ತುಮಕೂರು: ಕೃಷಿಯಲ್ಲಿ ಅತಿಯಾಗಿ ರಾಸಾಯನಿಕ ಬಳಕೆ ಮಾಡುತ್ತಿರುವುದು ಜೇನು ಹುಳುಗಳಿಗೆ ಕಂಟಕವಾಗಿದ್ದು, ಜಿಲ್ಲೆಯಲ್ಲಿ ಜೇನು ಕೃಷಿಗೆ ಹಿನ್ನಡೆಯಾಗಿದೆ.

ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕಾ ಇಲಾಖೆಯಿಂದ ಜೇನು ಸಾಕಾಣಿಕೆದಾರರಿಗೆ ಅಗತ್ಯ ತರಬೇತಿ ನೀಡಿ, ಜೇನು ಪೆಟ್ಟಿಗೆ ವಿತರಿಸಲಾಗುತ್ತಿದೆ. ಆದರೆ, ಜೇನು ಹುಳುಗಳಿಗೆ ಪೂರಕವಾದ ವಾತಾವರಣ ಇಲ್ಲದೆ ಹುಳುಗಳು ಗೂಡು ಕಟ್ಟುತ್ತಿಲ್ಲ. ಹುಳುವಿನ ಸ್ನೇಹಿಯಾದ ಪ್ರಕೃತಿ ದಿನೇ ದಿನೇ ಕಾಣೆಯಾಗುತ್ತಿದೆ. ಜಮೀನಿನಲ್ಲಿ ಅಳವಡಿಸಿದ ಪೆಟ್ಟಿಗೆಯಲ್ಲಿ ಹುಳು ಬಂದು ಕೂರದಿರುವುದು ರೈತರನ್ನು ಆತಂಕಕ್ಕೆ ತಳ್ಳಿದೆ.

ಇತ್ತೀಚಿನ ವರ್ಷಗಳಲ್ಲಿ ಕೃಷಿಯಲ್ಲಿ ಅಪಾರ ಪ್ರಮಾಣದಲ್ಲಿ ರಾಸಾಯನಿಕ ಬಳಸುತ್ತಿದ್ದು, ಜೇನು ಹುಳುವಿನ ಮೇಲೆ ಪರಿಣಾಮ ಬೀರುತ್ತಿದೆ. ಹೂವಿನ ಮಕರಂದಕ್ಕಾಗಿ ಪೆಟ್ಟಿಗೆಯಿಂದ ಆಚೆ ಹೋಗುವ ಹುಳುಗಳು ಔಷಧಿ ಸಿಂಪಡಿಸಿದ ಹೂವಿನ ಮೇಲೆ ಕೂತು ಸಾಯುತ್ತಿವೆ. ಸಾವಯವ ಪದ್ಧತಿ ಮೂಲಕ ಕೃಷಿ ಮಾಡುತ್ತಿರುವ ಜಮೀನಿನಲ್ಲೂ ರೈತರ ನಿರೀಕ್ಷೆಗೆ ತಕ್ಕಂತೆ ಜೇನು ಉತ್ಪಾದನೆಯಾಗುತ್ತಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಇಟ್ಟಿಗೆ ಕಾರ್ಖಾನೆಗಳು ಜಾಸ್ತಿಯಾಗಿದ್ದು, ಇವು ಹೊರ ಸೂಸುವ ಹೊಗೆ, ಶಾಖ, ಬೂದಿಯಿಂದಲೂ ಹುಳುಗಳ ಜೀವಕ್ಕೆ ಹಾನಿಯಾಗುತ್ತಿದೆ.

ಜಿಲ್ಲೆಯಲ್ಲಿ ಹೆಜ್ಜೇನು, ಕಡ್ಡಿ ಜೇನು, ತುಡುವೆ ಜೇನು, ನಸರು ಜೇನು ಪ್ರಭೇದಗಳು ಪ್ರಮುಖವಾಗಿ ಕಾಣಿಸುತ್ತವೆ. ಹೆಜ್ಜೇನು ಹುಳುಗಳು ಬೃಹತ್ ಮರಗಳಲ್ಲಿ ಆಶ್ರಯ ಪಡೆಯುತ್ತವೆ. ಈಚೆಗೆ ದೊಡ್ಡ ದೊಡ್ಡ ಮರಗಳಿಗೆ ಕೊಡಲಿ ಏಟು ಬೀಳುತ್ತಿದೆ. ಹೆಜ್ಜೇನು ಕಟ್ಟಲು ಸೂಕ್ತ ಜಾಗವೇ ಇಲ್ಲದಂತಾಗಿದ್ದು, ಕಟ್ಟಡ ಗೋಡೆಗಳನ್ನು ಆಶ್ರಯಿಸುವಂತಾಗಿದೆ.

