ಕುಮಟಾ: ಆರೋಗ್ಯಕರ ಹಾಲು, ಕೃಷಿಗೆ ಉತ್ತಮ ಗೊಬ್ಬರ, ಜೀವಾಮೃತ ಉತ್ಪಾದನೆಯ ಉದ್ದೇಶದಿಂದ ತಾಲ್ಲೂಕಿನ ರೈತರು ರೋಗ ರಹಿತ ನೈಸರ್ಗಿಕ ‘ಮಲೆನಾಡು ಗಿಡ್ಡ’ ಹಸು ತಳಿ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒಲವು ತೋರುತ್ತಿರುವುದು ವಿಶೇಷವಾಗಿದೆ.

ರಾಷ್ಟ್ರೀಯ ಹೈನುಗಾರಿಕಾ ನೀತಿಯ ಪ್ರಕಾರ ಜಿಲ್ಲೆಯ ವಾತಾವರಣಕ್ಕೆ ‘ಮಲೆನಾಡು ಗಿಡ್ಡ' ನೈಸರ್ಗಿಕ ತಳಿ, `ಜರ್ಸಿ ' ಹೈಬ್ರಿಡ್ ತಳಿ ಹಾಗೂ`ಸುರ್ತಿ' ಎಮ್ಮೆಯ ತಳಿ ಹೊಂದಾಣಿಕೆಯಾಗುತ್ತದೆ ಎನ್ನುವುದು ತಜ್ಞರ ಶಿಫಾರಸು.

ಎರಡು ತಲೆಮಾರಿನ ನಂತರ ಜರ್ಸಿ ತಳಿ ಹಸುಗಳು ರೋಗ ನಿರೋಧಕ ಶಕ್ತಿ ಕಳೆದುಕೊಂಡು, ಅವುಗಳ ಆರೈಕೆಯ ವೆಚ್ಚ ರೈತರಿಗೆ ಹೊರೆಯಾಗುತ್ತದೆ.

ಈ ಬಗ್ಗೆ ಮಾಹಿತಿ ನೀಡಿದ ಕುಮಟಾದ ಪಶು ವೈದ್ಯಾಧಿಕಾರಿ ಡಾ. ವಿಶ್ವನಾಥ ಹೆಗಡೆ, ‘ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಮಲೆನಾಡು ಗಿಡ್ಡ ತಳಿಯ ಹಸುಗಳನ್ನು ಹಿಂದೆ ಒಂದು ತಳಿ ಎಂದು ಪ್ರತ್ಯೇಕವಾಗಿ ಗುರುತಿಸಿರಲಿಲ್ಲ. ಎಲ್ಲ ತಳಿಗಳೂ ಮಿಶ್ರಣಗೊಂಡು ಯಾವುದೇ ನೈಸರ್ಗಿಕ ತಳಿ ಕಣ್ಮರೆ ಆಗಬಾರದು ಎನ್ನುವ ಉದ್ದೇಶದಿಂದ ಆಯಾ ಜಿಲ್ಲೆಯ ವಾತಾವರಣಕ್ಕೆ ತಕ್ಕಂತೆ ತಳಿಗಳನ್ನು ಶಿಫಾರಸು ಮಾಡಲಾಗಿದೆ. ಅದರಂತೆ ಮಲೆನಾಡು ಗಿಡ್ಡ ತಳಿಯ ಹಸು ಜಿಲ್ಲೆ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಿಗೆ ಸೂಕ್ತ ಎಂದು ಶಿಫಾರಸು ಮಾಡಲಾಗಿದೆ' ಎಂದರು.

‘ಸ್ವಂತಕ್ಕಾಗಿ ಹಾಲು ಬಳಸುವವರು ಈಗೀಗ ಮಲೆನಾಡು ಗಿಡ್ಡ ತಳಿ ಹಸುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆ ತಳಿಯ ತಮ್ಮ ಹಸುಗಳಿವೆ. ಅದೇ ತಳಿಯ ಕೃತಕ ಗರ್ಭಧಾರಣೆ ಅಪೇಕ್ಷಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಮಲೆನಾಡು ಗಿಡ್ಡ ತಳಿಯ ಕೃತಕ ಗರ್ಭಧಾರಣೆ ಬಸಯಸುವ ರೈತರ ಪ್ರಮಾಣ ಶೇ 40 ರಷ್ಟು ಹೆಚ್ಚಾಗಿದೆ.

