ಪಾವಗಡ: ಪಟ್ಟಣದ ಶನೈಶ್ಚರ ದೇಗುಲಕ್ಕೆ ಶನಿವಾರ ವಿವಿಧೆಡೆಯಿಂದ ಭಕ್ತರು ಭೇಟಿ ನೀಡಿ ದರ್ಶನ ಪಡೆದರು.

ಬೆಳಗಿನ ಜಾವ 4ರಿಂದ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿದ್ದರು. ಬೆಳಗಿನ ಜಾವದಿಂದಲೇ ಸರದಿಯಲ್ಲಿ ನಿಂತು ದರ್ಶನ ಪಡೆದರು.

ದೇಗುಲದ ಪ್ರಾಂಗಣ, ಹೊರಭಾಗ ಸೇರಿದಂತೆ ಶನೈಶ್ಚರ ವೃತ್ತದಿಂದಲೂ ಬಗೆ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು.

ಶುಕ್ರವಾರ ಸಂಜೆಯೇ ವಿವಿಧ ರಾಜ್ಯಗಳಿಂದ ಭಕ್ತರು ಬಂದು ಪಟ್ಟಣದಲ್ಲಿ ವಾಸ್ತವ್ಯ ಹೂಡಿದ್ದರು. ಭಕ್ತರ ಅನುಕೂಲಕ್ಕಾಗಿ ಎಸ್‌ಎಸ್‌ಕೆ ಸಂಘ ಸಂಚಾರಿ ಶೌಚಾಲಯ, ವಾಹನಗಳಲ್ಲಿ ಕುಡಿಯುವ ನೀರು, ಊಟದ ವ್ಯವಸ್ಥೆ, ವಿಶ್ರಾಂತಿ ಪಡೆಯಲು ಕೊಠಡಿ, ಡಾರ್ಮೆಟರಿ ವ್ಯವಸ್ಥೆ ಮಾಡಿತ್ತು.

ಕೆಲ ಸಂಘ ಸಂಸ್ಥೆಗಳ ಪದಾಧಿಕಾರಿಗಳೂ ಭಕ್ತರಿಗೆ ಉಪಹಾರ, ಊಟದ ವ್ಯವಸ್ಥೆ ಮಾಡಿದ್ದರು.

ತೆಂಗಿನ ಕಾಯಿ ದೇಗುಲದೊಳಕ್ಕೆ ಕೊಂಡೊಯ್ಯುವುದನ್ನು ನಿಷೇಧಿಸಿರುವುದರಿಂದ ರಾಶಿ ರಾಶಿ ತೆಂಗಿನಕಾಯಿಗಳನ್ನು ದೇಗುಲದ ಮುಖ್ಯ ಬಾಗಿಲ ಬಳಿಯೇ ಹಾಕಲಾಗಿತ್ತು.

ಖಾಸಗಿ ಪಾರ್ಕಿಂಗ್ ದಂಧೆ: ಖಾಲಿ ನಿವೇಶನ, ಖಾಸಗಿ ಸ್ಥಳಗಳಲ್ಲಿ ಕೆಲ ವ್ಯಕ್ತಿಗಳು ವಾಹನಗಳನ್ನು ನಿಲ್ಲಿಸುವಂತೆ ವಾಹನ ಚಾಲಕರು, ಮಾಲೀಕರಿಗೆ ತಿಳಿಸಿ ಅವರಿಂದ ₹100 ವಸೂಲಿ ಮಾಡುತ್ತಿದ್ದಾರೆ. ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ದೂರದೂರುಗಳಿಂದ ಬರುವ ಭಕ್ತರಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಭಕ್ತರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.