ಕಾರವಾರ: ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂಬ ಗಾದೆ ಮಾತಿಗೆ ಜಿಲ್ಲೆಯ ಅಬಕಾರಿ ಇಲಾಖೆಯ ಕೆಲ ಸಿಬ್ಬಂದಿ ಸಾಕ್ಷಿಯಾಗಿದ್ದಾರೆ! ಅಕ್ರಮ ಮದ್ಯ ಸಾಗಣೆ ಆರೋಪ ಹೊತ್ತು, ಇಲಾಖೆ ವಿಚಾರಣೆ ಎದುರಿಸುತ್ತಿರುವವರೇ ಇದಕ್ಕೆ ಸಾಕ್ಷಿ.

ಗೋವಾ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗೆ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಆಗುತ್ತಿರುವ ದೂರು ಹೆಚ್ಚಿದೆ. ಕರ್ನಾಟಕದ ಮದ್ಯಕ್ಕಿಂತ ಅರ್ಧ ಬೆಲೆಗೆ ಗೋವಾದಲ್ಲಿ ಮದ್ಯ ದೊರೆಯುವ ಕಾರಣ, ಅಲ್ಲಿಂದ ಕಡಿಮೆ ದರದ ಮದ್ಯ ತಂದು ರಾಜ್ಯದಲ್ಲಿ ಮಾರಾಟ ಮಾಡುವ ಅಕ್ರಮ ವಹಿವಾಟು ಹೆಚ್ಚುತ್ತಿರುವ ಆರೋಪವಿದೆ.

ಕಾರವಾರ ತಾಲ್ಲೂಕಿನ ಮಾಜಾಳಿ, ಜೊಯಿಡಾ ತಾಲ್ಲೂಕಿನ ಅನಮೋಡದಲ್ಲಿ ತನಿಖಾ ಠಾಣೆ ಇದೆ. ರಾಷ್ಟ್ರೀಯ ಹೆದ್ದಾರಿ ಮೂಲಕ ವಾಹನಗಳಲ್ಲಿ ಅಕ್ರಮ ಮದ್ಯ ಪೂರೈಕೆ ಆಗುತ್ತಿರುವದನ್ನು ತಡೆಯಲು ಇವುಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಅಕ್ರಮ ಮದ್ಯ ಸಾಗಿಸದಂತೆ ಕಟ್ಟುನಿಟ್ಟಾಗಿ ತಪಾಸಣೆ ನಡೆಸುವ ಕೆಲಸ ನಿರ್ವಹಿಸಬೇಕಾಗಿದೆ. ಆದರೆ, ಸಿಬ್ಬಂದಿ ಶಾಮೀಲಿನಿಂದಲೇ ಅಕ್ರಮವಾಗಿ ಗೋವಾ ಮದ್ಯ ಪೂರೈಕೆ ಆಗುತ್ತಿರುವುದು ತನಿಖಾ ಠಾಣೆ ಇದ್ದೂ ಪ್ರಯೋಜನ ಇಲ್ಲದಂತಾಗುತ್ತಿದೆ ಎಂಬುದು ಜನರ ಆರೋಪ.

‘ತನಿಖಾ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಕೆಲ ಸಿಬ್ಬಂದಿಯೇ ಅಕ್ರಮ ಮದ್ಯ ಸಾಗಾಟಕ್ಕೆ ಬೆಂಬಲವಾಗಿದ್ದಾರೆ. ಇದು ಇಲಾಖೆಯ ಗಮನಕ್ಕೆ ಬಂದಿದೆ. ಅಕ್ರಮ ಚಟುವಟಿಕೆ ನಿಯಂತ್ರಿಸದ ಆರೋಪದಡಿ ಮಾಜಾಳಿ ಮತ್ತು ಅನಮೋಡ ತನಿಖಾ ಠಾಣೆಯ ತಲಾ ಒಬ್ಬರು ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೆಬಲ್ರನ್ನು ಅಮಾನತುಗೊಳಿಸಿದ್ದೇವೆ. ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಅಬಕಾರಿ ಉಪ ಆಯುಕ್ತ ಜಗದೀಶ ಎನ್.ಕೆ ತಿಳಿಸಿದರು.

