ಕೋಟ (ಬ್ರಹ್ಮಾವರ): ಕೋಟ ಅಮೃತೇಶ್ವರೀ ದೇವಸ್ಥಾನದ ದಶಾವತಾರ ಮೇಳದ 2024– 25ನೇ ವರ್ಷದ ತಿರುಗಾಟಕ್ಕೆ ಚಾಲನೆ, ಪ್ರಶಸ್ತಿ ಪ್ರದಾನ ಸಮಾರಂಭ ಈಚೆಗೆ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ, ದೇವಸ್ಥಾನದ ಅಧ್ಯಕ್ಷ ಆನಂದ ಸಿ. ಕುಂದರ್ ಮಾತನಾಡಿ, ಯಕ್ಷಗಾನ ಕ್ಷೇತ್ರಕ್ಕೆ ಶ್ರೀಧರ ಹಂದೆ, ಕೃಷ್ಣ ನಾಯ್ಕ ಹಾಲಾಡಿ ಅವರ ಕೊಡುಗೆ ಅನನ್ಯ. ಸಾಂಪ್ರದಾಯಿಕ ಯಕ್ಷಗಾನ ಮೌಲ್ಯಗಳನ್ನು ಕಲಾಕ್ಷೇತ್ರಕ್ಕೆ ಧಾರೆ ಎರೆಯುವ ಜೊತೆಗೆ ಯುವ ಆಸಕ್ತ ಮನಸ್ಸುಗಳಿಗೆ ಕಲಾಕಾಣಿಕೆ ನೀಡಿದ್ದಾರೆ. ಅಮೃತೇಶ್ವರೀ ಯಕ್ಷಗಾನ ಮೇಳ ತನ್ನದೇ ಯಕ್ಷ ಚೌಕಟ್ಟಿನೊಂದಿಗೆ ಕಲಾಭಿಮಾನಿಗಳು, ಹರಕೆ ಸಲ್ಲಿಸುವವರ ಮನ ಗೆದ್ದಿದೆ ಎಂದರು.

ಕ್ಷೇತ್ರದಿಂದ ನೀಡುವ ಪ್ರಾಚಾರ್ಯ ‘ದಿ.ನಾರ್ಣಪ್ಪ ಉಪ್ಪೂರು ಪ್ರಶಸ್ತಿ’ಯನ್ನು ಸಾಲಿಗ್ರಾಮ ಮಕ್ಕಳ ಮೇಳದ ಯಜಮಾನ ಎಚ್. ಶ್ರೀಧರ ಹಂದೆ, ದಿ.ಕೋಟ ವೈಕುಂಠ ಸ್ಮರಣಾರ್ಥ ಅವರ ಪುತ್ರ ಉಮೇಶ ರಾಜ್ ಬೆಂಗಳೂರು ಅವರು ನೀಡುವ ‘ಯಕ್ಷಕಿನ್ನರ ಕೋಟ ವೈಕುಂಠ ಪುರಸ್ಕಾರ’ವನ್ನು ಕೃಷ್ಣ ನಾಯ್ಕ ಹಾಲಾಡಿ ಅವರಿಗೆ ಪ್ರದಾನ ಮಾಡಲಾಯಿತು.

ಸಾಹಿತಿ ಪ್ರೊ.ಉಪೇಂದ್ರ ಸೋಮಯಾಜಿ ಚಿತ್ರಪಾಡಿ ಶುಭ ಹಾರೈಸಿದರು. ಯಕ್ಷಗುರು ಪ್ರಸಾದ ಕುಮಾರ್ ಮೊಗೆಬೆಟ್ಟು ನಲ್ನುಡಿಗಳ್ನಾಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಯಕ್ಷಗಾನ ಮೇಳಕ್ಕೆ ದೇವಿಯ ಬೆಳ್ಳಿ ಪ್ರಭಾವಳಿ ಇರುವ ಮೂರ್ತಿ ಹಸ್ತಾಂತರಿಸಿದರು.

ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ, ಉದ್ಯಮಿ ಉಮೇಶ ರಾಜ್ ಬೆಂಗಳೂರು, ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ಶೆಟ್ಟಿ, ಎಂ. ಶಿವ ಪೂಜಾರಿ, ರತನ್ ಐತಾಳ ಇದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಚಂದ್ರ ಆಚಾರ್ ನಿರೂಪಿಸಿದರು. ಸದಸ್ಯ ಗಣೇಶ ನೆಲ್ಲಿಬೆಟ್ಟು ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.