ಕುಮಟಾ: ತಾಲ್ಲೂಕಿನ ಬಾಡ ಕಡಲ ತೀರದಲ್ಲಿ ‘ಇಂಡೋ ಫೆಸಿಫಿಕ್ ಹಂಪ್ ಬ್ಯಾಕ್’ ಜಾತಿಯ ಮತ್ತೊಂದು ಡಾಲ್ಫಿನ್‍ನ ಕಳೇಬರ ಬುಧವಾರ ಕಂಡು ಬಂದಿದೆ. ಇದೇ ಜಾಗದಲ್ಲಿ ಮಾರ್ಚ್ 12ರಂದು ಕೂಡ ಡಾಲ್ಫಿನ್‌ನ ಮೃತದೇಹ ಪತ್ತೆಯಾಗಿತ್ತು.

‘ಈ ಡಾಲ್ಫಿನ್ ಮೃತಪಟ್ಟು ಆರು ದಿನಗಳಾಗಿವೆ. ಸುಮಾರು 2.25 ಮೀಟರ್ ಉದ್ದವಿದೆ. ಈಚೆಗೆ ಸಿಕ್ಕಿದ್ದ ಡಾಲ್ಫಿನ್ ಕಳೇಬರವೂ ಸುಮಾರು 2.55 ಮೀಟರ್ ಉದ್ದವಿತ್ತು’ ಎಂದು ಕುಮಟಾ ವಲಯ ಅರಣ್ಯಾಧಿಕಾರಿ ಪ್ರವೀಣ ನಾಯಕ ತಿಳಿಸಿದರು.

‘ಡಾಲ್ಫಿನ್‍ನ ಬಾಲದ ಭಾಗದಲ್ಲಿ ಆಳವಾದ ಗಾಯ ಕಂಡುಬಂದಿದೆ. ಸಮುದ್ರದಲ್ಲಿ ಓಡಾಡುವಾಗ ಮೀನುಗಾರಿಕಾ ದೋಣಿಗಳಿಗೆ ಅಳವಡಿಸಿದ್ದ ಎಂಜಿನ್‌ನ ಫ್ಯಾನ್ ತಗುಲಿರಬಹುದು. ಡಾಲ್ಫಿನ್‌ಗಳು ಮೀನುಗಳನ್ನು ಬೇಟೆಯಾಡುವಾಗ ನೀರಿನ ಅಲೆಯ ಜೊತೆ ವೇಗವಾಗಿ ದಡದ ಕಡೆ ಬಂದು ಮೃತಪಟ್ಟಿರುವ ಸಾಧ್ಯತೆಯೂ ಇದೆ. ಎಷ್ಟೋ ಸಲ ಎರಡೂ ಬದಿ ಹರಿತ ಮುಳ್ಳುಗಳಿರುವ ಮೀನುಗಳನ್ನು ಬೇಟೆಯಾಡಿ ತಿಂದ ಡಾಲ್ಫಿನ್ ಹೊಟ್ಟೆಯನ್ನು ಆ ಮೀನಿನ ಮುಳ್ಳು ಘಾಸಿಗೊಳಿಸಿದ ಪ್ರಕರಣಗಳೂ ಇವೆ. ಹೆಚ್ಚಿನ ಮಾಹಿತಿ ಪಡೆಯಲು ಡಾಲ್ಫಿನ್ ಚಿತ್ರಗಳನ್ನು ಕಾರವಾರದ ಕಡಲ ಜೀವಿ ಅಧ್ಯಯನ ಕೇಂದ್ರಕ್ಕೆ ಕಳುಹಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.