ಡಿಂಗಿ ದಳಕ್ಕೆ ಮರುಪ್ರಸ್ತಾವ

‘ಸಮುದ್ರ ಮಾರ್ಗವಾಗಿಯೂ ಅಕ್ರಮ ಮದ್ಯ ಗೋವಾದಿಂದ ಜಿಲ್ಲೆಯ ವಿವಿಧೆಡೆ ದೋಣಿಗಳ ಮೂಲಕ ಪೂರೈಕೆ ಆಗುತ್ತಿರುವ ಮಾಹಿತಿ ಇದೆ. ಸಮುದ್ರ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲು ಈ ಹಿಂದೆ ಇಲಾಖೆಯಲ್ಲಿ ಪ್ರತ್ಯೇಕ ‘ಡಿಂಗಿ ದಳ’ ಕಾರ್ಯನಿರ್ವಹಿಸುತ್ತಿತ್ತು. ಪುನಃ ಡಿಂಗಿ ದಳ ಆರಂಭಿಸುವಂತೆ ಇಲಾಖೆ ಮುಖ್ಯಸ್ಥರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ದೋಣಿ ಮತ್ತು ಅದರ ನಿರ್ವಹಣೆಗೆ ಸಿಬ್ಬಂದಿ ಒದಗಿಸಲು ಮನವಿ ಮಾಡಿದ್ದೇವೆ’ ಎಂದೂ ಅಬಕಾರಿ ಉಪ ಆಯುಕ್ತ ತಿಳಿಸಿದರು.

ಅಂತರ್ ರಾಜ್ಯ ಗಡಿಯಲ್ಲಿ ಅಬಕಾರಿ ತನಿಖಾ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದ್ದು ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ಜಗದೀಶ ಎನ್.ಕೆ ಅಬಕಾರಿ ಉಪ ಆಯುಕ್ತ

ಗಡಿಭಾಗದ ತನಿಖಾ ಠಾಣೆಯಲ್ಲಿಲ್ಲ ಭದ್ರತೆ

ಗೋವಾ ರಾಜ್ಯದೊಂದಿಗೆ ಗಡಿ ಸಮೀಪದಲ್ಲಿರುವ ಕಾರವಾರ ತಾಲ್ಲೂಕಿನ ಮಾಜಾಳಿ ಜೊಯಿಡಾ ತಾಲ್ಲೂಕಿನ ಅನಮೋಡ ತನಿಖಾ ಠಾಣೆಗಳಲ್ಲಿ ಸದ್ಯ ಅಬಕಾರಿ ಇಲಾಖೆ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸ್ ಇಲಾಖೆ ತನ್ನ ಸಿಬ್ಬಂದಿ ನಿಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ‘ಗಡಿಭಾಗದ ತನಿಖಾ ಠಾಣೆಯಲ್ಲಿ ಕಾರ್ಯನಿರ್ವಹಿಸಲು ತಲಾ 11 ಸಿಬ್ಬಂದಿ ಅಗತ್ಯವಿದೆ. ಮಾಜಾಳಿಯಲ್ಲಿ ಕೇವಲ ಒಬ್ಬರು ಮಾತ್ರ ಕಾಯಂ ಸಿಬ್ಬಂದಿ ಅನಮೋಡ್ದಲ್ಲಿ ಎಂಟು ಮಂದಿ ಸಿಬ್ಬಂದಿ ಇದ್ದಾರೆ. ವಾಹನಗಳ ಓಡಾಟ ಹೆಚ್ಚಿರುವ ಸಮಯದಲ್ಲಿ ಭದ್ರತೆಯ ಸವಾಲು ಎದುರಾಗುತ್ತದೆ. ಈಚೆಗಿನ ಕೆಲ ಘಟನೆಯ ಕಾರಣ ನೀಡಿ ಪೊಲೀಸ್ ಸಿಬ್ಬಂದಿಯ ನಿಯೋಜನೆ ಸ್ಥಗಿತವಾಗಿದ್ದರಿಂದ ಅಬಕಾರಿ ಸಿಬ್ಬಂದಿಯ ಮೇಲೆ ಒತ್ತಡ ಹೆಚ್ಚಿದೆ’ ಎನ್ನುತ್ತಾರೆ ಅಬಕಾರಿ ಉಪ ಆಯುಕ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.