ಪುಣೆಯ ಸೆಂಟ್ರಲ್ ವಾಟರ್ ಆ್ಯಂಡ್ ಪವರ್ ರಿಸರ್ಚ್ ಸ್ಟೇಷನ್‌ನವರು ನೀಡುವ ವಿನ್ಯಾಸಕ್ಕೆ ಅನುಗುಣವಾಗಿ ನಾವು ಕಡಲ್ಕೊರೆತ ತಡೆ ಕಾಮಗಾರಿ ನಡೆಸುತ್ತೇವೆ. ಮೂರು ವರ್ಷಗಳಿಂದ ಕಡಲ್ಕೊರೆತ ತಡೆ ಕಾಮಗಾರಿಗೆ ಯಾವುದೇ ಅನುದಾನ ಬಂದಿಲ್ಲ. ಆದ್ದರಿಂದ ಕಾಮಗಾರಿ ನಡೆದಿಲ್ಲ. ಶಾಶ್ವತ ಪರಿಹಾರ ಯೋಜನೆಯ ಅಡಿಯಲ್ಲೇ ನಾವು ಕಾಮಗಾರಿ ನಡೆಸುತ್ತಿದ್ದೇವೆ. ಕಡಲ್ಕೊರೆತದ ಬಗ್ಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಈಚೆಗೆ ಸಭೆ ನಡೆದಿದೆ. ಅದರಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ₹5 ಕೋಟಿ ಬಿಡುಗಡೆ ಮಾಡಲು ಅದರಲ್ಲಿ ನಿರ್ಧಾರವಾಗಿದೆ ಶೋಭಾ ಕೆ. ಎ.ಇ.ಇ ಬಂದರು ಮತ್ತು ಮೀನುಗಾರಿಕಾ ಇಲಾಖೆ ........... ಕಡಲ್ಕೊರೆತದಿಂದ ಈ ಭಾಗದ ಮೀನುಗಾರರಿಗೆ ಬಹಳಷ್ಟು ಸಮಸ್ಯೆ ಆಗುತ್ತದೆ. ಅದರ ತಡೆಗೆ ಈಗ ನಡೆಯುತ್ತಿರುವ ಕಾಮಗಾರಿಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ತ್ರಿಕೋನ ಆಕೃತಿಯ ಕಾಂಕ್ರೀಟ್ ಕಲ್ಲುಗಳನ್ನು ವೈಜ್ಞಾನಿಕ ರೀತಿಯಲ್ಲಿ ಹಾಕುವುದರಿಂದ ಕಡಲ್ಕೊರೆತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಯತ್ನ ನಡೆಸಬೇಕು. ಕೇವಲ ಕಡಲ್ಕೊರೆತ ಉಂಟಾದ ಸಂದರ್ಭಗಳಲ್ಲಿ ಶಾಶ್ವತ ಪರಿಹಾರ ಭರವಸೆ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದಕ್ಕೆ ಮೊದಲೇ ಅನುದಾನ ಕ್ರೋಢೀಕರಿಸಿ ಸಮಸ್ಯೆ ಪರಿಹರಿಸುವ ಮೂಲಕ ಸಮುದ್ರ ತೀರದ ಜನರ ಸುರಕ್ಷತೆಗೆ ಆದ್ಯತೆ ನೀಡಬೇಕು ಕಿರಣ್ ರಾಜ್ ಕರ್ಕೇರ ಮೀನುಗಾರ ನಡಿಪಟ್ಣ ........... ಉದ್ಯಾವರ ಪಡುಕರೆ ಕಡಲ ತೀರದಲ್ಲಿ ಗ್ರೋಯಾನ್ ಮಾದರಿಯಲ್ಲಿ ಕಲ್ಲುಗಳನ್ನು ಅಳವಡಿಸುವ ಮೂಲಕ ಮಳೆಗಾಲದ ರಕ್ಕಸ ಗಾತ್ರದ ಅಲೆಗಳು ಉಂಟುಮಾಡುತ್ತಿದ್ದ ಆತಂಕಕ್ಕೆ ಮುಕ್ತಿ ಕಂಡುಕೊಳ್ಳುವ ಪ್ರಯತ್ನ ನಡೆದಿದೆ. ಮಳೆಗಾಲ ಬಂದರೆ ಕಡಲ ಅಬ್ಬರ ಹೆಚ್ಚಾಗಿ ಆತಂಕದ ವಾತಾವರಣ ನಿರ್ಮಾಣವಾಗುತ್ತದೆ –ಸರೋಜಿನಿ ಮೈಂದನ್ ಉದ್ಯಾವರ ಪಡುಕರೆ ನಿವಾಸಿ .............. ಮಳೆಗಾಲದಲ್ಲಿ ಸಮುದ್ರದ ಅಲೆಗಳು ರಸ್ತೆವರೆಗೆ ಬರುತ್ತದೆ. ಪ್ರಸ್ತುತ ಕಡಲ ನೀರು ನದಿಯನ್ನು ಸೇರುತ್ತಿಲ್ಲ. ಪೈಲಟ್ ಯೋಜನೆಯಿಂದಾಗಿ ಕಡಲತಡಿಯ ನಿವಾಸಿಗಳಿಗೆ ಕೊಂಚ ಸಮಾಧಾನವಾಗಿದೆ. ಈ ಭಾಗದಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಮಾತ್ರವಲ್ಲದೆ ನದಿ ಕೊರೆತದಿಂದ ತೀರ ನಿವಾಸಿಗಳಿಗೆ ರಕ್ಷಣೆ ಬೇಕಿದೆ–ಯೋಗೀಶ್ ಬಿ. ಕೋಟ್ಯಾನ್ ಉದ್ಯಾವರ ಪಡುಕರೆ
ಪ್ರತಿ ಮಳೆಗಾಲ ಇಲ್ಲಿ ಕಡಲ್ಕೊರೆತ ಉಂಟಾಗುತ್ತದೆ. ತೀರದ ನಿವಾಸಿಗಳು ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಿಂದಾಗಿ ಅಲೆಗಳ ಅಬ್ಬರ ಜೋರಾಗಿದ್ದು ಕಡಲ್ಕೊರೆತ ಬಿರುಸಾಗಿದೆ. ಮೀನುಗಾರರ ಶೆಡ್‌ಗಳು ಕಡಲು ಪಾಲಾಗುವ ಅಪಾಯದಲ್ಲಿದೆ. ಕಡಲ್ಕೊರೆತ ಹೆಚ್ಚಾದಷ್ಟು ಇಲ್ಲಿನ ಮನೆಗಳಿಗೆ ಅಪಾಯ ತಪ್ಪಿದ್ದಲ್ಲ–ದಿನೇಶ ಖಾರ್ವಿ ಉಪ್ಪುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.