ಪಡುಬಿದ್ರಿ: ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಅವಘಡದಿಂದ ಸ್ವಲ್ಪದರಲ್ಲೇ ಪಾರಾದ ಘಟನೆ ಪಡುಬಿದ್ರಿ ಸಮುದ್ರ ತೀರದಲ್ಲಿ ಭಾನುವಾರ ನಡೆದಿದೆ.

ಕೆಲವು ದಿನಗಳಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಭಾನುವಾರ ಮುಂಜಾನೆ ನಡಿಪಟ್ನ ಮೀನುಗಾರಿಕೆಗೆ ತೆರಳಿತ್ತು. ನಾಡದೋಣಿಯಲ್ಲಿದ್ದ ನಡಿಪಟ್ನ ನಿವಾಸಿಗಳಾದ ಕಿರಣ್ ರಾಜ್ ಕರ್ಕೇರ, ದೀಪಕ್ ಕರ್ಕೇರ, ಅಕ್ಷಯ್ ಕೋಟ್ಯಾನ್ ಅವರ ಸಮಯ ಪ್ರಜ್ಞೆಯಿಂದ ರಕ್ಕಸ ಗಾತ್ರದ ಅಲೆಯನ್ನು ಮೀರಿಸಿ ದೋಣಿ ಸುರಕ್ಷಿತವಾಗಿ ದಡ ಸೇರಿಸಿದ್ದಾರೆ.

ಮೀನುಗಾರರು ಜೀವ ಪಣಕ್ಕಿಟ್ಟು ದುಡಿಯುತ್ತಾರೆ. ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸುವ ಮೀನುಗಾರರ ಬದುಕಿಗೆ ಭದ್ರತೆ ಒದಗಿಸಬೇಕು, ಯೋಜನೆಗಳನ್ನು ರೂಪಿಸಬೇಕು ಎಂದು ಕಿರಣ್ ರಾಜ್ ಕರ್ಕೇರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.