ತಿಪಟೂರು ತಾಲ್ಲೂಕಿನ ಸ್ತ್ರೀಶಕ್ತಿ ಒಕ್ಕೂಟಕ್ಕೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ರಾಜ್ಯಮಟ್ಟದ ಪ್ರಥಮ ಪ್ರಶಸ್ತಿ ದೊರೆತಿರುವುದು ಇಡೀ ತಾಲ್ಲೂಕಿನ ಸ್ತ್ರೀ ಶಕ್ತಿ ಸಂಘಗಳಿಗೆ ಗರಿ ಮೂಡಿಸಿದಂತಾಗಿದೆ.

2006ರಲ್ಲಿ ಆರಂಭವಾದ ಒಕ್ಕೂಟ ಈ ವರೆಗೆ ನೂರಾರು ಚಟುವಟಿಕೆ ನಡೆಸಿದೆ. ವರ್ಷದಲ್ಲಿ ಸರಾಸರಿ 12 ಸಭೆ ನಡೆಸಲಾಗಿದೆ. ಹಣಕಾಸಿನ ನಿರ್ವಹಣೆ ಸಮರ್ಪಕವಾಗಿದೆ. ಇಲ್ಲಿಯವರೆಗೆ ₹ 3.23 ಲಕ್ಷ ಸದಸ್ಯತ್ವ ಶುಲ್ಕ ಸಂಗ್ರಹಿಸಿದ್ದು, 2014-15–16ನೇ ಸಾಲಿನಲ್ಲಿ ಒಕ್ಕೂಟದ ಸದಸ್ಯೆಯರಿಗೆ ತಲಾ ₹ 30 ಸಾವಿರ ಬಿಡುಗಡೆಯಾಗಿದೆ. ಒಕ್ಕೂಟದ ಖಾತೆಯಲ್ಲಿ ಸದಸ್ಯತ್ವ ಶುಲ್ಕ, ಬಡ್ಡಿ ಸೇರಿ ₹ 5,19,158 ಉಳಿತಾಯವಿದೆ.

ಅರಿವು–ನೆರವು: ಇನ್ನು ವಿಶ್ವ ಸ್ತನ್ಯಪಾನ ಸಪ್ತಾಹ, ಪೌಷ್ಟಿಕ ಆಹಾರ ಸಪ್ತಾಹ, ಪಲ್ಸ್ ಪೋಲಿಯೊ ಕಾರ್ಯಕ್ರಮ, ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಇಂದ್ರಧನುಷ್ ಕಾರ್ಯಕ್ರಮದಲ್ಲಿ ಸಹಕಾರ, ಸಾಂಕ್ರಾಮಿಕ ರೋಗಗಳ ತಡೆ ಅರಿವು ಕಾರ್ಯಕ್ರಮವನ್ನು ಒಕ್ಕೂಟದ ಸಹಕಾರದಲ್ಲಿ ನಡೆದಿದೆ.
ಕಾನೂನು ಅರಿವು, ಕಾನೂನು ಸಾಕ್ಷರತಾ ರಥ, ಕೌಟುಂಬಿಕ ದೌರ್ಜನ್ಯ ಕಾಯ್ದೆ ಜಾಗೃತಿ ಶಿಬಿರ, ಬಾಲ್ಯವಿವಾಹ ನಿಷೇಧ ಕಾಯ್ದೆಯ ಜಾಗೃತಿ ಶಿಬಿರವನ್ನು ನಡೆಸಿಕೊಡಲಾಗಿದೆ.

