ತುಮಕೂರು: ಗೊರೂರು ಜಲಾಶಯದಿಂದ (ಹೇಮಾವತಿ ನದಿ) ಶುಕ್ರವಾರ ನೀರು ಬಿಡಲು ಆರಂಭಿಸಿದ್ದು, ಇನ್ನೆರಡು ದಿನಗಳಲ್ಲಿ ಜಿಲ್ಲೆಗೆ ಹರಿದು ಬರಲಿದೆ.

ಆರಂಭದಲ್ಲಿ ಹೇಮಾವತಿ ಎಡದಂಡೆ ಹಾಗೂ ಬಲದಂಡೆ ನಾಲೆಗೆ 2 ಸಾವಿರ ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ನೀರು ಹರಿಸುವುದನ್ನು ಹೆಚ್ಚಳ ಮಾಡಲಾಗುತ್ತದೆ ಎಂದು ಗೊರೂರು ಜಲಾಶಯದ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.

ತುಮಕೂರು ಭಾಗದ ನಾಲೆಗೆ 1 ಸಾವಿರ ಕ್ಯುಸೆಕ್ಗೂ ಕಡಿಮೆ ಪ್ರಮಾಣದ ನೀರು ಹರಿದು ಬರುತ್ತಿದೆ. ಈಗ ಅಲ್ಪ ಪ್ರಮಾಣದಲ್ಲಿ ಹರಿಸುತ್ತಿರುವುದರಿಂದ ನೀರು ಜಿಲ್ಲೆಗೆ ಬರುವುದು ನಿಧಾನವಾಗಲಿದೆ. ಆರಂಭಿಕ ಹಂತದಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಬಿಟ್ಟಿದ್ದು, ನಾಲೆಗಳಲ್ಲಿ ಎಲ್ಲೂ ಸಮಸ್ಯೆಯಾಗದೆ ಸರಾಗವಾಗಿ ಹರಿದು ಬಂದರೆ ನಂತರದ ದಿನಗಳಲ್ಲಿ ಹರಿವಿನ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ.

ಗೊರೂರು ಅಣೆಕಟ್ಟೆಯ ನೀರು ಸಂಗ್ರಹದ ಗರಿಷ್ಠ ಮಟ್ಟ 2,922 ಅಡಿಗಳು (37.103 ಟಿಎಂಸಿ ಸಂಗ್ರಹ). ಜಲಾಶಯ ಭರ್ತಿಯಾಗಲು ಇನ್ನು 6 ಅಡಿಗಳಷ್ಟೇ ಬಾಕಿ ಇದ್ದು, ಒಳ ಹರಿವು 35 ಸಾವಿರ ಕ್ಯುಸೆಕ್ಗಳಷ್ಟು ಇದೆ. ಪ್ರಸ್ತುತ 28.66 ಟಿಎಂಸಿ ಅಡಿಗಳಷ್ಟು ನೀರು ಸಂಗ್ರವಾಗಿದೆ. ಹೇಮಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಒಳಹರಿವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. ಜಲಾಶಯ ಭರ್ತಿ ಹಂತಕ್ಕೆ ಬಂದ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಹಿಂದಿನ ವರ್ಷ ಬರದಿಂದ ಜನರು ತತ್ತರಿಸಿದ್ದು, ಜಲಾಶಯದಲ್ಲೂ ನೀರಿನ ಕೊರತೆಯಿಂದಾಗಿ ಜಿಲ್ಲೆಗೆ ನೀರು ಬಿಟ್ಟಿರಲಿಲ್ಲ. ಈ ಬಾರಿಯಾದರೂ ಜಿಲ್ಲೆಗೆ ನಿಗದಿಪಡಿಸಿರುವ 24 ಟಿಎಂಸಿ ಅಡಿಗಳಷ್ಟು ನೀರನ್ನು ಪೂರ್ಣ ಪ್ರಮಾಣದಲ್ಲಿ ಹರಿಸಬೇಕು ಎಂಬ ಒತ್ತಡ ಕೇಳಿ ಬಂದಿತ್ತು. ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಪ್ರಮಾಣ 12 ಟಿಎಂಸಿ ಅಡಿಗಳನ್ನು ದಾಟಿದ್ದ ಸಮಯದಲ್ಲೇ ತುಮಕೂರು ನಾಲೆಗೆ ನೀರು ಹರಿಸಬೇಕು ಎಂದು ಜಿಲ್ಲೆಯ ರೈತರು ಒತ್ತಾಯಿಸಿದ್ದರು.

