ಕುಂದಾಪುರ: ಹೋಂಕ್ವಾರಂಟೈನಲ್ಲಿ ಇದ್ದ ವ್ಯಕ್ತಿ 163 ಬಾರಿ ನಿಯಮ ಉಲ್ಲಂಘಿಸಿ, ಹೊರಗಡೆ ತಿರುಗಾಡಿದ್ದು, ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್ 29 ರಂದು ಮುಂಬೈಯಿಂದ ಕೋಟೇಶ್ವರದ ಬಾಡಿಗೆ ಮನೆಗೆ ಬಂದಿದ್ದ ಸಹಬ್ ಸಿಂಗ್ ಎಂಬುವರಿಗೆ ಜುಲೈ 13 ರವರೆಗೆ ಹೋಂಕ್ವಾರಂಟೈನ್ಗೆ ಸೂಚಿಸಲಾಗಿತ್ತು. ಆದರೆ ಈ ಅವಧಿಯಲ್ಲಿ ನಿಯಮ ಉಲ್ಲಂಘಿಸಿ, ಉಡುಪಿಯ ಹೋಟೆಲ್ಗಳಿಗೆ ತಿರುಗಾಡುತ್ತಿರುವುದು ಸೇರಿ ಒಟ್ಟು 163 ಬಾರಿ ನಿಯಮ ಬಾಹಿರವಾಗಿ ಹೊರಗೆ ಬಂದ ಬಗ್ಗೆ ಮೊಬೈಲ್ ಜಿಪಿಎಸ್ ಟ್ರ್ಯಾಕರ್ನಿಂದ ತಿಳಿದು ಬಂದಿತ್ತು. ಹೀಗಾಗಿ ಪ್ರಕರಣ ದಾಖಲಾಗಿದೆ.

ನಿಯಮಾವಳಿಗಳ ಉಲ್ಲಂಘನೆ ಮಾಡಿರುವ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎನ್.ಜಿ. ಭಟ್ ಅವರು ಕುಂದಾಪುರ ಠಾಣೆಗೆ ದೂರು ನೀಡಿದ್ದು, ಅವರ ದೂರಿನಂತೆ ಸಹಬ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 269, 270 ರಡಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.