ಮಹಿಳೆಯರು ಮತ್ತು ಮಕ್ಕಳ ಮಾರಾಟ ಮತ್ತು ಸಾಗಣೆ ತಡೆಗಟ್ಟುವ ಕಾವಲು ಸಮಿತಿ ಸಭೆ, ಮಹಿಳಾ ವಿಶೇಷ ಗ್ರಾಮ ಸಭೆ ಹಾಗೂ ಮಕ್ಕಳ ಗ್ರಾಮ ಸಭೆ, ಕೃಷಿ ಉತ್ಸವ ಹಾಗೂ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ, ಸಂಪೂರ್ಣ ಸ್ವಚ್ಛತಾ ಆಂದೋಲನದ ಅರಿವು ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಮಹಿಳೆಯರು ಭಾಗವಹಿಸಿದ್ದರು.

ಮಾರಾಟ ಮೇಳ: ಪರಿಸರ ದಿನಾಚರಣೆ ಮತ್ತು ಪರಿಸರ ಸಂರಕ್ಷಣೆ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಮಹಿಳೆಯರು, ಒಕ್ಕೂಟದ ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಮಹಿಳಾ ಸಂಸ್ಕೃತಿ ಉತ್ಸವ ಮತ್ತು ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಒಕ್ಕೂಟದ ಸಹಕಾರದಲ್ಲಿ ನಡೆಸಿಕೊಡಲಾಗಿದೆ.

ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ಬೆಳಕಿಗೆ ತಂದು ಮಹಿಳೆಯರಿಗೆ ಒಕ್ಕೂಟ ನ್ಯಾಯ ಒದಗಿಸಿದೆ. ಮಾನಸಿನ ಅಸ್ವಸ್ಥರಿಗೆ ನೆರವಾಗಿದ್ದಾರೆ. ಗ್ರಾಮ ನೈರ್ಮಲ್ಯ ಹಾಗೂ ಶುದ್ಧ ಕುಡಿಯುವ ನೀರಿನ ಉಪಯೋಗದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಗ್ರಾಮದ ಸ್ವಚ್ಛತೆಗಾಗಿ ಮನೆಯ ಮುಂದೆ ತಿಪ್ಪೆಗುಂಡಿಗಳನ್ನು ನಿರ್ಮಾಣ ಮಾಡಿಕೊಳ್ಳದಂತೆ ಅರಿವು ಮೂಡಿಸಲಾಗಿದೆ. ತಾಲ್ಲೂಕಿನ ಸಾವಿರ ಸ್ತ್ರೀಶಕ್ತಿ ಗುಂಪುಗಳು ಗೊಂಚಲು ಗುಂಪುಗಳಲ್ಲಿ ಸದಸ್ಯತ್ವ ಪಡೆದಿದ್ದು, ಶೇ 100ರಷ್ಟು ಸಾಧನೆಯಾಗಿದೆ. ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಸ್ತ್ರೀಶಕ್ತಿ ಗುಂಪುಗಳು ಗೋಡೆ ಬರಹ, ಆಟಿಕೆಗಳು, ಸಮವಸ್ತ್ರಗಳು, ತಟ್ಟೆಗಳು, ಲೋಟಗಳು, ಬೀರು, ಗಡಿಯಾರ, ಕುರ್ಚಿಗಳನ್ನು ಕೊಡುಗೆಯಾಗಿ ನೀಡಿವೆ.

ಕಳೆದ ಸಾಲಿನಲ್ಲಿ ಶೇ 80ರಷ್ಟು ಸದಸ್ಯರು ಬ್ಯಾಂಕ್‌ನಿಂದ ಸಾಲ ಪಡೆಯಲು ಸಹಕಾರ ನೀಡಲಾಗಿದೆ. ಹೈನುಗಾರಿಕೆ, ಕೃಷಿ, ಕೋಳಿ, ಕುರಿ ಸಾಕಾಣಿಕೆ, ಕಾಂಡಿಮೆಂಟ್ಸ್, ಟೈಲರಿಂಗ್ ಅಂಗಡಿ, ವ್ಯಾಪಾರ ಮತ್ತಿತರ ವ್ಯವಹಾರಗಳಿಗೆ ಒಕ್ಕೂಟದಿಂದ ಸಹಕಾರ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.