ಉಡುಪಿ: ‘ಪೀತುಬೈಲ್ನಲ್ಲಿ ನಡೆದಿರುವುದು ನಕಲಿ ಎನ್ಕೌಂಟರ್ ಅಥವಾ ಪೂರ್ವಯೋಜಿತ ಕೃತ್ಯವಲ್ಲ. ಈ ಕುರಿತ ಆರೋಪಗಳು ಸುಳ್ಳು’ ಎಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣವ್ ಮೊಹಂತಿ ಹೇಳಿದರು.

ಹೆಬ್ರಿ ಪೊಲೀಸ್ ಠಾಣೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಈಗಾಗಲೇ ಎನ್ಕೌಂಟರ್ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದರು.

‘ಸೋಮವಾರ ಸಂಜೆ 6 ಗಂಟೆಗೆ ವಿಕ್ರಂ ಗೌಡನ ಎನ್ಕೌಂಟರ್ ನಡೆದಿದೆ. ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಮತ್ತು ನಕ್ಸಲರು ಮುಖಾಮುಖಿಯಾಗಿದ್ದಾರೆ. ಈ ವೇಳೆ ಕತ್ತಲು ಕವಿದಿತ್ತು. ಪೊಲೀಸರ ಮೇಲೆ ಗುಂಡಿನ ದಾಳಿ ನಡೆದಿದೆ. ಆತ್ಮ ರಕ್ಷಣೆಗೆ ಪ್ರತಿ ದಾಳಿ ನಡೆದಾಗ ವಿಕ್ರಂ ಗೌಡ ಮೃತಪಟ್ಟಿದ್ದಾನೆ. 2 ರಿಂದ 3 ಮಂದಿ ಪರಾರಿಯಾಗಿರುವ ಸಾಧ್ಯತೆ ಇದೆ’ ಎಂದು ವಿವರಿಸಿದರು.

‘ಶರಣಾಗು ಎಂದು ವಿಕ್ರಂ ಗೌಡನಿಗೆ ಪದೇ ಪದೇ ಹೇಳಿದರೂ ಆತ ಗುಂಡು ಹಾರಿಸಿದ. ಆತನಿಂದ 9 ಎಂ.ಎಂ ಕಾರ್ಬೈನ್ ಬಂದೂಕು, ರಿವಾಲ್ವರ್ ಮತ್ತು ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ’ ಎಂದರು.

ವಿಕ್ರಂನ ಎದೆ ಮತ್ತು ಇತರ ಭಾಗಗಳಿಗೆ ಗುಂಡೇಟು ತಗುಲಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ. ಆತನಿಗೆ 45 ವರ್ಷ ಅಷ್ಟೇ ವಯಸ್ಸು, ಅವನ ಮುಖಪರಿಚಯ ನಮಗಿತ್ತು. ಈ ಕಾರಣಕ್ಕೆ ಅವನನ್ನು ಗುರುತಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ವಿಕ್ರಂ ಗೌಡ ದಿನಸಿ ಪಡೆಯಲು ಬಂದಿದ್ದನೋ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಎನ್ಕೌಂಟರ್ ನಡೆದ ಪ್ರದೇಶದ ಮನೆಗಳಲ್ಲಿನ ಜನರನ್ನು ಮೊದಲೇ ಸ್ಥಳಾಂತರ ಮಾಡಿರಲಿಲ್ಲ ಎಂದರು.

2024ರ ಮಾರ್ಚ್ನಲ್ಲಿ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕ್ಸಲರ ಚಲನವಲನ ಇತ್ತು. ಈ ಬಗ್ಗೆ ನಾವು ಪ್ರಕರಣ ದಾಖಲಿಸಿಕೊಂಡಿದ್ದೆವು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿತ್ತು. ಕಾರ್ಕಳ, ಹೆಬ್ರಿ ವಲಯದ ಕಾಡುಗಳಲ್ಲಿ ಈಚೆಗೆ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಸದಸ್ಯರ ಚಲನವಲನಗಳು ಕಂಡು ಬರುತ್ತಿವೆ ಎಂದರು.

ಹೊರ ರಾಜ್ಯದ ನಕ್ಸಲರು ಇಲ್ಲಿಗೆ ಬಂದಿರುವ ಮಾಹಿತಿ ಇಲ್ಲ. ಸದ್ಯಕ್ಕಿರುವ ಮಾಹಿತಿ ಪ್ರಕಾರ ಸ್ಥಳೀಯರೇ ಇದ್ದಾರೆ. ಕೇರಳ ಪೊಲೀಸರ ಜೊತೆಗೆ ನಮ್ಮ ಎಎನ್ಎಫ್ನವರ ಸಂಬಂಧ ಚೆನ್ನಾಗಿದೆ. ಅವರಿಂದಲೂ ಸಹಕಾರ ಸಿಗುತ್ತಿದೆ ಎಂದು ತಿಳಿಸಿದರು.

ನಮ್ಮ ತಂಡ ಚೆನ್ನಾಗಿ ಕೆಲಸ ಮಾಡಿದೆ. ಸ್ಥಳೀಯ ಪೊಲೀಸರು ಕೂಡ ಸಹಕಾರ ನೀಡಿದ್ದಾರೆ ಎಂದರು.

ನಮ್ಮ ತಂಡಗಳು ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸುತ್ತಲೇ ಇವೆ. ಜನರು ಭಯ, ಆತಂಕ ಪಡುವ ಅಗತ್ಯವಿಲ್ಲ. ಎನ್ಕೌಂಟರ್ ನಡೆದಿರುವ ಸ್ಥಳದಲ್ಲಿರುವ ಮನೆಯವರಿಗೆ ಪೊಲೀಸರು ಭದ್ರತೆ ನೀಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ., ಎಎನ್ಎಫ್ ಎಸ್.ಪಿ. ಜಿತೇಂದ್ರ ದಯಾಮ ಉಪಸ್ಥಿತರಿದ್ದರು.

‘ಶರಣಾಗತಿಗೆ ಮೊದಲ ಆದ್ಯತೆ‘

‘ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವವರು ಶಸ್ತ್ರಾಸ್ತ್ರ ತೊರೆದು ಶರಣಾಗಿ ಮುಖ್ಯವಾಹಿನಿಗೆ ಬರುವುದಾದರೆ, ರಾಜ್ಯ ಸರ್ಕಾರವು ವಿಶೇಷ ಪ್ಯಾಕೇಜ್ ಮತ್ತು ಪುನರ್ವಸತಿ ಯೋಜನೆಗಳನ್ನು ಈಗಾಗಲೇ ಘೋಷಣೆ ಮಾಡಿದೆ. ನಾವು ಶರಣಾಗತಿಗೆ ಮೊದಲ ಆದ್ಯತೆ ನಿಡುತ್ತೇವೆ. ಯಾರೇ ಆಗಲಿ ಕಾನೂನುಬಾಹಿರ ಚಟುವಟಿಗಳಲ್ಲಿ ತೊಡಗಿಸಿಕೊಂಡರೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಪ್ರಣವ್ ಮೊಹಂತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.