ಪ್ರತಿಯೊಬ್ಬರೂ ಭಗವದ್ಗೀತೆ ಅಧ್ಯಯನ ಮಾಡಿ ಅದರಲ್ಲಿನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಶ್ರೀಕೃಷ್ಣ ಮಾಸೋತ್ಸವದ ಅಂಗವಾಗಿ ಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಗೀತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃಷ್ಣನಿಗೆ ಅತ್ಯಂತ ಪ್ರಿಯವಾದ ಸೇವೆ ಗೀತೋತ್ಸವವಾಗಿದೆ. ಜೀವನದ ಸಾರ್ಥಕ್ಯಕ್ಕೆ ಭಗವದ್ಗೀತೆಯ ಅಧ್ಯಯನ ಅತೀ ಮುಖ್ಯ. ಅದನ್ನು ಓದದ ಜೀವನವೇ ವ್ಯರ್ಥ. ಭಗವದ್ಗೀತೆಯನ್ನು ಓದಿದರೆ ಎಲ್ಲವನ್ನೂ ಓದಿದಂತೆ. ಆ ಮೂಲಕ ದೇವರ ಅನುಗ್ರಹ ಪಡೆಯಬಹುದು ಎಂದರು.