ತಿಪಟೂರು: ಸಮಾಜದ ಜನರಲ್ಲಿ ಅರಿವು ಉಂಟಾಗಲು ಶತಮಾನಗಳಿಂದ ಕಲ್ಪತರು ನಾಡಿನಲ್ಲಿ ಅನ್ನ, ಅಕ್ಷರ, ಆಶ್ರಯ ನೀಡಿ ಸಾಮಾನ್ಯ ಜನರು ಪ್ರಜ್ಞಾವಂತರಾಗಲು ಗುರುಕುಲಾನಂದಾಶ್ರಮದ ಸ್ವಾಮೀಜಿ ಕೊಡುಗೆ ಅಪಾರ ಎಂದು ತಪೋವನ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ಸಿಡ್ಲೇಹಳ್ಳಿ ಗುರುಕುಲಾನಂದಾಶ್ರಮದಲ್ಲಿ ಆಯೋಜಿಸಿದ್ದ ಕರಿಬಸವದೇಶಿ ಕೇಂದ್ರ ಸ್ವಾಮೀಜಿ 114ನೇ ಸಂಸ್ಮರಣೆ ಹಾಗೂ 27ನೇ ಪೀಠಾರೋಹಣ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಗಾಂಧೀಜಿ ಸಹಜ ಬೇಸಾಯ ಆಶ್ರಮಯದ ಯುವ ಕೃಷಿ ವಿಜ್ಞಾನಿ ಎಚ್.ಮಂಜುನಾಥ್ ಅವರಿಗೆ ಗುರುಕುಲಶ್ರೀ ಗೌರವ ಪ್ರಧಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಷಮುಕ್ತ ಆಹಾರಕ್ಕಾಗಿ ರಾಸಾಯನಿಕ ಮುಕ್ತ ಕೃಷಿ ಅವಲಂಬನೆ ಅನಿವಾರ್ಯವಾಗಿದೆ. ಕುಲಾಂತರಿ ತಳಿ ನಿಷೇಧ ಬಗ್ಗೆ ಜನಾಂದೋಲನ ರೂಪಿತವಾಗಬೇಕಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಗಾಂಧಿ ಸೇವಾ ಪ್ರಶಸ್ತಿ ಪುರಸ್ಕೃತ ಪ್ರೊ.ಜಿ.ಬಿ.ಶಿವರಾಜು ಗುರುಕುಲ ತ್ರೈಮಾಸಿಕ ಪತ್ರಿಕೆ ಲೋಕಾರ್ಪಣೆಗೊಳಿಸಿದರು.

ಗುರುಕುಲದ ಹಿರಿಯ ವಿದ್ಯಾರ್ಥಿ ಸದಾಶಿವಯೋಗಿ ಅವರ ‘ಶೈವತತ್ವ’ ಅಧ್ಯಾತ್ಮ ಕೃತಿಯನ್ನು ತಮಿಳುನಾಡಿನ ಸಿದ್ಧಯೋಗಾಶ್ರಮದ ತ್ರಿಮೂರ್ತಿ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.

ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನಿವೃತ್ತ ಎ.ಸಿ.ಪಿ.ಲೋಕೇಶ್ವರ ಹಾಜರಿದ್ದರು.

ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀ ಗುರುಕುಲ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಎಂ.ಎನ್.ಆನಂದ್ರಾಜ್ ದಂಪತಿ ಪ್ರತಿಭಾ ಪುರಸ್ಕಾರ ನೀಡಿದರು.

ಇಂಗ್ಲೆಂಡ್ನ ಖ್ಯಾತ ವೈದ್ಯ ಡಾ.ಶಂಭುಲಿಂಗಯ್ಯ, ಆಯುಷ್ ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ.ಸುಮನಾ, ಲಂಚಮುಕ್ತ ಕರ್ನಾಟಕ ವೇದಿಕೆ ಮಲ್ಲಿಕಾರ್ಜುನ ಭಟ್ಟರಹಳ್ಳಿ ಡಾ.ಮನೋಜ್, ಶಿವನಾಂದ ಯೋಗಾಶ್ರಮದ ಶಿವರಾಮ್ ಸಿಂಗ್, ವೀರಶೈವ ಲಿಂಗಾಯತ ವೇದಿಕೆ ಅಧ್ಯಕ್ಷ ಸಿ.ಎಸ್.ರೇಣುಕಾರಾಧ್ಯ, ಉಪ್ಪಿನಹಳ್ಳಿ ಗುಡಿಗೌಡರಾದ ಯು.ಸಿ.ಮಹದೇವಯ್ಯ, ಮಾಜಿ ಪುರಸಭಾಧ್ಯಕ್ಷ ಟಿ.ಜಿ.ಲಿಂಗರಾಜು, ಕಲ್ಲುಶೆಟ್ಟಿಹಳ್ಳಿ ಗ್ರಾ.ಪಂ ಸದಸ್ಯ ಕೆ.ಸಿ.ರಘು, ಅರಳಗುಪ್ಪೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಕಲ್ಮನೆನಂಜಪ್ಪ, ನಿವೃತ್ತ ಎನ್.ಎಸ್.ಒ ಅಧಿಕಾರಿ ವೇ.ಜಯಣ್ಣ ಹಾಗೂ ಸಾಮಾಜಿಕ ಕಾರ್ಯಕರ್ತ ಯತಿರಾಜು ಅವರನ್ನು ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.