ವಾರದಿಂದೀಚೆಗೆ ಖಾಸಗಿ ಟ್ಯಾಂಕರ್ ನೀರಿನ ದರ ಏಕಾಏಕಿ ದುಪ್ಪಟ್ಟಾಗಿದೆ. ಇವುಗಳ ದರ ನಿಯಂತ್ರಣದತ್ತ ನಗರಾಡಳಿತ ನಿಗಾ ವಹಿಸಬೇಕು
ವನಜಾಕ್ಷಿ ಶೇಟ್ ನಗರ ನಿವಾಸಿ
ನಗರಸಭೆಯಿಂದ ಆಯಾ ಮನೆಗಳಿಗೆ ಅಗತ್ಯಕ್ಕೆ ತಕ್ಕಂತೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ನೀಡಲಾಗುತ್ತಿದೆ. ಹೆಚ್ಚುವರಿ ನೀರು ಬೇಕಾದರೆ ಖರೀದಿ ಅನಿವಾರ್ಯ
ಕಾಂತರಾಜ್ ಪೌರಾಯುಕ್ತ ನಗರಸಭೆ ಶಿರಸಿ
ಗ್ರಾಮೀಣಕ್ಕೂ ತೊಂದರೆ
ಹಣಕ್ಕೆ ನೀರು ಮಾರುವ ಟ್ಯಾಂಕರ್ ಮಾಲಿಕರು ಗ್ರಾಮೀಣ ಭಾಗದ ಕೆರೆ ಹೊಳೆಗಳ ಆಳ ಗುಂಡಿಗಳಿಂದ ನೀರು ಸಂಗ್ರಹಿಸಿ ನಗರಕ್ಕೆ ಕೊಂಡೊಯ್ಯುತ್ತಿದ್ದಾರೆ. ಹಲವು ಟ್ಯಾಂಕರ್‌ಗಳು ತರುವ ನೀರಿನ ಮೂಲ ಖರೀದಿದಾರರಿಗೆ ಅರಿವಿಗೆ ಬರುತ್ತಿಲ್ಲ. ಗ್ರಾಮಗಳ ಜಲಮೂಲಕ್ಕೆ ಲಗ್ಗೆಯಿಟ್ಟ ಟ್ಯಾಂಕರ್ ಮಾಫಿಯಾದಿಂದ ಹಳ್ಳಿಗಳ ಜನರೂ ತೊಂದರೆ ಅನುಭವಿಸುವಂತಾಗಿದೆ ಎಂಬುದು ಹಲವು ಗ್ರಾಮಗಳ ಜನರ ಆರೋಪವಾಗಿದೆ.