ಈ ದೇಸಿಯ ತಳಿಯ ಹಾಲಿಗೆ ಸ್ಥಳೀಯವಾಗಿ ಹೆಚ್ಚಿನ ಬೇಡಿಯಿದ್ದು, ದರದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕೊಳ್ಳುವ ಸಾಕಷ್ಟು ಗ್ರಾಹಕರಿದ್ದಾರೆ. ಶಿವಮೊಗ್ಗಾದಿಂದ ಕೃತಕ ವೀರ್ಯ ಕಡ್ಡಿಗಳನ್ನು ತಂದು ಅಗತ್ಯವುಳ್ಳ ಹಸುಗಳಿಗೆ ಕೃತಕ ಗರ್ಭ ಧಾರಣೆ ನಡೆಸಲಾಗುತ್ತದೆ. ಆರೋಗ್ಯಕರ, ಕೊಂಚ ದೊಡ್ಡ ಗಾತ್ರದ ಮಲೆನಾಡು ಗಿಡ್ಡ ತಳಿಯ ಹೋರಿಗಳಿಂದ ಸಂಗ್ರಹಿಸಿದ ವೀರ್ಯವನ್ನು ಅದೇ ತಳಿಯ ಆರೋಗ್ಯಕರ ಹಸುಗಳಿಗೆ ನೀಡಿದರೆ ಆ ಹಸುಗಳು ಕರು ಹಾಕಿ ನಿತ್ಯ ಎರಡೂವರೆ ಲೀಟರ್ ವರೆಗೆ ಹಾಲು ನೀಡಬಲ್ಲವು. ಸರಾಸರಿ ಒಂದುವರೆ ಲೀಟರ್ ಹಾಲಂತೂ ಎಲ್ಲ ಹಸುಗಳಿಂದ ಸಿಗುತ್ತದೆ' ಎಂದರು.

ತಾಲ್ಲೂಕಿನ ಸಾಂತೂರು ಗ್ರಾಮದ ರೈತ ಬಾಲಚಂದ್ರ ಭಟ್ಟ ಅವರು, ‘ಮನೆ ಬಳಕೆ ಹಾಲಿಗಾಗಿ ಈಗ ನಾವೆಲ್ಲ ಮಲೆನಾಡು ಗಿಡ್ಡ ತಳಿಯನ್ನೇ ಆಯ್ದುಕೊಂಡಿದ್ದೇವೆ. ಇದರಿಂದ ನೈಸರ್ಗಿಕ ಹೈನು ಪದಾರ್ಥ, ಗೋ ಮೂತ್ರ, ಕೃಷಿ ಉದ್ದೇಶಕ್ಕೆ ಜೀವಾಮೃತ ದೊರೆಯುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಹೆಚ್ಚಿನ ರೋಗಗಳನ್ನು ತಡೆಯಬಲ್ಲ ಶಕ್ತಿ ಇರುವುದರಿಂದ ಪದೇ ಪದೇ ಪಶು ವೈದ್ಯರನ್ನು ಕರೆಸುವ ತೊಂದರೆಯೂ ತಪ್ಪುತ್ತದೆ. ಆದರೆ ಕೃತಕ ಗರ್ಭಧಾರಣೆ ಸಂದರ್ಭದಲ್ಲಿ ಆಗಾಗ ವೀರ್ಯ ಕಡ್ಡಿಯ ಕೊರತೆ ಉಂಟಾಗುತ್ತದೆ. ಸರ್ಕಾರ ಮಲೆನಾಡು ಗಿಡ್ಡದಂಥ ದೇಸಿ ತಳಿ ಉಳಿಸಲು ರೈತರಿಗೆ ನೆರವಾಗಬೇಕಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.