ಕುಮಟಾ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ತಾಲ್ಲೂಕಿನಲ್ಲಿ ಭಾನುವಾರ ಸುಮಾರು 15 ಸಾವಿರ ಜನರು ದೀವಗಿಯ ಅಘನಾಶಿನಿ ಸೇತುವೆಯಿಂದ ಹೊಳೆಗದ್ದೆಯ ಟೋಲ್ ನಾಕಾವರೆಗೆ ಸುಮಾರು 15 ಕಿ.ಮೀ. ವರೆಗೆ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆಯಲಾಯಿತು.

ಎಲ್ಲ ಇಲಾಖೆಗಳ ಸಿಬ್ಬಂದಿ, ತಾಲ್ಲೂಕಿನ ಹೆಚ್ಚಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ರೋಟರಿ, ಲಯನ್ಸ್, ಸರ್ಕಾರೇತರ ಸಂಸ್ಥೆ, ಟೆಂಪೊ ಹಾಗೂ ಆಟೊ ರಿಕ್ಷಾ ಚಾಲಕ-ಮಾಲೀಕರ ಸಂಘದ ಸದಸ್ಯರು ರಾಷ್ಟ್ರೀಯ ಹೆದ್ದಾರಿ ಅಂಚಿಗೆ ಕೈಕೈ ಹಿಡಿದು ಭಾರತದ ಸಂವಿಧಾನ ಪ್ರಸ್ತಾವನೆಗಳನ್ನು ಓದುವ ಮೂಲಕ ಪ್ರಜಾಪ್ರಭುತ್ವ ರಕ್ಷಿಸುವ ಏಕತೆ ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಮಟಾ ಪುರಸಭೆ ಮುಖ್ಯಾಧಿಕಾರಿ ಜಗದೀಶ ಹುಲಗೆಜ್ಜಿ, ‘ಪ್ರಜಾಪ್ರಭುತ್ವದ ಮಹತ್ವ ವಿದ್ಯಾರ್ಥಿಗಳು, ಗ್ರಾಮೀಣ ಮಹಿಳೆಯರು ಸೇರಿದಂತೆ ಜನ ಸಾಮಾನ್ಯರು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಇನ್ನೊಬ್ಬರ ಹಕ್ಕು, ಕರ್ತವ್ಯ ಗೌರವಿಸಿ ಸಹಿಷ್ಣುತೆ ಬೆಳೆಸುವ ಮೂಲಕ ಸಂವಿಧಾನದ ಆಶಯ ಎತ್ತಿ ಹಿಡಿಯುವ ಕೆಲಸ ಮಾಡಿದರೆ ಮಾನವ ಸಂಘರ್ಷಕ್ಕೆ ಆಸ್ಪದವಿರುವುದಿಲ್ಲ' ಎಂದರು.

ನಂತರ ಎಲ್ಲರೂ ಎರಡೂ ಕೈಗಳನ್ನು ಮೇಲೆತ್ತಿ ಜೈ ಹಿಂದ್, ಜೈ ಕರ್ನಾಟಕ ಘೋಷಣೆ ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.