುತ್ತದೆ. ಉಜ್ಜಜ್ಜಿ ರಾಜಣ್ಣ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ

ಬಹುವ್ಯಾಧಿ ನಿವಾರಕ ಅಳಲೇಕಾಯಿ

ಆಯುರ್ವೇದದಲ್ಲಿ ಔಷಧಿಗಳ ರಾಜನೆಂದೇ ಅಳಲೇಕಾಯಿ ಸಸ್ಯವನ್ನು ಕರೆಯುತ್ತಾರೆ. ಶೀತ ಅಸ್ತಮಾ ದೃಷ್ಟಿ ದೋಷ ಮೂತ್ರದ ಸೋಂಕು ಕೂದಲು ಮತ್ತು ಚರ್ಮದ ಸಮಸ್ಯೆಗೆ ಒಣಗಿದ ಪುಡಿ ಅಥವಾ ಹಣ್ಣುಗಳನ್ನು ಬಳಸಿಕೊಂಡು ವಿವಿಧ ಋತುಗಳಲ್ಲಿ ಸೇವಿಸಬಹುದು. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅನ್ನನಾಳದ ಉರಿಯುತ ಎದೆ ಉರಿ ಅತಿಸಾರ ಜಠರ ಹುಣ್ಣು ಮಲಬದ್ಧತೆ ಹೊಟ್ಟೆ ನೋವು ಜಠರ ಸಂಬಂಧಿ ರೋಗಗಳಲ್ಲಿ ಉಪಯುಕ್ತವಾಗಿದೆ. ಅನೇಕ ಸೋಂಕುಗಳ ನಿವಾರಕವಾಗಿದೆ. ವಿಟಮಿನ್ ‘ಸಿ’ ಮೆಗ್ನೀಷಿಯಂ ಪೊಟ್ಯಾಶಿಯಂ ತಾಮ್ರ ಕಬ್ಬಿಣ ಇರುವುದರಿಂದ ಚರ್ಮ ಮತ್ತು ಕೂದಲಿನ ವ್ಯಾಧಿಗೆ ಉತ್ತಮ. ಸುಮನಾ ಹಿರಿಯ ವೈದ್ಯಾಧಿಕಾರಿ ಆಯುಷ್ ಆಸ್ಪತ್ರೆ ಕೊನೇಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.