ತುಮಕೂರು: ಈ ಬಾರಿ ಜಿಲ್ಲೆಯ ಇಬ್ಬರು ಸಾಧಕರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಪವಾಡ ಬಯಲು’ ಮೂಲಕ ಮನೆ ಮಾತಾಗಿರುವ ಹುಲಿಕಲ್ ನಟರಾಜ್ ಹಾಗೂ ಚಿತ್ರಕಲೆಯಲ್ಲಿ ಸಾಧನೆ ಮಾಡಿರುವ ಪ್ರಭು ಹರಸೂರ್ ಅವರಿಗೆ ಪ್ರಶಸ್ತಿ ಸಂದಿದೆ.

ವೈಜ್ಞಾನಿಕ ಚಿಂತಕ: ‘ಪವಾಡ ಬಯಲು’ ಎಂದರೆ ತಕ್ಷಣ ನೆನಪಾಗುವುದು ಹುಲಿಕಲ್ ನಟರಾಜ್. ‘ಪವಾಡ’ದ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ಜನರ ಮುಂದೆ ತೆರೆದಿಟ್ಟವರು. ‘ಪವಾಡವನ್ನು ದೇವ ಮಾನವರು ಮಾಡುವುದಿಲ್ಲ. ಅವರು ಮಾಡುವುದು ಶುದ್ಧ ಮ್ಯಾಜಿಕ್’ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟವರು.

ಕಳೆದ ಎರಡು ದಶಕಗಳಿಂದ ಅವ್ಯಾಹತವಾಗಿ ವೈಜ್ಞಾನಿಕ ಜಾಗೃತಿ ಮೂಡಿಸುತ್ತಲೇ ಮುನ್ನಡೆದಿದ್ದಾರೆ. ಸತ್ಯ ಹೇಳಿ ಹಲವು ಬಾರಿ ಜೀವ ಬೆದರಿಕೆ ಎದುರಿಸಿದ್ದಾರೆ. ನಿಜ ಹೇಳಿದ್ದಕ್ಕೆ ಬಂಧನ ವಾರಂಟ್ ಜಾರಿ ಮಾಡಿಸಿಕೊಳ್ಳಬೇಕಾಯಿತು. ಆದರೆ ಕೋರ್ಟ್ ತೀರ್ಪು ಅವರ ಪರವಾಗಿತ್ತು. ಯಾವ ಬೆದರಿಕೆಗೂ ಜಗ್ಗದೆ ತಮ್ಮ ಕಾಯಕ ಮುಂದುವರಿಸಿದ್ದಾರೆ.

ತುರುವೇಕೆರೆ ತಾಲ್ಲೂಕು ಹುಲಿಕಲ್ ಗ್ರಾಮದಲ್ಲಿ ಜನಿಸಿದ ನಟರಾಜ್ ಅವರು ದೊಡ್ಡಬಳ್ಳಾಪುರದ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪ್ರವೃತ್ತಿಯಲ್ಲಿ ಸಾಹಿತಿ, ವೈಜ್ಞಾನಿಕ ಚಿಂತಕರಾಗಿ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