ತುಡುವೆ ಜೇನು ಹುತ್ತಗಳಲ್ಲಿ ಜಾಸ್ತಿ ಕೂರುತ್ತದೆ. ಇತ್ತೀಚೆಗೆ ಹುತ್ತಗಳು ಕಾಣೆಯಾಗುತ್ತಿವೆ. ಗ್ರಾಮೀಣ ಭಾಗದಲ್ಲೂ ಹುತ್ತಗಳನ್ನು ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ವಾತಾವರಣದಿಂದಾಗಿ ಜೇನಿನ ಪ್ರಮುಖ ಪ್ರಭೇದಗಳು ಮರೆಯಾಗುತ್ತಿವೆ.

‘ಜೇನು ಹುಳು ಕೃಷಿಯ ಅವಿಭಾಜ್ಯ ಅಂಗ, ಹುಳುವಿನಿಂದ ಶೇ 15ರಷ್ಟು ಇಳುವರಿ ಹೆಚ್ಚಾಗುತ್ತದೆ. ಇಂತಹ ಜೇನು ಹುಳುಗಳು ಕಣ್ಮರೆಯಾಗುತ್ತಿರುವುದು ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪರಾಗಸ್ಪರ್ಶ ಸಮರ್ಪಕವಾಗಿ ನಡೆಯದೆ ಇಳುವರಿಯೂ ಗಣನೀಯ ಪ್ರಮಾಣದಲ್ಲಿ ಕುಸಿಯತೊಡಗಿದೆ’ ಎನ್ನುತ್ತಾರೆ ಪ್ರಗತಿಪರ ಕೃಷಿಕರು.

ಪೆಟ್ಟಿಗೆ: ‘ಜೇನು ಕೃಷಿಗೆ ಸರ್ಕಾರದಿಂದ ವಿತರಿಸುವ ಪೆಟ್ಟಿಗೆಗಳು ಗುಣಮಟ್ಟದಿಂದ ಕೂಡಿಲ್ಲ. ಎರಡು ವರ್ಷದ ನಂತರ ವಾಸನೆ ಬೀರುತ್ತಿವೆ. ಇದರಿಂದಾಗಿ ಹುಳುಗಳು ಪೆಟ್ಟಿಗೆಯಿಂದ ಹೊರ ಹೋಗುತ್ತಿವೆ. ಇಲಾಖೆಯ ಅಧಿಕಾರಿಗಳು ಪೆಟ್ಟಿಗೆ ವಿತರಿಸಿ ಕೈ ತೊಳೆದುಕೊಳ್ಳುತ್ತಾರೆ. ಎಷ್ಟು ಪೆಟ್ಟಿಗೆಯಲ್ಲಿ ಜೇನು ಸಿಗುತ್ತಿದೆ, ಜೇನು ಕೃಷಿ ಯಾವ ರೀತಿಯಾಗಿದೆ. ರೈತರಿಗೆ ಸಮಸ್ಯೆಯಾದರೆ ಪರಿಹಾರ ಒದಗಿಸುವುದು ಹೇಗೆ ಎಂಬುವುದರ ಬಗ್ಗೆ ಯಾರೊಬ್ಬರು ಆಲೋಚಿಸುತ್ತಿಲ್ಲ. ಜೇನು ಕೃಷಿಯತ್ತ ಹೆಚ್ಚಿನವರು ಆಸಕ್ತಿ ತೋರುತ್ತಿದ್ದರೂ ಸರ್ಕಾರದಿಂದ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ’ ಎಂಬುವುದು ರೈತ ನಂಜುಂಡಪ್ಪ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಮಾರುಕಟ್ಟೆಯಲ್ಲಿ ಜೇನು ತುಪ್ಪಕ್ಕೆ ಹೆಚ್ಚಿನ ಬೇಡಿಕೆ ಇದೆ. ಆದರೆ ಸಾರ್ವಜನಿಕರು ತಮ್ಮ ಅಕ್ಕಪಕ್ಕದ ಸ್ಥಳಗಳಲ್ಲಿ ಜೇನು ಗೂಡು ಕಟ್ಟಿದರೆ ಔಷಧಿ ಸಿಂಪಡಿಸಿ ಹುಳು ಸಾಯಿಸುತ್ತಿದ್ದಾರೆ. ಹುಳು ಸತ್ತರೆ ಜೇನು ತುಪ್ಪ ಎಲ್ಲಿಂದ ಸಿಗುತ್ತದೆ? ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲ. ಈ ಬಗ್ಗೆ ಅರಿವು ಮೂಡಿಸುವುದು ತುಂಬಾ ಅಗತ್ಯ’ ಎಂದು ಪ್ರಗತಿಪರ ಕೃಷಿಕ ರವೀಶ್ ಪ್ರತಿಕ್ರಿಯೆ ನೀಡಿದರು.

