ಕಾಪು (ಪಡುಬಿದ್ರಿ): ಮಳೆಗಾಲಕ್ಕೂ ಮುನ್ನ ಕಡಲ್ಕೊರೆತದ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಜಿಲ್ಲಾಡಳಿತ ಕಂಡುಕೊಳ್ಳಬೇಕಿತ್ತು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಹೇಳಿದರು.

ಮೂಳೂರು ಮತ್ತು ಕಾಪು ಭಾಗದ ಕಡಲ್ಕೊರೆತ ಪ್ರದೇಶಗಳಿಗೆ ಸೋಮವಾರ ಜೆಡಿಎಸ್ ನಿಯೋಗದೊಂದಿಗೆ ಭೇಟಿ ನೀಡಿದ ಅವರು, ‘ಮಳೆಗಾಲ ಪ್ರಾರಂಭವಾದ ಮೇಲೆ ಕಡಲು ಕೊರೆತದ ಬಗ್ಗೆ ಚಿಂತಿಸುವುದಲ್ಲ. ಮುಂಚಿತವಾಗಿ ಯೋಚಿಸಿದ್ದರೆ ಕಾಪು ತಾಲ್ಲೂಕಿನಲ್ಲಿ ಕಡಲು ಕೊರೆತದಿಂದ ಸಮಸ್ಯೆ ಆಗುತ್ತಿರಲಿಲ್ಲ. ಇನ್ನೂ ಹೆಚ್ಚಿನ ಮಳೆಯಾದರೆ, ಸಮುದ್ರ ಕೊರೆತ ಉಂಟಾಗಿ ಕೆಲವು ಮನೆಗಳಿಗೆ ಹಾನಿಯಾಗುವ ಸಂಭವ ಇದೆ. ಅದನ್ನು ತಡೆಗಟ್ಟಬೇಕಾಗಿದೆ’ ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತೆಂಕ, ಬಡ ಎರ್ಮಾಳು ಪ್ರದೇಶದಲ್ಲಿ 5 ರಿಂದ 6 ಕಿ.ಮೀ. ಕಾಮಗಾರಿಗೆ ₹ 45 ಕೋಟಿ ಹಣ ಮಂಜೂರು ಮಾಡಿದ್ದರು. ಎರಡು ಮನೆಗಳಿಗೆ ಈಗ ತೊಂದರೆ ಆಗುತ್ತಿದ್ದು, ಸುಮಾರು 200 ಮೀಟರ್ನಷ್ಟು ಕಲ್ಲು ಹಾಕಲು ಬಾಕಿ ಇದೆ. ಸಮಸ್ಯೆಯನ್ನು ಜಿಲ್ಲಾಡಳಿತ ಕೂಡಲೇ ಬಗೆಹರಿಸಬೇಕೆಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.