ಒಂದು ವಾರದ ಹಿಂದೆಯೇ ನೀರು ಹರಿಸಿದ್ದರೆ ಈ ವೇಳೆಗಾಗಲೇ ಕೆರೆಗಳಿಗೆ ತುಂಬಿಸುವ ಅವಕಾಶಗಳಿದ್ದವು. ಈಗ ಜಲಾಶಯ ಭರ್ತಿಯಾದರೆ ಹೆಚ್ಚುವರಿ ನೀರು ಕೆಆರ್ಎಸ್ ಮೂಲಕ ತಮಿಳುನಾಡಿಗೆ ಹೋಗಿ ಸಮುದ್ರ ಸೇರುತ್ತದೆ. ಮೊದಲೇ ಯೋಚಿಸಿ ನೀರು ಬಿಟ್ಟಿದ್ದರೆ ಜಿಲ್ಲೆಗೆ ಹೆಚ್ಚು ಅನುಕೂಲವಾಗುತ್ತಿತ್ತು ಎಂಬುದು ರೈತರ ವಾದವಾಗಿದೆ.

ಇದೇ ಸಮಯದಲ್ಲಿ ಹೇಮಾವತಿ ನಾಲೆಯ ಆಧುನೀಕರಣ ಕಾಮಗಾರಿಯೂ ನಡೆಯುತ್ತಿದೆ. ಈಗ ನೀರು ಬಿಟ್ಟಿರುವುದರಿಂದ ಕೆಲಸ ನಿಲ್ಲಿಸಬೇಕಾಗಿದೆ. ‘ಅಣೆಕಟ್ಟೆಯಿಂದ ನಾಲೆಗೆ ನೀರು ಬಿಡಲು ಆರಂಭಿಸಿದರೆ ತಕ್ಷಣ ಕೆಲಸ ನಿಲ್ಲಿಸುತ್ತೇವೆ. ನಮ್ಮ ಕೆಲಸದಿಂದ ನೀರು ಹರಿಸಲು ಯಾವುದೇ ಸಮಸ್ಯೆಯಾಗುವುದಿಲ್ಲ’ ಎಂದು ಹೇಮಾವತಿ ನಾಲಾ ವಲಯದ ಮುಖ್ಯ ಎಂಜಿನಿಯರ್ ಫಣಿರಾಜ್ ತಿಳಿಸಿದರು.

ವೀಕ್ಷಣೆ: ಹೇಮಾವತಿ ನೀರು ಹರಿದು ಬರುವ ಬಾಗೂರು ನವಿಲೆ ಸಮೀಪ ಹಾಗೂ ನಾಗಮಂಗಲ ನಾಲಾ ವ್ಯಾಪ್ತಿಯ ಪ್ರದೇಶದಲ್ಲಿ ವಿವಿಧ ಹಂತಗಳಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಮಾಜಿ ಸಚಿವ ಸೊಗಡು ಶಿವಣ್ಣ ಶುಕ್ರವಾರ ವೀಕ್ಷಿಸಿದರು.

ನೀರು ಹರಿಸುವ ಸಮಯದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಇದರಿಂದ ನೀರು ಬಿಡುವುದು ತಡವಾಗಲಿದೆ. ಜತೆಗೆ ಗುಣಮಟ್ಟದ ಕೆಲಸ ಮಾಡುವುದಿಲ್ಲ. ಕಳಪೆ ಕಾಮಗಾರಿ ಮಾಡಿ, ನೀರು ಬಿಟ್ಟಿದ್ದರಿಂದ ಹಾಳಾಗಿದೆ ಎಂದು ಅಧಿಕಾರಿಗಳು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಗುಣಮಟ್ಟದ ಕೆಲಸ ಮಾಡಬೇಕು. ನಾಲೆಯಲ್ಲಿ ನೀರು ಹರಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.