ಕಾರವಾರ: ತಾಲ್ಲೂಕಿನ ನಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕೈಗಾ ಅಣು ಶಕ್ತಿ ನಿಗಮದ ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ (ಸಿ.ಎಸ್.ಆರ್) ಸೌರ ಲಾಟೀನುಗಳನ್ನು ನೀಡಲಾಯಿತು.

ಸೌರ ಲಾಟೀನಿನ ಜತೆಗೆ ಅವುಗಳ ಚಾರ್ಜಿಂಗ್ಗೆ ಅನುಕೂಲವಾಗುವಂತೆ ಸೌರ ಫಲಕ, ವಿದ್ಯುತ್ ಚಾರ್ಜಿಂಗ್ ದೀಪಗಳನ್ನು ವಿತರಿಸಲಾಯಿತು.

ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟ ಸಿ.ಎಸ್.ಆರ್ ಯೋಜನೆಯ ಅಧಿಕಾರಿ ದಿನೇಶ ಗಾಂವಕಾರ, ‘ಸಿ.ಎಸ್.ಆರ್ ಅಧ್ಯಕ್ಷ ಎನ್.ತಿಪ್ಪೆಸ್ವಾಮಿ ಅವರ ಸೂಚನೆ ಮೇರೆಗೆ ಕುಗ್ರಾಮಗಳ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪೂರಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಅವುಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಅಖ್ತರ ಸೈಯದ್, ಸಹಶಿಕ್ಷಕಿ ರೂಪಾ ಉಮೇಶ ನಾಯ್ಕ, ಅತಿಥಿ ಶಿಕ್ಷಕಿ ರೇಷ್ಮಾ ಹುಲಸ್ವಾರ, ಕೈಗಾ ಯೋಜನಾ ಶಿಕ್ಷಕಿ ಪ್ರಿಯಾ ಲಾಂಜೇಕರ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.