ಪ್ರಸಕ್ತ ಸಾಲಿಗೆ ₹98 ಕೋಟಿ ರಾಜಸ್ವ ಸಂಗ್ರಹದ ಗುರಿ ನೀಡಲಾಗಿದ್ದು ಗುರಿ ತಲುಪುವ ವಿಶ್ವಾಸವಿದೆ
–ಶ್ರೀಧರ್ ಜಿಲ್ಲಾ ನೋಂದಣಾಧಿಕಾರಿ
ಐದು ತಾಲ್ಲೂಕುಗಳಲ್ಲಿಲ್ಲ ಸಬ್ ರಿಜಿಸ್ಟ್ರಾರ್
‘ಸರ್ಕಾರಕ್ಕೆ ಹೆಚ್ಚು ಆದಾಯ ತಂದುಕೊಡುವ ಇಲಾಖೆಗಳಲ್ಲಿ ಮುಂಚೂಣಿಯಲ್ಲಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೂ ಸಿಬ್ಬಂದಿ ಕೊರತೆಯ ಬಿಸಿ ತಟ್ಟಿದೆ. ಜಿಲ್ಲೆಯಲ್ಲಿ ಈ ಹಿಂದೆ ಐದು ಉಪನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಕಚೇರಿ ಇದ್ದ ವೇಳೆ ಮಂಜೂರಾಗಿದ್ದ 34 ಹುದ್ದೆಗಳು ಹತ್ತು ಕಚೇರಿ ಆರಂಭಗೊಂಡರೂ ಹಾಗೆಯೇ ಇದೆ. ಈ ಹುದ್ದೆಗಳ ಪೈಕಿ 11 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. 23 ಹುದ್ದೆ ಖಾಲಿಯೇ ಇದೆ. ಯಲ್ಲಾಪುರ ಭಟ್ಕಳ ಹೊನ್ನಾವರ ಅಂಕೋಲಾ ಮತ್ತು ಸಿದ್ದಾಪುರದಲ್ಲಿ ಉಪನೋಂದಣಾಧಿಕಾರಿಯೇ ಇಲ್ಲ. ಪ್ರಥಮ ದರ್ಜೆ ಸಹಾಯಕರಿಗೆ ಪ್ರಭಾರ ಹುದ್ದೆ ನೀಡುವ ಸ್ಥಿತಿ ಉಂಟಾಗಿದೆ’ ಎಂಬುದು ಇಲಾಖೆಯ ಮಾಹಿತಿ.
ವೃದ್ಧರು ಅಂಗವಿಕಲರಿಗೆ ಕಷ್ಟ
ಕಾರವಾರ ಮತ್ತು ಅಂಕೋಲಾದ ಉಪನೋಂದಣಾಧಿಕಾರಿಗೆ ಕಚೇರಿಗೆ ವೃದ್ಧರು ಅಂಗವಿಕಲರು ತೆರಳಲು ಕಷ್ಟಪಡಬೇಕಾಗಿದೆ. ಎರಡೂ ಕಡೆ ಮೊದಲ ಮಹಡಿಯಲ್ಲಿರುವ ಇಕ್ಕಟ್ಟಾದ ಜಾಗದಲ್ಲಿ ಕಚೇರಿ ಇದೆ. ಇನ್ನೂ ಕೆಲವು ತಾಲ್ಲೂಕುಗಳಲ್ಲಿ ಮೊದಲ ಮಹಡಿಯಲ್ಲಿ ಕಚೇರಿ ಇದ್ದರೂ ಲಿಫ್ಟ್ ಸೌಲಭ್ಯವಿದೆ. ‘ಅಂಕೋಲಾದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಚೇರಿ ನಡೆಸಲಾಗುತ್ತಿದೆ. ಆಡಳಿತಸೌಧದಲ್ಲಿ ಜಾಗ ಸಿಗುವ ಭರವಸೆ ಸಿಕ್ಕಿದೆ. ಕಟ್ಟಡ ನಿರ್ಮಾಣದವರೆಗೆ ಜನರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕಾರವಾರದಲ್ಲಿ ಈಗಿರುವ ಜಾಗದಲ್ಲೇ ಹೊಸ ಕಟ್ಟಡ ನಿರ್ಮಾಣದ ಬಗ್ಗೆ ಯೋಚಿಸಲಾಗುವುದು’ ಎಂದು ಜಿಲ್ಲಾ ನೋಂದಣಾಧಿಕಾರಿ ಶ್ರೀಧರ ಪ್ರತಿಕ್ರಿಯಿಸಿದರು.