ತೋಟಗಾರಿಕಾ ಇಲಾಖೆಯಿಂದ ವಿತರಿಸಿದ ಜೇನು ಪೆಟ್ಟಿಗೆ

ವರ್ಷ;ಪೆಟ್ಟಿಗೆ;ಫಲಾನುಭವಿ

2019–20;614;516

2020–21;462;255

2021–22;373;58

2022–23;944;151

2023–24;1,231;231

ಒಟ್ಟು;3,624;1,211

ಕೃಷಿಯ ಅವಿಭಾಜ್ಯ ಅಂಗ ಜೇನು ಹುಳು ಪೆಟ್ಟಿಗೆಯಲ್ಲಿ ಕೂರದ ಹುಳುಗಳು ಇಟ್ಟಿಗೆ ಕಾರ್ಖಾನೆಗಳಿಂದಲೂ ಹಾನಿ

3624 ಪೆಟ್ಟಿಗೆ ವಿತರಣೆ ತೋಟಗಾರಿಕಾ ಇಲಾಖೆಯಿಂದ ಕಳೆದ 5 ವರ್ಷದಲ್ಲಿ 3624 ಪೆಟ್ಟಿಗೆ ವಿತರಿಸಲಾಗಿದೆ. ಇದರಲ್ಲಿ ಈವರೆಗೆ ಎಷ್ಟು ಪೆಟ್ಟಿಗೆಗಳಲ್ಲಿ ಜೇನು ಹುಳುಗಳು ಕೂರುತ್ತಿವೆ ಎಂಬ ವಿವರ ಅಧಿಕಾರಿಗಳ ಬಳಿ ಲಭ್ಯವಿಲ್ಲ. ಪೆಟ್ಟಿಗೆ ಅಳವಡಿಸಿದ 6 ತಿಂಗಳ ನಂತರ ಜೇನು ತುಪ್ಪ ಇಳುವರಿ ಶುರುವಾಗುತ್ತದೆ. ಸುತ್ತುಮುತ್ತಲಿನ ಪ್ರದೇಶದಲ್ಲಿ ಸಿಗುವ ಹೂವಿನ ಸಾಂದ್ರತೆ ಮೇಲೆ ಇಳುವರಿ ನಿರ್ಧಾರವಾಗುತ್ತದೆ. ನಂತರ ಪ್ರತಿ 3 ತಿಂಗಳಿಗೊಮ್ಮೆ ಜೇನು ತುಪ್ಪ ತೆಗೆಯಬಹುದು. ಒಂದು ಪೆಟ್ಟಿಗೆಯಿಂದ 3 ಕೆ.ಜಿಯಿಂದ 5 ಕೆ.ಜಿ ತುಪ್ಪ ಸಿಗುತ್ತದೆ. ತೋಟಗಾರಿಕಾ ಇಲಾಖೆಯಲ್ಲಿ 3 ಜನ ಜೇನು ಕೃಷಿ ಸಲಹೆಗಾರರು ಕೆಲಸ ಮಾಡುತ್ತಿದ್ದಾರೆ. ಮೂವರು ಇಡೀ ಜಿಲ್ಲೆಯ ರೈತರ ಸಮಸ್ಯೆ ಕೇಳಬೇಕಿದೆ. ಸಿಬ್ಬಂದಿ ಕೊರತೆಯೂ ಸಮಸ್ಯೆಯಾಗಿದೆ.

ಜೇನು ಹುಳಕ್ಕೆ ನೊಣ ಕಾಟ ಜೇನು ಹುಳುಗಳಿಗೆ ನೊಣಗಳ ಕಾಟ ಜಾಸ್ತಿಯಾಗಿದೆ. ಹುಳುವನ್ನು ನುಂಗುವ ಆಕಾರದಲ್ಲಿರುವ ನೊಣಗಳಿಂದ ಜೇನು ಕೃಷಿಗೆ ಅಡ್ಡಿಯಾಗುತ್ತಿದೆ. ನೊಣಗಳು ಪೆಟ್ಟಿಗೆ ಒಳಗಡೆ ಮೊಟ್ಟೆ ಇಡುತ್ತಿವೆ. ಈ ಕಾರಣದಿಂದ ಹುಳುಗಳು ಪೆಟ್ಟಿಗೆಯಲ್ಲಿ ಕೂರುವುದಿಲ್ಲ. ಹೂವಿನ ಗಿಡಗಳಿಗೆ ಔಷಧಿ ಸಿಂಪಡಿಸುವುದರಿಂದ ಸಾಯುತ್ತಿವೆ. ರೈತರು ತುಂಬಾ ಎಚ್ಚರಿಕೆಯಿಂದ ಇರಬೇಕು. ಪೆಟ್ಟಿಗೆಯನ್ನು ಆಗಾಗ ಸ್ವಚ್ಛಗೊಳಿಸಿದರೆ ಹುಳು ಗೂಡು ಕಟ್ಟಲು ಸುಲಭವಾಗುತ್ತದೆ ಚನ್ನಕೇಶವ ಸ್ವಾಮಿ ರೈತ ಬೆಳ್ಳಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.