ಶಿರಸಿ: ‘ಸಾರ್ವಜನಿಕರನ್ನು ಒತ್ತಾಯಪೂರ್ವಕವಾಗಿ ಮತಾಂತರಕ್ಕೆ ಯತ್ನಿಸಿದ್ದಾರೆ ಎಂಬ ಆರೋಪದ ಮೇಲೆ ಆರು ಜನರ ತಂಡವನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ಹಾವೇರಿ ಜಿಲ್ಲೆಯ ಪರಮೇಶ್ವರ ನಾಯ್ಕ, ಸುನಿತಾ ನಾಯ್ಕ, ಧನಂಜಯ ಶಿವಣ್ಣ, ಶಾಲಿನಿ ರಾಣಿ, ಮುಂಡಗೋಡ ಕ್ಯಾದಗಿಕೊಪ್ಪದ ಕುಮಾರ ಲಮಾಣಿ ಮತ್ತು ತಾರಾ ಲಮಾಣಿ ಬಂಧಿತರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ತಾಲ್ಲೂಕಿನ ಶಿವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಗಳೆಮನೆಯಲ್ಲಿ ಆರು ಜನರ ತಂಡ ಆದರ್ಶ ನಾಯ್ಕ ಎಂಬುವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಕ್ರೈಸ್ತ ಸಮುದಾಯಕ್ಕೆ ಸೇರಲು ಒತ್ತಾಯಿಸಿದ್ದಾರೆ. ಮತಾಂತರದ ನಂತರ ನಮ್ಮ ಆರ್ಥಿಕ ಪರಿಸ್ಥಿತಿ ಮತ್ತು ಆರೋಗ್ಯ ಸ್ಥಿತಿ ಸುಧಾರಿಸಿದೆ. ಹಿಂದೂ ಧರ್ಮ ಬಿಟ್ಟು ಯೇಸುಗೆ ಪೂಜಿಸಿ ಎಂದು ಹೇಳಿದ್ದಾರೆ. ಆರೋಪಿಗಳು ಹಿಂದೂ ದೇವರಿಗೆ ಅವಮಾನಿಸಿದ್ದು ಅಲ್ಲದೇ ಧಾರ್ಮಿಕ ಭಾವನೆಗೆ ಘಾಸಿ ಉಂಟು ಮಾಡಿರುವುದಾಗಿ ಸ್ಥಳೀಯರು ನಮಗೆ ಮಾಹಿತಿ ನೀಡಿದರು. ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದೆವು’ ಎಂದು ಪಿಎಸ್ಐ ಪ್ರತಾಪ್ ಪಚ್ಚಪ್ಪಗೋಳ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.