‘ವಾಸ್ತವ ಸತ್ಯವನ್ನು ನಂಬಿ, ಮೌಢ್ಯಕ್ಕೆ ಬಲಿಯಾಗಬೇಡಿ’ ಎನ್ನುವುದು ಅವರ ಆಗ್ರಹ. ಪವಾಡ ನಡೆದ ಸುದ್ದಿಯಾದ ಸಮಯದಲ್ಲಿ ಅದನ್ನು ಪತ್ತೆ ಹಚ್ಚಿ ವಾಸ್ತವ ಬಯಲು ಮಾಡಿ ವೈಜ್ಞಾನಿಕ ಮನೋಧರ್ಮ ಬಿತ್ತುತ್ತಿದ್ದಾರೆ. ಸುಮಾರು 10 ಸಾವಿರಕ್ಕೂ ಹೆಚ್ಚು ಕಾಠ್ಯಕ್ರಮ ನೀಡಿದ್ದು, ಗಿನ್ನಿಸ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ. ಟಿ.ವಿಗಳಲ್ಲಿ ಸರಣಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ನೀವೂ ಮಾಡಿ ಪವಾಡ-1, ನೀವೂ ಮಾಡಿ ಖಂಡ-2, ಇದೂ ಸಾಧ್ಯ?, ಜೀವ ಕೊಡುವ ಅಮೃತ ಬಿಂದು, ಅಂಗೈಯಲ್ಲಿ ಆರೋಗ್ಯ, ಮನಸ್ಸೇಕೆ ಹೀಗೆ? ಸೇರಿದಂತೆ ಸಾಕಷ್ಟು ಕೃತಿಗಳು ಹೊರ ಬಂದಿವೆ. ಆತ್ಮಕಥೆ ‘ಕಲ್ಲು ಮುಳ್ಳಿನ ಹಾದಿ’ ಗಮನ ಸೆಳೆದಿದೆ.

ರಾಜ್ಯ, ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಲವು ಸಂಘ, ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ. ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಕಲಾ ಸಾಧಕ:

ಪ್ರಭು ಹರಸೂರ್ ಅವರು ಚಿತ್ರಕಲಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಚಿತ್ರಕಲೆಯಲ್ಲಿ ಎಂವಿಎ ಪದವಿ ಪಡೆದು, ನಗರದ ರವೀಂದ್ರ ಕಲಾನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ದೇಶದ ವಿವಿಧ ಸ್ಥಳಗಳಲ್ಲಿ 11 ಬಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದಾರೆ. ಪ್ರಮುಖವಾಗಿ ಬೆಂಗಳೂರಿನ ಇಮೇಜಸ್ ಆರ್ಟ್ ಗ್ಯಾಲರಿ, ಚಿತ್ರಕಲಾ ಪರಿಷತ್, ಮೈಸೂರು ಕಲಾಭವನ, ಮುಂಬೈ ಜಹಂಗೀರ್ ಆರ್ಟ್ ಗ್ಯಾಲರಿ, ಹೋಟೆಲ್ ಓಬೇರಾಯ್ ಹಾಗೂ ಪಾಂಡಿಚೇರಿ, ಗೋವಾ, ಹೈದರಾಬಾದ್ನಲ್ಲಿ ನಡೆದ ಪ್ರದರ್ಶನ ಗಮನ ಸೆಳೆದಿದೆ. ದೇಶದ ವಿವಿಧೆ ಸಮೂಹ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದಾರೆ.

ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕಲಾ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಲಲಿತ ಕಲಾ ಅಕಾಡೆಮಿ, ನವದೆಹಲಿ, ಗೋವಾ, ಮುಂಬೈ, ಪಾಂಡಿಚೇರಿ, ಲಂಡನ್, ಪ್ಯಾರಿಸ್, ಥೈಲ್ಯಾಂಡ್, ಕೆನಡಾ, ಸ್ಕಾಲ್ಯಾಂಡ್, ನ್ಯೂಯಾರ್ಕ್ ಸೇರಿದಂತೆ ಪ್ರಮುಖ ಸಂಗ್ರಹಾಲಯಗಳಲ್ಲಿ ಪ್ರಭು ಅವರ ಕಲಾಕೃತಿಗಳು ಸಂಗ್ರಹಗೊಂಡಿವೆ.

ಪ್ರಶಸ್ತಿ: ಕೇಂದ್ರ ಲಲಿತಕಲಾ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ನಾಗಪುರದ ಎಸ್ಸಿಜಡ್ಸಿಸಿ, ‘ಕ್ಯಾಮಲಿನ್ ಆರ್ಟ್ ಫೌಂಡೇಶನ್’, ಬಾಂಬೆ ಆರ್ಟ್ ಸೊಸೈಟಿ, ಪುಣೆಯ ಲೋಕಮಾನ್ಯ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.