ಕುಣಿಗಲ್: ಪುನೀತ್ ರಾಜ್ಕುಮಾರ ರವರ ಕಲಾ ಸೇವೆಗಿಂತಲೂ ನಿಸ್ವಾರ್ಥ ಸಮಾಜ ಸೇವೆ ಸದಾ ಸ್ಮರಣೀಯ ಮತ್ತು ಅನುಕರಣೀಯ ಎಂದು ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು.

ಪಟ್ಟಣದ ಗ್ರಾಮದೇವತಾ ವೃತ್ತದಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿ ಸಂಘ ಸೇರಿದಂತೆ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ನಡೆದ ಪುನೀತ್ ರಾಜ್ಕುಮಾರ್ ಸ್ಮರಣೆಯಲ್ಲಿ ಮಾತನಾಡಿದರು.

ಪುನೀತ್ ಅವರ ಸಮಾಜಸೇವೆಗಳು ಅವರ ಮರಣದ ನಂತರವೇ ಬೆಳಕಿಗೆ ಬಂದು ಕನ್ನಡಿಗರಲ್ಲದೆ ದೇಶದ ಜನತೆಗೆ ಅಚ್ಚರಿ ಮೂಡಿಸಿದೆ ಎಂದರು.

ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಅನ್ನದಾನ ನಡೆಯಿತು.

ಸಿಪಿಐ ನವೀನ್ ಗೌಡ, ಪುರಸಭೆ ಸದಸ್ಯ ನಾಗರಾಜು, ಸವಿತ ಸಮಾಜದ ನಾರಾಯಣಸ್ವಾಮಿ, ವಿಶ್ವಕರ್ಮ ಸಮಾಜದ ಕುಣಿಗಲ್ ಕುಮಾರ್, ಕುಂಬಾರ ಸಂಘದ ಅಧ್ಯಕ್ಷ ರಮೇಶ್, ಕರವೇ ಅಧ್ಯಕ್ಷ ಮಂಜುನಾಥ್ ಅವಿನಾಶ್, ಶಿವರಾಜ್ ಕುಮಾರ್ ಅಭಿಮಾನಿ ಬಳಗದ ಶಿವಣ್ಣ, ಜಗದೀಶ, ಅಭಿಮಾನಿ ಸಂಘದ ಮೂರ್ತಿ, ಮಾರುತಿ, ಮುರಳಿ, ಲ್ಯಾಬ್ ಶ್ರೀನಿವಾಸ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.