ತುಮಕೂರು: ವಿಶ್ವವಿದ್ಯಾಲಯದಿಂದ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಭರಣ ಅವರಿಗೆ ಸೋಮವಾರ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಇದೇ ಸಮಯದಲ್ಲಿ ಸಮಾಜ ಸೇವಕ ನಗರದ ಆರ್.ಎಲ್.ರಮೇಶ್ ಬಾಬು ಅವರು ಗೌರವ ಡಾಕ್ಟರೇಟ್ ಪಡೆದರು.

ವಿ.ವಿಯ 16ನೇ ಘಟಿಕೋತ್ಸವ ಕಾರ್ಯಕಮಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಚಾಲನೆ ನೀಡಿದರು. ಘಟಿಕೋತ್ಸವ ಮೆರವಣಿಗೆಯ ಮೂಲಕ ಅವರನ್ನು ಸ್ವಾಗತಿಸಲಾಯಿತು.

80 ವಿದ್ಯಾರ್ಥಿಗಳು 99 ಚಿನ್ನದ ಪದಕ ಹಂಚಿಕೊಂಡಿದ್ದಾರೆ. 78 ಮಂದಿ ಪಿಎಚ್.ಡಿ, ಐವರು ಡಿ.ಲಿಟ್ ಹಾಗೂ 10,273 ವಿದ್ಯಾರ್ಥಿಗಳು ಪದವಿ ಪಡೆದುಕೊಂಡರು.

ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್,

ತುಮಕೂರು ವಿ.ವಿ. ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಪರೀಕ್ಷಾಂಗ ಕುಲಸಚಿವ ಕೆ.ಪ್ರಸನ್ನಕುಮಾರ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.