ವಾಡಿಕೆಗಿಂತ ಶೇ 360 ರಷ್ಟು ಹೆಚ್ಚು ಮಳೆ
‘ತಾಲ್ಲೂಕಿನಲ್ಲಿ ಕಳೆದ ಒಂದು ವಾರದಲ್ಲಿ ಸುರಿದ ಮಳೆಗೆ 24.5 ಹೆಕ್ಟೇರ್ ಭತ್ತ 82 ಹೆಕ್ಟೇರ್ ಗೋವಿನಜೋಳ ಸದ್ಯಕ್ಕೆ ಹಾನಿಯಾಗಿರುವ ಬಗ್ಗೆ ಪ್ರಾಥಮಿಕ ವರದಿ ತಯಾರಿಸಲಾಗಿದೆ. ಅ.16 ರಿಂದ 22ರವರೆಗೆ 13 ಸೆಂ.ಮೀ ಮಳೆಯಾಗಿದ್ದು ಕೇವಲ ಒಂದು ವಾರದ ಅವಧಿಯಲ್ಲಿ ವಾಡಿಕೆಗಿಂತ ಶೇ.360ರಷ್ಟು ಮಳೆ ಹೆಚ್ಚಾಗಿರುವುದು ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅಕ್ಟೋಬರ್ ತಿಂಗಳಲ್ಲಿಯೇ 28.1 ಸೆಂ.ಮೀ ಮಳೆ ದಾಖಲಾಗಿದೆ. ಇದು ಕೂಡ ವಾಡಿಕೆಗಿಂತ ಶೇ.130ರಷ್ಟು ಹೆಚ್ಚಾಗಿದೆ’ ಎಂದು ಕೃಷಿ ಅಧಿಕಾರಿ ಅರವಿಂದ ಕಮ್ಮಾರ ಹೇಳಿದರು.